Asianet Suvarna News Asianet Suvarna News

ರೆಡ್ ಕಾರ್ಪೆಟ್ ಸ್ಟುಡಿಯೋ 777 ನಡೆಸುತ್ತಿದ್ರು ಪವಿತ್ರಾ ಗೌಡ; ವಿಜಯಲಕ್ಷ್ಮೀಗೆ ಟಾಂಗ್ ಕೊಡೋಕಾ?

ಸದ್ಯ ಪವಿತ್ರಾ ಗೌಡ ಅರೆಸ್ಟ್ ಆದ ಮೇಲೂ ಈ ರೆಡ್ ಕಾರ್ಪೆಟ್ ಸ್ಟುಡಿಯೋ ಬಟ್ಟೆ ಅಂಗಡಿ ಓಪನ್ ಆಗಿ ನಡೆಯುತ್ತಲೇ ಇದೆ ಎನ್ನಲಾಗಿದೆ. ಆದ್ರೆ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಅವರ ಮುಂದಿನ ಬದುಕು..

Actor Darshan friend Pavitra Gowda is running Red Carpet studio 777 in Rajarajeshwari Nagar srb
Author
First Published Jun 15, 2024, 12:13 PM IST

ರೇಣುಕಾ ಸ್ವಾಮಿ ಕೊಲೆ ಕೇಸ್‌ ನಲ್ಲಿ ನಟಿ ಹಾಗು ನಟ ದರ್ಶನ್ (Actor Darshan) ಸ್ನೇಹಿತೆ ಪವಿತ್ರಾ ಗೌಡ (Actress Pavithra Gowda) ಅವರು ಪೊಲೀಸ್ ಕಸ್ಟಡಿಯಲ್ಲಿರುವುದು ಗೊತ್ತೇ ಇದೆ. ಇದೀಗ, ಪವಿತ್ರಾ ಗೌಡ ಒಡೆತನದ ಫ್ಯಾಷನ್ ಡಿಸೈನ್ ಶೋರೂಂ ರೆಡ್ ಕಾರ್ಪೇರ್ಟ್ ಸ್ಟುಡಿಯೋ (Red Carpet Studio 777) ಕಥೆ ಏನಾಯ್ತು ಎಂಬ ಕುತೂಹಲ ಮೂಡತೊಡಗಿದೆ. ಒಂದೂವರೆ ವರ್ಷದ ಹಿಂದೆ ಆರಂಭ ಅಗಿದ್ದ ರೆಡ್ ಕಾರ್ಪೆಟ್ ಸ್ಟುಡಿಯೋ, ದರ್ಶನ್ ಮನೆಯಿಂದ ಎರಡು ಕೀ. ಮೀ. ದೂರದಲ್ಲಿದೆ. ಇದೊಂದು ಬಟ್ಟೆ ಅಂಗಡಿ, ಆದರೆ ಹೈ ಫ್ಯಾಷನ್‌ ಬಟ್ಟೆಗಳು ಇಲ್ಲಿ ದೊರೆಯುತ್ತವೆ. 

ಪವಿತ್ರಾ ಗೌಡ ನಟ ದರ್ಶನ್ ವಾಸವಿರುವ ಆರ್‌ಆರ್‌ ನಗರದಲ್ಲೇ ಬಟ್ಟೆ ಅಂಗಡಿ ತೆರೆದಿದ್ದಾರೆ. ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆಯಲು ಸಹಕಾರ ಮಾಡಿದ್ದು ದರ್ಶನ್ ಅವರೇ ಅನ್ನೋ ಮಾತಿದೆ, ನಿಜ ಸಂಗತಿ ಗೊತ್ತಿಲ್ಲ. 'ನೀನೇ ಮುಂದೆ ನಿಂತು ಈ ಬಟ್ಟೆ ಅಂಗಡಿ ನಡೆಸು ಅಂತ ಪವಿತ್ರಾಗೆ ದರ್ಶನ್ ಹೇಳಿದ್ರಂತೆ ಎಂಬ ಮಾತಿದೆ. ಹೀಗಾಗಿ ರೆಡ್ ಕಾರ್ಪೆಟ್ ಸ್ಟುಡಿಯೋ ಓಪನಿಂಗ್‌ಗೆ ದರ್ಶನ್ ಹಾಘು ಅವರ ಆಪ್ತರೆಲ್ಲಾ ಬಂದಿದ್ರು ಎನ್ನಲಾಗಿದೆ.

ಮುಂಗಾರು ಮಳೆ ಜೋಡಿ ಹೊಸ ಸಿನಿಮಾಗೆ ಆಯ್ಕೆಯಾದ 'ಆ ಬಿಗ್ ಸ್ಟಾರ್' ನಟ ಯಾರು?

