ಭಾರತೀಯ ಮೂಲದ ಅಮೇರಿಕನ್ ಬ್ಯುಸಿನೆಸ್ ಲೀಡರ್ ಹಾಗೂ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರ ಮಂತ್ರ ಪಠಣದ ಆಲ್ಬಮ್ 'ತ್ರಿವೇಣಿ'ಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಈ ಆಲ್ಬಮ್ ಪ್ರಾಚೀನ ಮಂತ್ರಗಳನ್ನು ವಿಶ್ವ ಸಂಗೀತದೊಂದಿಗೆ ಮಿಶ್ರಣ ಮಾಡುತ್ತದೆ.
ನವದೆಹಲಿ (ಫೆ.3): ಭಾರತೀಯ ಮೂಲದ ಅಮೇರಿಕನ್ ಬ್ಯುಸಿನೆಸ್ ಲೀಡರ್ ಹಾಗೂ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಭಾನುವಾರ ತಮ್ಮ ಮಂತ್ರ ಪಠಣದ ಆಲ್ಬಮ್ ತ್ರಿವೇಣಿಗಾಗಿ ಪ್ರತಿಷ್ಠಿತ ಗ್ರ್ಯಾಮಿ ಪುರಸ್ಕಾರ ಜಯಿಸಿದ್ದಾರೆ. ಪ್ರಾಚೀನ ಮಂತ್ರಪಠಣಗಳನ್ನು ವಿಶ್ವ ಸಂಗೀತದೊಂದಿಗೆ ಬೆರೆಸುವ ಆಲ್ಬಮ್ ಇದಾಗಿದ್ದಯ 67ನೇ ಆವೃತ್ತಿಯ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ದೊಡ್ಡ ಪುರಸ್ಕಾರಕ್ಕೆ ಭಾಜನವಾಗಿದೆ. 71 ವರ್ಷದ ಟಂಡನ್, ಬೆಸ್ಟ್ ನ್ಯೂ ಏಜ್, ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಮ್ ವಿಭಾಗದಲ್ಲಿ ತಮ್ಮ ಇತ್ತೀಚಿನ ಸಹಯೋಗದ ಆಲ್ಬಮ್‌ಗಾಗಿ ಗ್ರಾಮಫೋನ್ ಸ್ಟೈಲ್‌ನ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಏಳು ಟ್ರ್ಯಾಕ್‌ಗಳ ಈ ಆಲ್ಬಮ್ ಟಂಡನ್ ಹೇಳುವ ಪ್ರಕಾರ "ಇನ್ನರ್ ಹೀಲಿಂಗ್" ಎಂದು ಕರೆದ ಧ್ಯಾನಸ್ಥ ಪ್ರಯಾಣದ ಗುರಿಯನ್ನು ಹೊಂದಿದೆ.
ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರೊಂದಿಗೆ ಸೇರಿ ಮೂರು ವಿಭಿನ್ನ ಶೈಲಿಗಳನ್ನು ಪ್ರತಿನಿಧಿಸುವುದರ ಜೊತೆಗೆ, ಹಳೆಯ ವೈದಿಕ ಪಠಣಗಳನ್ನು ಪ್ರಸ್ತುತಪಡಿಸಿದರು. "ಸಂಗೀತ ಎಂದರೆ ಪ್ರೀತಿ, ಸಂಗೀತವು ನಮ್ಮೆಲ್ಲರೊಳಗೆ ಬೆಳಕನ್ನು ಬೆಳಗಿಸುತ್ತದೆ ಮತ್ತು ನಮ್ಮ ಕತ್ತಲೆಯ ದಿನಗಳಲ್ಲಿಯೂ ಸಹ ಸಂಗೀತವು ಸಂತೋಷ ಮತ್ತು ನಗುವನ್ನು ಹರಡುತ್ತದೆ" ಎಂದು ಲಾಸ್ ಏಂಜಲೀಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಅವರು ಹೇಳಿದರು.
ಚೆನ್ನೈನಲ್ಲಿ ಸಾಂಪ್ರದಾಯಿಕ ಮಧ್ಯಮ ವರ್ಗದ ಮನೆಯಲ್ಲಿ ಬೆಳೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದ ಚಂದ್ರಿಕಾ ಕೃಷ್ಣಮೂರ್ತಿ ಟಂಡನ್ ಮತ್ತು ಅವರ ತಂಗಿ ಇಂದ್ರ ಅವರ ಸುತ್ತಲೂ ಸಂಗೀತ ತುಂಬಿತ್ತು. ಕುಟುಂಬವು ಸಾಮವೇದದ ಬೋಧನೆಗಳಲ್ಲಿ ಬೇರೂರಿದ್ದರಿಂದ, ಕರ್ನಾಟಕ ಸಂಗೀತದ ಜೊತೆಗೆ ವೈದಿಕ ಪಠಣಗಳು ಮನೆಯ ಸಾಂಪ್ರದಾಯಿಕ ಶಿಕ್ಷಣದ ಒಂದು ಭಾಗವಾಗಿತ್ತು.
