ನವದೆಹಲಿ[ಜೂ. 21]  ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ಪ್ರಪಂಚವೇ ಸ್ಪಂದಿಸಿದೆ.  ರಾಂಚಿಯಲ್ಲಿ ಪ್ರಧಾನಿ ಮೋದಿ 40 ಸಾವಿರ ಜನರೊಂದಿಗೆ ಸೇರಿ ಯೋಗ ಪ್ರದರ್ಶನ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಾತ್ರ ಯೋಗ ದಿನದಲ್ಲೂ ತಮ್ಮ ಭಿನ್ನ ರಾಗ ಹಾಡಿದ್ದಾರೆ.

ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮಾಡುತ್ತ ದಿಗ್ವಿಜಯ್ ಸಿಂಗ್ ಯೋಗ ದಿನವನ್ನು ಪ್ರಧಾನಿ ಒಂದು ಮೀಡಿಯಾ ಇವೆಂಟ್ ಆಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಯೋಗ ದಿನಾಚರಣೆ ನಡೆದು ಬಂದ ಹಾದಿ

ನರೇಂದ್ರ ಮೋದಿ ಇದನ್ನು ಮಾಧ್ಯಮಗಳಿಗೋಸ್ಕರವೇ ಮಾಡುತ್ತಿರುವಂತಿದೆ. ಪ್ರತಿಯೊಬ್ಬ ಮನುಷ್ಯನ ದೇಹರಚನೆ ಬೇರೆಯಾಗಿರುತ್ತದೆ. ಸರಿಯಾದ ಮಾರ್ಗದರ್ಶಕರನ್ನು ಇಟ್ಟುಕೊಂಡು ಯೋಗ ಮಾಡಬೇಕು.ಇಲ್ಲವಾದಲ್ಲಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಬೀರಬಲ್ಲದು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿಕೆಯನ್ನು ಉಲ್ಲೇಖ ಮಾಡಿರುವ ಸಿಂಗ್ ಮೋದಿ ಇವೆಂಟ್ ಮ್ಯಾನೇಜರ್ ಮಾತ್ರ ಅಲ್ಲ ಅವರೊಬ್ಬ ಅತ್ಯುತ್ತಮ ಮೀಡಿಯಾ ಮ್ಯಾನೇಜರ್ ಎಂದು ವ್ಯಂಗ್ಯವಾಡಿದ್ದಾರೆ.