ಬೆಂಗಳೂರು (ನ. 23):  ಬಹುಭಾಷಾ ನಟ, ಕನ್ನಡಿಗ ಕಿಚ್ಚ ಸುದೀಪ್‌ ಅವರು ಇಂಡಸ್‌ 555 ಟಿಎಂಟಿ ಕಂಪನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ನೀಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌.ಶ್ರೀಕಾಂತ್‌ ಅವರು ನೂತನ ರಾಯಭಾರಿ ಕಿಚ್ಚ ಸುದೀಪ್‌ ನಿರ್ವಹಿಸಿರುವ ಹೊಸ ಜಾಹೀರಾತು ಮತ್ತು ಇಂಡಸ್‌ 555-ಡಿ-ಟಿಎಂಟಿ ಸಂಸ್ಥೆಯ ಎಫ್‌ಇ 550-ಡಿ(ಡಕ್ಟಲಿಟಿ) ಗ್ರೇಡ್‌ ಟಿಎಂಟಿ ಉತ್ಪನ್ನವನ್ನು ಬಿಡುಗಡೆ ಮಾಡಿದರು.

2020ನೇ ವರ್ಷದ ಸಾರ್ವತ್ರಿಕ ರಜೆ ಪಟ್ಟಿ ಬಿಡುಗಡೆ: 7 ರಜೆ ನಷ್ಟ!

ಬಳಿಕ ಮಾತನಾಡಿದ ಅವರು, ಇಂಡಸ್‌ ಕಂಪನಿಯ ಸ್ಟೀಲ್‌ ಟ್ರೈಕೋರ್‌ ಸ್ಟೀಲ್‌ ಆಗಿದ್ದು, ಮೂರು ಪದರ ಹೊಂದಿದೆ. ಹೊರಗಿನ ಪದರ ಬೆಂಕಿ ಮತ್ತು ತುಕ್ಕು ಹಿಡಿಯುವುದರಿಂದ ರಕ್ಷಿಸುತ್ತದೆ. ಮಧ್ಯದ ಪದರ ಒತ್ತಡ ತಡೆದುಕೊಂಡು ಭೂಕಂಪದಿಂದ ರಕ್ಷಣೆ ನೀಡುತ್ತದೆ. ಒಳಗಿನ ಪದರ ಗಟ್ಟಿಯಾಗಿದ್ದು, ಕಟ್ಟಡಗಳಿಗೆ ದೃಢತೆ ನೀಡುತ್ತದೆ. ಸಾಮಾನ್ಯವಾಗಿ ಟಿಎಂಟಿ(ಥರ್ಮೋ ಮೆಕಾನಿಕಲಿ ಟ್ರೀಟೆಡ್‌ ಸ್ಟೀಲ್‌) ಎಫ್‌ಇ 500 ದರ್ಜೆಯದ್ದಾಗಿದೆ. ಆದರೆ ಇಂಡಸ್‌ ಟಿಎಂಟಿ ಎಫ್‌ಇ 550 ಡಕ್ಟಲಿಟಿ ಗ್ರೇಡ್‌ ಆಗಿರುವುದರಿಂದ ಇದು ಶೇ.6ರಷ್ಟುಸೀಲ್‌ ಬಳಕೆ ಕಡಿಮೆ ಮಾಡಿ ಕಟ್ಟಡ ಅನವಶ್ಯಕ ತೂಕ ಹೊರುವುದನ್ನು ತಪ್ಪಿಸುತ್ತದೆ ಎಂದು ಹೇಳಿದರು.

ಚಲನಚಿತ್ರ ನಟ ಸುದೀಪ್‌ ಮಾತನಾಡಿ, ನಮ್ಮಿಂದ ಇತರರಿಗೆ ಉಪಕಾರವಾಗಬೇಕು. ಅಂತಹ ಉಪಯುಕ್ತವಾದ ಉತ್ಪನ್ನಗಳ ಜಾಹೀರಾತು ಮಾತ್ರ ಒಪ್ಪಿಕೊಳ್ಳುತ್ತೇನೆ. ಈ ಕಾರಣದಿಂದಲೇ ನಾನು ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸುವುದಿಲ್ಲ. ಎಫ್‌ಇ 500 ಸ್ಟೀಲ್‌ ಉತ್ಪನ್ನ ಬಾಳಿಕೆ ನಮ್ಮ ನಂಬಲಾರ್ಹವಾಗಿದೆ ಎಂದರು.