ಸದ್ಯ ಪವಿತ್ರಾ ಗೌಡ ಅರೆಸ್ಟ್ ಆದ ಮೇಲೂ ಈ ರೆಡ್ ಕಾರ್ಪೆಟ್ ಸ್ಟುಡಿಯೋ ಬಟ್ಟೆ ಅಂಗಡಿ ಓಪನ್ ಆಗಿ ನಡೆಯುತ್ತಲೇ ಇದೆ ಎನ್ನಲಾಗಿದೆ. ಇಬ್ಬರು ಕೆಲಸಗಾರರನ್ನಿಟ್ಟು ಆರ್ಡರ್ ಆಗಿದ್ದನ್ನೆಲ್ಲಾ ಕ್ಲೀಯರೆನ್ಸ್ ಮಾಡುತ್ತಿದ್ದಾರೆ. ರೆಡ್ ಕಾರ್ಪೆಟ್ ಸ್ಟುಡಿಯೋಗೆ ಪವಿತ್ರಾ ಗೌಡ ಕೊನೆಯದಾಗಿ ಬಂದಿದ್ದು ಜೂನ್ 10ರಂದು ಎನ್ನಲಾಗಿದೆ. ವಿಚಾರಣೆ ಮುಗಿದು ಒಮ್ಮೆ ನಟಿ ಪವಿತ್ರಾ  ಗೌಡ ಜೈಲು ಪಾಲಾದ್ರೆ ಈ ರೆಡ್ ಕಾರ್ಪೆಟ್ ಸ್ಟುಡಿಯೋ ಕ್ಲೋಸ್ ಆಗೋ ಸಾಧ್ಯತೆ ದಟ್ಟವಾಗಿದೆ ಎಂಬ ಮಾತಿದೆ. 

'ಇರುವುದೊಂದೇ ಜೀವನ, ಚೆನ್ನಾಗಿ ಬದುಕಿ' ಅಂದ್ರು ಜೂ. ಎನ್‌ಟಿಆರ್‌; ಪಕ್ಕದಲ್ಲಿದ್ದ ರಾಮ್ ಚರಣ್ ಮಾಡಿದ್ದೇನು?

ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಜೊತೆ ಪೈಪೋಟಿಗೆ ಬಿದ್ದು ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆದಿದ್ರು ಪವಿತ್ರಾ ಎಂಬ ಮಾತಿದೆ. ಕಾರಣ, 2021 ರಲ್ಲಿ 'ಮೈ ಫ್ರೆಶ್ ಬಾಸ್ಕೆಟ್' ಅನ್ನೋ ಆನ್ ಲೈನ್ ಶಾಪಿಂಗ್ ಮಾರುಕಟ್ಟೆ ತೆರೆದಿದ್ದರು ವಿಜಯಲಕ್ಷ್ಮಿ. ಇದರ ಮೂಲಕ ಗ್ರಾಹಕರಿಗೆ ನೇರವಾಗಿ ಫ್ರೆಶ್ ತರಕಾರಿಗಳನ್ನ ಸೇಲ್ ಮಾಡೋ ಬ್ಯುಸಿನೆಸ್ ಶುರು ಮಾಡಿದ್ರು. ಇದನ್ನ ನೋಡಿ ಮರು ವರ್ಷವೇ ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆದಿದ್ದ ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಪತ್ನಿಗೆ ತಾನೇನೂ ಕಮ್ಮಿ ಇಲ್ಲ ಎಂದು ತೋರಿಸಲು ಪವಿತ್ರಾ ಗೌಡ ಹೀಗೆ ಮಾಡಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. 

ದರ್ಶನ್-ಪವಿತ್ರಾ ಪರಿಚಯ ಆಗಿದ್ದೆಲ್ಲಿ? ಸಂಜಯ್ ಸಿಂಗ್ ಜತೆ ಡಿವೋರ್ಸ್‌ಗೆ ನಟಿ ಕೊಟ್ಟ ಕಾರಣವೇನು?

ಅದೆಲ್ಲವೂ ಅಂತೆಕಂತೆಗಳೇ. ಆದ್ರೆ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಅವರ ಮುಂದಿನ ಬದುಕು ಏನು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಗಲು ಸಾಧ್ಯವಿಲ್ಲ. ಏಕೆಂದರೆ, ಸ್ವತಃ ಪವಿತ್ರಾ ಗೌಡ ಅವರೇ ಚಾರ್ಜ್‌ಶೀಟ್‌ನಲ್ಲಿ ನಂಬರ್ ಒನ್ ಆರೋಪಿ. ಹೀಗಾಗಿ, ಪವಿತ್ರಾ ಗೌಡ  ಮುಂದಿನ ಭವಿಷ್ಯ ಸದ್ಯಕ್ಕೆ ಅಯೋಮಯ ಎನ್ನಬಹುದು. 

ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?

Latest Videos
Follow Us:
Download App:
  • android
  • ios