ಎಲ್ಲವನ್ನೂ ನೇರವಾಗಿ, ಸ್ಪಷ್ಟವಾಗಿ ಹೇಳುವ ಕಂಗನಾ ಈ ಬಾರಿ ಟ್ವೀಟ್ ಮೂಲಕ ಬಾಲಿವುಡ್ ಸಹುದ್ಯೋಗಿಗಳಿಗೇ ಮಾತಿನ ಚಾಟಿ ಬೀಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿಡಿಯೋ ವೈರಲ್ ಆಗಿತ್ತು. ಘಟನೆ ಬಗ್ಗೆ ವಿಷಾದಿಸಿದ ಸೆಲೆಬ್ರಿಟಿಗಳ ಕಡೆ ಕೆಂಗಣ್ಣು ಬೀರಿರೋ ಕಂಗನಾ ಅಮೆರಿಕದಲ್ಲಾಗಿತ್ತು ಕಾಣುತ್ತೆ, ನಮ್ಮಲ್ಲಿ ಆಗೋ ದೌರ್ಜನ್ಯಗಳು ಕಾನಸ್ತಿಲ್ವಾ ಎಂದು ವ್ಯಂಗ್ಯ ಮಾಡಿದ್ದಾರೆ.

ಸ್ತಳೀಯವಾಗಿ ನಡೆಯುವ ದೌರ್ಜನ್ಯಗಳು ನಿಮಗೆ ಕಾಣಿಸುತ್ತಿಲ್ಲ, ಅಮೆರಿಕದಲ್ಲಿ ಆಗೋ ದೌರ್ಜನ್ಯವನ್ನು ಖಂಡಿಸುತ್ತಿದ್ದೀರಾ ಎಂದು ಟೀಕೆ ಮಾಡಿದ್ದಾರೆ. ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್ ಸೇರಿ ಹಲವು ಪ್ರಮುಖರು ಅಮೆರಿಕದಲ್ಲಾದ ಘಟನೆ ಬಗ್ಗೆ ವಿಶಾದ ವ್ಯಕ್ತಪಡಿಸಿದ್ದರು.

ಪಾಲ್ಘರ್‌ ಸಾಧುಗಳ ಬಡಿದು ಹತ್ಯೆ: ಕೇಂದ್ರ ಸರ್ಕಾರ ರಂಗ ಪ್ರವೇಶ!

ಕೆಲವೇ ವಾರಗಳ ಹಿಂದೆ ಸಾಧುಗಳ ಮೇಲೆ ದೌರ್ಜನ್ಯವಾಗಿತ್ತು. ಅದು ಹೆಚ್ಚಿನ ಸೆಲೆಬ್ರಿಟಿಗಳು ವಾಸಿಸುವ ಮುಂಬೈನಲ್ಲಿಯೇ ನಡೆದಿತ್ತು. ಆದರೆ ಅದನ್ನು ಟೀಕಿಸಿದ ಸೆಲೆಬ್ರಿಟಿಗಳು ಚೀಪ್ ಪಬ್ಲಿಸಿಟಿಗಾಗಿ ಅಮೆರಿಕ ಘಟನೆಯನ್ನು ಖಂಡಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಗುಲಾಮಗಿರಿ ಇದು ಎಂದು ವ್ಯಂಗ್ಯ ಮಾಡಿದ್ದಾರೆ.

ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದರಂತೆ ಮಹೇಶ್ ಭಟ್!

ಈ ಬಗ್ಗೆ ರಾಜಕಾರಣಿ ಒಮರ್ ಅಬ್ದುಲ್ಲ ಕೂಡಾ ಟ್ವೀಟ್ ಮಾಡಿ, ಅಮೆರಿಕದ ಘಟನೆಗೆ ಟ್ವೀಟ್ ಮಾಡಿದ ನಿಮ್ಮ ಬಗ್ಗೆ ಗೌರವ ಇದೆ.ಆದರೆ ಅಮೆರಿಕದವರಿಗಾಗಿ ಟ್ವೀಟ್ ಮಾಡುವಾಗ ಭಾರತೀಯರಿಗಾಗಿ ಟ್ವೀಟ್ ಮಾಡುವುದು ಸಾಧ್ಯವಾಗಿಲ್ಲವೇ ಎಂದು ಟೀಕಿಸಿದ್ದಾರೆ.