* ಕಲಾಸೇವಕರು, ಕಲಾವಿದರ ಸಲುವಾಗಿ ನಿಧಿ ಸಂಗ್ರಹ ಮಾಡಲು ತೀರ್ಮಾನ * ಕರೆಗೆ ಸ್ಪಂದಿಸಿದ ರಘು ದೀಕ್ಷಿತ್, ರಾಜೇಶ ಕೃಷ್ಣನ್‌, ಗುರುಕಿರಣ್, ಸೇರಿದಂತೆ ನಾಡಿನ ಕಲಾವಿದರು* ಸಂಗ್ರಹವಾಗುವ ಹಣ ಕಲಾವಿದರ ಬ್ಯಾಂಕ್ ಖಾತೆಗೆ ಜಮೆ 

ಬೆಂಗಳೂರು(ಜೂ.24): ಕೋವಿಡ್‌ನಿಂದಾಗಿ ಆರ್ಕೇಸ್ಟ್ರಾ, ಸಂಗೀತ ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಲಾವಿದರು ಕಷ್ಟದಲ್ಲಿದ್ದಾರೆ. ಕಲಾವಿದರ ನೆರವಿಗಾಗಿ ಕಲಾನಿಧಿ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದೇವೆ. ಕಲಾಸೇವಕರು, ಕಲಾವಿದರ ಸಲುವಾಗಿ ನಿಧಿ ಸಂಗ್ರಹ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. 

ಇಂದು(ಗುರುವಾರ) ನಗರದ ಡಿಸಿಎಂ ಅಶ್ವಥ್ ನಾರಾಯಣ್ ಅವರ ನಿವಾಸದಲ್ಲಿ ಡಿಸಿಎಂ ಮತ್ತು ಗಾಯಕ ವಿಜಯ ಪ್ರಕಾಶ್ ಹಾಗೂ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕಲಾವಿದರು, ಕಲಾವಿದರಿಂದ ಕಲಾವಿದರಿಗಾಗಿ ಆನ್‌ಲೈನ್‌ ಕನ್ಸರ್ಟ್‌ ಮಾಡಲು ತಿರ್ಮಾನ ಮಾಡಲಾಗಿದೆ. ಆನ್‌ಲೈನ್‌ ಕನ್ಸರ್ಟ್‌ನಲ್ಲಿ ಆರ್ಥಿಕ ಸಹಾಯಧನ ನೀಡಲು ಅವಕಾಶ ಕೊಡಲಾಗಿದೆ. ಅದರಿಂದ ಸಂಗ್ರಹವಾಗುವ ಹಣವನ್ನು ಕಲಾವಿದರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ನಾಳೆಯಿಂದ Online Concert Live performance ಇರಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಕನ್ಸರ್ಟ್‌ ಇರಲಿದೆ. ಡಿಸಿಎಂ ಅಶ್ವಥ್ ನಾರಾಯಣ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಸೋಸಿಯಲ್ ಮಿಡಿಯಾದ ವಿವಿಧ ಮಾಧ್ಯಮಗಳಲ್ಲಿ ಕನ್ಸರ್ಟ್‌ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

ನಟ ಚೇತನ್ ಅಹಿಂಸ ಪರ ನಿಂತ ಕಿರಣ್ ಶ್ರೀನಿವಾಸ್; 'ವಿರೋಧವಿದ್ದರೂ ಚರ್ಚಿಸೋಣ'!

ಖ್ಯಾತ ಬಾಲಿವುಡ್‌ ಗಾಯಕ ಸೋನು ನಿಗಮ್ ಅವರು ಬೆಂಗಳೂರಿಗೆ ಬಂದು ಹಾಡಿ ಹೋಗಿದ್ದಾರೆ. ಶಂಕರ್ ಮಹಾದೇವನ್, ಹರಿಹರನ್ ಅವರು ಸಹ ಹಾಡಿದ್ದಾರೆ. ನಾಳೆಯಿಂದ ಈ ಕನ್ಸರ್ಟ್‌ ಪ್ರಸಾರವಾಗಲಿದೆ ಎಂದು ಗಾಯಕ ವಿಜಯಪ್ರಕಾಶ ಹೇಳಿದ್ದಾರೆ. 

ಕಲಾನಿಧಿ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಇದಾಗಿದೆ. ಕಲಾವಿದರಿಗೆ ಸಹಾಯ ಮಾಡುವ ಯತ್ನ ಮಾಡಿದ್ದೇವೆ. ರಘು ದೀಕ್ಷಿತ್, ರಾಜೇಶ ಕೃಷ್ಣನ್‌, ಗುರುಕಿರಣ್, ಸೇರಿದಂತೆ ನಾಡಿನ ಕಲಾವಿದರು ನಮ್ಮ ಕರೆಗೆ ಸ್ಪಂದಿಸಿದ್ದಾರೆ. ಎಲ್ಲಾ ಪ್ರಮುಖ ಗಾಯಕರು ಹಾಡಿದ್ದಾರೆ. ಅದ್ಭುತವಾದ ಕಲಾನಿಧಿ ಕಾರ್ಯಕ್ರಮ ಪ್ರಸಾರವಾದಾಗ ಸಹಕಾರ ಮಾಡಬೇಕು. ಸೂಕ್ತ ಧನಸಹಾಯ ಮಾಡುವ ಮೂಲಕ ಸಹಕಾರ ಮಾಡಬೇಕು ಅಂತ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.