ವಿಶ್ವ ಯೋಗ ದಿನದ ನಿಮಿತ್ತ ಮುಂಜಾನೆ ಒಂದು ಗಂಟೆ ಯೋಗ ಮಾಡಿ ಕಚೇರಿಗೆ ಆಗಮಿಸುವ ನೌಕರರಿಗೆ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಕಚೇರಿಗಳು ಒಂದು ದಿನದ ವೇತನವನ್ನು ಹೆಚ್ಚುವರಿಯಾಗಿ ನೀಡಲಿವೆ. ಅಲ್ಲದೇ ಆಯ್ದ ನೌಕರರಿಗೆ ಬಂಪರ್‌ ಉಡುಗೊರೆಗಳು ಸಿಗಲಿವೆ.

ಯೋಗ ದಿನಾಚರಣೆ ನಡೆದು ಬಂದ ಹಾದಿ

ಇಷ್ಟೇ ಅಲ್ಲ ಸತತ ಒಂದು ತಿಂಗಳು ಯೋಗ ಮಾಡಿ ಕಚೇರಿಗೆ ಬರುವ ಸರ್ಕಾರಿ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಯೋಗ ಮಾಡಿದಕ್ಕೆ ನೌಕರರು ಫೋಟೋ ಹಾಗೂ ವಿಡಿಯೋಗಗಳನ್ನು ತೋರಿಸಿಬೇಕು. ಅಲ್ಲದೇ ಒಂದು ತಿಂಗಳಿನಲ್ಲಿ 10 ಕೆ.ಜಿ.ಯಷ್ಟು ತೂಕ ಇಳಿಕೆ ಆಗಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಸುಳ್ ಸುದ್ದಿ  ಮೂಲಗಳು ತಿಳಿಸಿವೆ.