ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಮಾಜಿಕ ಜಾಲತಾಣಗಳಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ. 

ವೀಕೆಂಡ್ ಶನಿವಾರವೇ ಚಿತ್ರದ ಹೊಂಬಾಳೆ ಪ್ರೋಡಕ್ಷನ್ ತನ್ನ ಅಧಿಕೃತ ಪೇಜ್ ಅಲ್ಲಿಯೇ ಕೆಜಿಎಫ್-2 ಫಸ್ಟ್ ಲುಕ್ ಬಿಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೆ.ಜಿ.ಎಫ್-2, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಐದೂ ಭಾಷೆಗಳಲ್ಲಿ ಪೋಸ್ಟರ್​ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಕೆಜಿಎಫ್‌-2 ನಲ್ಲಿ ದಾಖಲೆ ಬರೆಯುತ್ತಾರಾ ರಾಕಿ ಭಾಯ್? 

ಪೋಸ್ಟರ್​ನಲ್ಲಿ ವಿಶೇಷವಾಗಿ ಯಶ್​ ಸ್ಟೈಲಿಶ್​ ಲುಕ್​ ಜತೆಗೆ ಸಾಮ್ರಾಜ್ಯ ಮರುಸ್ಥಾಪನೆ(Rebuilding An Empire) ಎಂಬ ಅಡಿಬರಹ ಗಮನ ಸೆಳೆದಿದೆ. ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಗಿ ಇಂದಿಗೆ [ಡಿಸೆಂಬರ್ 21] ಒಂದು ವರ್ಷ ಕಳೆದಿದೆ. ಈ ಖುಷಿಗೆ ಕೆ.ಜಿ.ಎಫ್​ ಚಾಪ್ಟರ್-2 ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎನ್ನಲಾಗ್ತಿದೆ.

1 ವರ್ಷದ ಖುಷಿ ಹಂಚಿಕೊಂಡ ರಾಕಿ ಭಾಯ್
ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಗಿ ಇಂದಿಗೆ [ಡಿಸೆಂಬರ್ 21] ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಫೇಸ್ಬುಕ್ ನಲ್ಲಿ ಯಶ್​ ಖುಷಿ ಹಂಚಿಕೊಂಡಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. 

ಕೆ.ಜಿ.ಎಫ್. ಚಾಪ್ಟರ್ 1 ಹೇಗೆ ನಿಮ್ಮನ್ನು ವಿಸ್ಮಮಯಗೊಳಿಸಿತು? ಈ ಚಿತ್ರದಿಂದ ನೀವು ಹೆಮ್ಮೆ ಪಟ್ಟಂತಹ ಘಟನೆ, ಘಳಿಗೆ ಇದ್ದರೆ ಅದು ಏನು? ಹಂಚಿಕೊಳ್ಳಿ ಎಂದು ಯಶ್​ ಕೇಳಿಕೊಂಡಿದ್ದಾರೆ. ನಿಮ್ಮ ಆ ಅದ್ಭುತ ಘಟನಾವಳಿಗಳನ್ನು, ಆ ನಿಮ್ಮ ಹೆಮ್ಮೆಯ ಕ್ಷಣಗಳನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ನಾನಿದ್ದೇನೆ ಎಂದು ಯಶ್​ ಬರೆದುಕೊಂಡಿದ್ದಾರೆ.