ಕರ್ನಾಟಕ ಸರ್ಕಾರದ 'ಘನತೆಯಿಂದ ಸಾಯುವ ಹಕ್ಕು' ನಿರ್ಧಾರಕ್ಕೆ ಕಾಜೋಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಕ್ರಮವು ಮಾರಕ ಕಾಯಿಲೆ ಪೀಡಿತರಿಗೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. 'ಸಲಾಮ್ ವೆಂಕಿ' ಚಿತ್ರದ ಸಂದೇಶಕ್ಕೆ ಈ ನಿರ್ಧಾರವನ್ನು ಜೋಡಿಸಿದ್ದಾರೆ.
ಬೆಂಗಳೂರು (ಫೆ.3): ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ಅನುಮೋದಿಸುವ ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರಕ್ಕೆ ಬಾಲಿವುಡ್ ನಟಿ ಕಾಜೋಲ್ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸಿದ್ದು, ಇದೊಂದು ಐತಿಹಾಸಿಕ ನಡೆ ಎಂದು ಕರೆದಿದ್ದಾರೆ. ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಾಜೋಲ್, 'ಕರ್ನಾಟಕ ಸರ್ಕಾರ ಮಾರಕ ಕಾಯಿಲೆಯಿಂದ ಬಳಲುತ್ತಿರುವವರಿಗೆ 'ಘನತೆಯಿಂದ ಸಾಯುವ ಹಕ್ಕನ್ನು' ಅನುಮತಿಸುತ್ತದೆ' ಎಂಬ ಶೀರ್ಷಿಕೆಯೊಂದಿಗೆ ಪತ್ರಿಕೆಯ ವರದಿಯ ತುಣುಕನ್ನು ಹಂಚಿಕೊಂಡಿದ್ದಾರೆ.
"ಐತಿಹಾಸಿಕ ಕ್ರಮವೊಂದರಲ್ಲಿ, ಕರ್ನಾಟಕವು ಮಾರಕ ಕಾಯಿಲೆ ಪೀಡಿತ ರೋಗಿಗಳಿಗೆ 'ಘನತೆಯಿಂದ ಸಾಯುವ ಹಕ್ಕು' ಮೂಲಕ ಕಾನೂನು ಚೌಕಟ್ಟನ್ನು ರೂಪಿಸಿದ ಭಾರತದ ಮೊದಲ ರಾಜ್ಯವಾಗಿದೆ. ಇದು ಕುಟುಂಬಗಳಿಗೆ ಮಾನವೀಯ, ಕಾನೂನುಬದ್ಧವಾಗಿ ಅನುಮೋದಿತ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. #righttodiewithdignity #salaamvenky" ಎಂದು ಬರೆದಿದ್ದಾರೆ."
ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು ಆಸ್ಪತ್ರೆಗಳು ಮತ್ತು ಜಿಲ್ಲೆಗಳಲ್ಲಿ ಮಾರಕ ಕಾಯಿಲೆ ಪೀಡಿತ ರೋಗಿಗಳಿಗೆ 'ಘನತೆಯಿಂದ ಸಾಯುವ ಹಕ್ಕನ್ನು' ನಿರ್ಣಯಿಸಲು ಮತ್ತು ಪ್ರಮಾಣೀಕರಿಸಲು ಮಂಡಳಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
ಚೇತರಿಕೆಯ ಭರವಸೆ ಇಲ್ಲದ ವ್ಯಕ್ತಿಗಳಿಗೆ ಅಥವಾ ಜೀವ ಉಳಿಸುವ ಚಿಕಿತ್ಸೆಯಿಂದ ಇನ್ನು ಮುಂದೆ ಪ್ರಯೋಜನ ಪಡೆಯದ ನಿರಂತರ ಒಂದೇ ಸ್ಥಿತಿಯಲ್ಲಿರುವವರಿಗೆ ಇದು ಅನ್ವಯಿಸುತ್ತದೆ. ಅಂತಹ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಹಿಂತೆಗೆದುಕೊಳ್ಳುವ ಅಥವಾ ತಡೆಹಿಡಿಯುವ ಕುರಿತು ಸುಪ್ರೀಂ ಕೋರ್ಟ್ ಜನವರಿ 2023ರಂದು ಮೈಲಿಗಲ್ಲಿನ ತೀರ್ಪು ನೀಡಿತ್ತು. ಅದರ ಬೆನ್ನಲ್ಲಿಯೇ ಕರ್ನಾಟಕ ಸರ್ಕಾರ ಈ ನಿರ್ಧಾರ ಮಾಡಿದೆ.
50 ವರ್ಷ ಕಳೆದ ನಂತರವೂ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿಯರು
ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕಾಜೋಲ್ ತಮ್ಮ 'ಸಲಾಮ್ ವೆಂಕಿ' ಚಿತ್ರದ ಮೂಲ ಸಂದೇಶಕ್ಕೆ ಜೋಡಿಸಿದ್ದಾರೆ. ಈ ಚಿತ್ರವು ಗೌರವಾನ್ವಿತ ಸಾವಿನ ಹಕ್ಕಿಗಾಗಿ ಕಾನೂನು ಹೋರಾಟವನ್ನು ಚಿತ್ರಿಸುತ್ತದೆ. ಚಿತ್ರದಲ್ಲಿ, ಸ್ನಾಯುಕ್ಷಯದಿಂದ ಬಳಲುತ್ತಿರುವ ಮಗನ ಹಾಗೂ ತಾಯಿಯ ಹೋರಾಟವನ್ನು ಚಿತ್ರಿಸಲಾಗಿದೆ. ಚಿತ್ರದಲ್ಲಿ ಆತ ತನ್ನ ಆಯ್ಕೆಗಾಗಿ ಹೋರಾಡುತ್ತಾನೆ.
ಕೃಷ್ಣವರ್ಣದ ಬೆಡಗಿಯರಿಗೊಪ್ಪುವ ಕಾಜೋಲ್‌ರಿಂದ ಪ್ರೇರಿತವಾದ 7 ಸುಂದರ ಸೀರೆಗಳು
ಕಾಜೋಲ್ ಕೊನೆಯ ಬಾರಿಗೆ ಕೃತಿ ಸನೋನ್ ಜೊತೆಗೆ ದೋ ಪತ್ತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

