ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದರಂತೆ ಮಹೇಶ್ ಭಟ್!

First Published 10, May 2020, 10:00 PM

ಸಿನಿಮಾರಂಗದಲ್ಲಿ ಪರಸ್ಪರ ಜಗಳ ಕಾಮನ್‌. ಅದರಲ್ಲೂ ಕೆಲವು ಸ್ಟಾರ್‌ಗಳಂತೂ ಹಾವು ಮುಂಗಸಿಯ ತರ ಕಿತ್ತಾಡುವುದನ್ನು ನೋಡಿದ್ದೇವೆ. ಸಿಕ್ಕ ಅವಕಾಶಗಳನ್ನು ಬಿಡದೆ ಒಬ್ಬರ ಮೇಲೆ ಒಬ್ಬರು ದೂರುತ್ತಿರುತ್ತಾರೆ. ಬಾಲಿವುಡ್‌ನ ಕಂಗನಾ ಹಾಗೂ ಅಲಿಯಾರ ನಡುವಿನ ಜಟಾಪಟಿ ಹೊಸದೇನೂ ಅಲ್ಲ. ಕಂಗನಾ ಅಲಿಯಾರನ್ನು ಕೆಣಕುತ್ತಲೇ ಇರುವುದು ಸುದ್ದಿಯಾಗುತ್ತಿರುತ್ತದೆ. ಕಂಗನಾಳ ತಂಗಿ ರಂಗೋಲಿ ಸಹ ಅಕ್ಕನಂತೆ ತನ್ನ ಮಾತುಗಳಿಂದ ವಿವಾದಕ್ಕೆ ಒಳಾಗುತ್ತಿರುತ್ತಾರೆ ಆಗಾಗ. ಕಂಗನಾಳ ಮೇಲೆ ಚಪ್ಪಲಿ ಮಹೇಶ್ ಭಟ್ ಎಸೆದಿದ್ದರು ಎಂದು ರಂಗೋಲಿ ಹಿಂದೊಮ್ಮೆ ಕಿಡಿಕಾರಿದ್ದು ಈಗ ಮತ್ತೆ ಆ ವಿಷಯಕ್ಕೆ ಜೀವ ಬಂದು ವೈರಲ್‌ ಆಗಿದೆ.

ರಣಾವತ್ ಸಹೋದರಿಯರು ಮತ್ತು ಭಟ್ ಕುಟುಂಬದ ನಡುವಿನ ಮಾತುಗಳ ಯುದ್ಧ ಹೆಡ್‌ಲೈನ್‌ನಲ್ಲಿ ಜಾಗ ಪಡೆದುಕೊಳ್ಳುತ್ತಿದೆ. ಈ ರಣಾವತ್  ಮತ್ತು ಭಟ್ ನಡುವಿನ ಸಮರ ಸದ್ಯಕ್ಕೆ ಕೊನೆಗೊಳ್ಳುವ ಹಾಗೆ ಕಾಣುತ್ತಿಲ್ಲ.

ಕಂಗನಾ ರಣಾವತ್ ಮತ್ತು ರಂಗೋಲಿ ಆಗಾಗ್ಗೆ ಆಲಿಯಾಳ ನಟನಾ ಕೌಶಲ್ಯವನ್ನು ಟೀಕಿಸಿದ್ದು ‘ನೆಪೋ-ಗ್ಯಾಂಗ್’ ಮೆಂಬರ್‌ ಎಂದು ಕರೆದಿದ್ದಾರೆ.

ಸಂದರ್ಶನವೊಂದರಲ್ಲಿ ಆಳಿಯಾಗೆ ಕಂಗನಾ ನೀನು ಯಶಸ್ಸು ಮಾತ್ರ ಕಾಣುವುದಲ್ಲ, ಇತರ ವಿಚಾರಗಳ ಬಗ್ಗೆಯೂ ದನಿ ಎತ್ತು ಎಂದು ಹೇಳಿದ್ದರು .

