Asianet Suvarna News Asianet Suvarna News

ಅಂತಾರಾಷ್ಟ್ರೀಯ ಯೋಗ ದಿನ: ವಿಶ್ವ ಸಂಭ್ರಮಿಸಿದ್ದು ಹೀಗೆ...

ಭಾರತದ ಕೊಡುಗೆಯಾದ ಯೋಗದ ಮಹತ್ವ ತಿಳಿದು, ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಪ್ರತಿಯೊಂದೂ ದೇಶದಲ್ಲೂ ಸೂರ್ಯ ನಮಸ್ಕಾರ ಸೇರೆ ಕೆಲವು ಆಸನಗಳನ್ನು ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗಿದೆ. ಎಲ್ಲಿ, ಆಚರಣೆ ಹೇಗಿತ್ತು?

International Yoga day observed all over the world
Author
Bengaluru, First Published Jun 21, 2019, 4:12 PM IST

ಬೆಂಗಳೂರು (ಜು.21): ಭಾರತೀಯರ ಕೊಡುಗೆಯಾದ ಯೋಗಕ್ಕೆ ವಿಶ್ವ ಮಾನ್ಯತೆ ಕೊಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಆದರೆ, ವೈಯಕ್ತಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಗೆ ಬೇಕಾದ ಯೋಗ ಪ್ರತಿಯೊಬ್ಬರ ಬದುಕಿನ ಅಂಗವಾದರೆ ಮಾತ್ರ ನಿರೀಕ್ಷಿತ ಯಶಸ್ಸು ಸಿಗಬಹುದು. ಇದನ್ನು ಮನಗೊಂಡ ವಿಶ್ವವೇ ಯೋಗಕ್ಕೆ ಮಾರು ಹೋಗಿದ್ದು, ಯೋಗ ದಿನಕ್ಕೆ ಮನ್ನಣೆ ನೀಡುತ್ತಿದೆ. ವಿಶ್ವದೆಲ್ಲೆಡೆ ಈ ದಿನವನ್ನು ಯೋಗ ಮಾಡುವ ಮೂಲಕ, ಯೋಗವನ್ನು ಕಲಿಯಲು ಆರಂಭಿಸುವ ಅಥವಾ ಕಲಿಯಲು ಪ್ರೇರೇಪಿಸುವ ಮೂಲಕವೇ ಆಚರಿಸಲಾಗುತ್ತಿದೆ. 

ಯೋಗ ಮಾಡಿ ಬಂದರೆ ದಿನ ವೇತನ ಹೆಚ್ಚಳ

ಮನುಷ್ಯನ ಸಮಗ್ರ ಆರೋಗ್ಯಕ್ಕೆ ಹಾಗೂ ಶಾಂತ ಮನಸ್ಸಿಗೆ ಅಗತ್ಯವಾದ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸುವ ಅಂತಾರಾಷ್ಟ್ರೀಯ ಯೋಗ ದಿನದ ಈ ವರ್ಷದ ಘೋಷ ವಾಕ್ಯ 'ಹೃದಯದ ಆರೋಗ್ಯಕ್ಕಾಗಿ ಯೋಗ...' ಚಿಕ್ಕ ವಯಸ್ಸಿನಲ್ಲಿಯೇ ಹೃದ್ರೋಗಕ್ಕೆ ತುತ್ತಾಗುವುದು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಯೋಗಾಭ್ಯಾಸ ಅನಿವಾರ್ಯ. 

ಯೋಗ ದಿನ ನಡೆದು ಬಂದ ದಾರಿ

ಮೋದಿಯ ಒತ್ತಡದಿಂದ ಇಂಥದ್ದೊಂದು ದಿನ ಆಚರಿಸಲಾಗುತ್ತಿದೆ ಎಂದು, 'ಇದೊಂದು ಮೀಡಿಯಾ ಇವೆಂಟ್..' ಎಂದು ಕಾಂಗ್ರೆಸ್ಸಿಗರು ಕುಹಕವಾಡುತ್ತಿದ್ದರೂ, ವಿಶ್ವದೆಲ್ಲೆಡೆ ಯೋಗ ದಿನವನ್ನು ಗಂಭೀರವಾಗಿ ಪರಿಗಣಿಸಿ, ಸಡಗರ, ಸಂಭ್ರಮದಿಂದಲೇ ಆಚರಿಸಲಾಗಿದೆ. 

ಯಾವ ದೇಶದಲ್ಲಿ ಈ ದಿನವನ್ನು ಹೇಗೆ ಆಚರಿಸಲಾಯಿತು, ಇಲ್ಲಿದೆ ಝಲಕ್...
ರಾಂಚಿಯಲ್ಲಿ ಮೋದಿ ಯೋಗ
 

 

ನೇಪಾಳದಲ್ಲಿ
 

 

ಶ್ರೀಲಂಕಾದಲ್ಲಿ 
 

ಸೌದಿ ಅರೇಬಿಯಾ

ಮಯನ್ಮಾರ್‌ನಲ್ಲಿ
 

ಗಲ್ಫ್ ರಾಷ್ಟ್ರಗಳಲ್ಲಿ

ಸಿಂಗಾಪುರದಲ್ಲಿ

ಬಾಂಗ್ಲಾದೇಶದಲ್ಲಿ

ಚೀನಾದಲ್ಲಿ

ಗಾಂಜೌನಲ್ಲಿ

ಆಫ್ಘಾನಿಸ್ತಾದಲ್ಲಿ

ಬೂತಾನ್‌ನಲ್ಲಿ

ಇಸ್ರೇಲಿನಲ್ಲಿ

ಉಜುಬೇಕಿಸ್ತಾನ್

ಕೊರೆಯುವ ಚಳಿಯಲ್ಲೇ ಯೋಗ ಮಾಡಿದ ಸೈನಿಕರು

International Yoga day observed all over the world 

Follow Us:
Download App:
  • android
  • ios