ಇಂದ್ರಾ ನೂಯಿ ಪೆಪ್ಸಿಕೋವನ್ನು 12 ವರ್ಷಗಳ ಕಾಲ ಸಿಇಒ ಆಗಿ ಮುನ್ನಡೆಸಿದರು ಮತ್ತು ವಿಶ್ವದ 50 ಅತ್ಯಂತ ಶಕ್ತಿಶಾಲಿ ಬ್ಯುಸಿನೆಸ್ ವುಮೆನ್‌ಗಳಲ್ಲಿಒಬ್ಬರೆನಿಸಿಕೊಂಡಿದ್ದರು. ಟಂಡನ್ ಮೆಕಿನ್ಸೆಯಲ್ಲಿ ಮೊದಲ ಭಾರತೀಯ-ಅಮೇರಿಕನ್ ಮಹಿಳಾ ಪಾಲುದಾರರಾಗಿದ್ದರು ಮತ್ತು ನ್ಯೂಯಾರ್ಕ್ ಮೂಲದ ಟಂಡನ್ ಕ್ಯಾಪಿಟಲ್ ಅಸೋಸಿಯೇಟ್ಸ್ ಅನ್ನು ರಚಿಸಿದರು, ಇದು ಸಂಸ್ಥೆಗಳ ಪುನರ್ರಚನೆಯನ್ನು ನೋಡಿಕೊಳ್ಳುವ ಸಂಸ್ಥೆಯಾಗಿದೆ.
ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದಿರುವ ಟಂಡನ್, ಜಾಗತಿಕ ವ್ಯಾಪಾರ ನಾಯಕಿ ಮತ್ತು ಸಮಾಜ ಸೇವಕು ಕೂಡ ಆಗಿದ್ದಾರೆ, ಅವರು ತಮ್ಮ ಪತಿ ರಂಜನ್ ಅವರೊಂದಿಗೆ 2015 ರಲ್ಲಿ ನ್ಯೂಯಾರ್ಕ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ಗೆ $100 ಮಿಲಿಯನ್ ದೇಣಿಗೆ ನೀಡಿದ್ದರು. ಸಂಸ್ಥೆ ಈಗ ತನ್ನ ಹೆಸರಿನೊಂದಿಗೆ ಟಂಡನ್ ಅನ್ನು ಸೇರಿಸಿಕೊಂಡಿದೆ.ಶಾಸ್ತ್ರೀಯ ಗಾಯಕಿ ಶುಭ್ರಾ ಗುಹಾ ಮತ್ತು ಗಾಯಕ ಗಿರೀಶ್ ವಜಲ್ವಾರ್ ಅವರಿಂದ ಸಂಗೀತವನ್ನು ಕಲಿತ ಟಂಡನ್, 2010 ರಲ್ಲಿ ತಮ್ಮ ಓಂ ನಮೋ ನಾರಾಯಣ: ಸೋಲ್ ಕಾಲ್ ಆಲ್ಬಮ್‌ಗಾಗಿ ತಮ್ಮ ಮೊದಲ ಗ್ರ್ಯಾಮಿಗೆ ನಾಮನಿರ್ದೇಶನಗೊಂಡಿದ್ದರು/ ಈ ವರ್ಷ ಅವರು ನಿರ್ಮಾಪಕ ರಿಕಿ ಕೇಜ್, ಸಿತಾರ್ ವಾದಕಿ ಅನುಷ್ಕಾ ಶಂಕರ್ ಮತ್ತು ಭಾರತೀಯ ಮೂಲದ ಬ್ರಿಟಿಷ್ ಕಲಾವಿದೆ ರಾಧಿಕಾ ವೆಕರಿಯಾ ಅವರೊಂದಿಗೆ ನಾಮನಿರ್ದೇಶನಗೊಂಡಿದ್ದರು.
ಕರ್ನಾಟಕ ಸರ್ಕಾರವನ್ನ ಶ್ಲಾಘಿಸಿದ ಬಾಲಿವುಡ್ ನಟಿ ಕಾಜೋಲ್!
ಈಗ ಸುಮಾರು 11 ಬಾರಿ ನಾಮನಿರ್ದೇಶನಗೊಂಡಿರುವ ಶಂಕರ್, ಮತ್ತೊಮ್ಮೆ ಚಿನ್ನದ ಗ್ರಾಮಫೋನ್ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.ಅವರ ಮಲಸಹೋದರಿ ನೋರಾ ಜೋನ್ಸ್, ಪಂಡಿತ್ ರವಿಶಂಕರ್ ಅವರ ಮಗಳು, ವಿಷನ್ಸ್‌ಗಾಗಿ ಅತ್ಯುತ್ತಮ ಸಾಂಪ್ರದಾಯಿಕ ಪಾಪ್ ಗಾಯನ ಆಲ್ಬಮ್ ಪ್ರಶಸ್ತಿಯನ್ನು ಪಡೆದರು, ಇದು ಅವರ ಒಂಬತ್ತನೇ ಸ್ಟುಡಿಯೋ ಆಲ್ಬಮ್ - ಹಲವಾರು ಪ್ರಕಾರಗಳ ಸಂಯೋಜನೆಯಾಗಿದೆ.
ಕರ್ನಾಟಕದ ಸೊಸೆ ಇಂದ್ರಾ ನೂಯಿ ವಿಶ್ವ ಬ್ಯಾಂಕ್ ಅಧ್ಯಕ್ಷೆ?