ಹಣದ ಮೇಲೆ ಮಾತ್ರ ಗಮನ ಹರಿಸಿದರೆ, ಯಶಸ್ಸಿಗೆ ಯಾವುದೇ ಅರ್ಥ ಇಲ್ಲ ಎಂದೂ ಕರೆ ನೀಡಿದ್ದರು.

ಕಂಗನಾಳನ್ನು ಮೊದಲು ತನ್ನನ್ನು ಲಾಂಚ್‌ ಮಾಡಿದ ಭಟ್ ಮೇಲೆ ವಾಗ್ದಾಳಿ ಮಾಡಿದ್ದಕ್ಕಾಗಿ ಆಲಿಯಾ ತಾಯಿ ಸೋನಿ ರಜ್ದಾನ್ ಒಮ್ಮೆ ಕಂಗನಾಳ ಮೇಲೆ ಗುಡುಗಿದ್ದರು.

ಸರಣಿ ಟ್ವೀಟ್ ಮಾಡಿದ್ದ ರಂಗೋಲಿ, ಮಹೇಶ್ ಭಟ್ ಕಂಗನಾ ಮೇಲೆ ಚಪ್ಪಲಿ ಎಸೆದ ಆರೋಪ ಮಾಡಿದ್ದಳು.

2006ರಲ್ಲಿ ವೊಹ್ ಲಮ್ಹೆಯ ಸ್ಕ್ರೀನಿಂಗ್ ಸಮಯದಲ್ಲಿ 19 ವರ್ಷದ ಕಂಗನಾ ಮೇಲೆ ಮಹೇಶ್ 'ಚಪ್ಪಲಿ' ಎಸೆದು ಅವಳನ್ನು ಮನೆಗೆ ಕಳುಹಿಸಿದ್ದರು ಎಂಬುವುದು ರಂಗೋಲಿ ಆರೋಪ.

'ಕಂಗನಾಗೆ ಬ್ರೇಕ್ ನೀಡಿದ್ದು ಮಹೇಶ್ ಭಟ್ ಅಲ್ಲ, ಆದರೆ ಅನುರಾಗ್ ಬಸು ಎಂದು ರಂಗೋಲಿ ಹೇಳಿದ್ದರು.

ಕಂಗನಾ ಚಿತ್ರರಂಗದಲ್ಲಿ ಉಳಿದುಕೊಂಡಿರುವುದು ಅವರ ಪ್ರತಿಭೆಯಿಂದಾಗಿ, ಇತರರು ತಮ್ಮ ಶುಗರ್‌ ಡ್ಯಾಡಿಗಳನ್ನು ಅವಲಂಬಿಸುತ್ತಿದ್ದಾರೆ ಎಂದು ರಂಗೋಲಿ ಆರೋಪಿಸಿದ್ದರು.

ಟ್ವೀಟ್‌ಗಳು ಮತ್ತು ಪ್ರತ್ಯುತ್ತರಗಳನ್ನು ನೋಡಿದಾಗ, ಇದು ರಂಗೋಲಿಯ ಖಾತೆಯಿಂದ ಕಂಗನಾ ಟ್ವೀಟ್ ಮಾಡಿರಬಹುದು ಎಂದು ನೆಟಿಜನ್‌ಗಳು ಹೇಳಿದ್ದಾರೆ.

ಇಷ್ಟೆಲ್ಲ ಆದರೂ ಆಲಿಯಾ ಮಾತ್ರ ಕಂಗನಾಗೆ ಪ್ರತಿಕ್ರಿಯೆ ನೀಡಿಲ್ಲ. ನಾನು ಅವಳನ್ನು ಗೌರವಿಸುತ್ತೇನೆ. ಆಕೆ ಚೆನ್ನಾಗಿ ಮಾತನಾಡುತ್ತಾಳೆ ಎಂದೇ ಆಲಿಯಾ ಹೇಳುತ್ತಾರೆ.

loader