ವಧುವಿನ ಕೈಗೆ ಸಿಗದಷ್ಟು ಎತ್ತರಕ್ಕೆ ವರನ ಎತ್ತಿದ ಗೆಳೆಯರು ಮದುವೆಯಲ್ಲಿ ಸ್ನೇಹಿತರ ಕಿತಾಪತಿ ವೈರಲ್‌ ಹೂ ಹಾರ ಹಾಕಲು ಬಿಡದ ಸ್ನೇಹಿತರು

ಭಾರತೀಯ ಮದುವೆಗಳ (Indian Wedding) ಸಾಕಷ್ಟು ಭಿನ್ನ ವಿಭಿನ್ನ ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಮದುವೆ ಅಂದ ಮೇಲೆ ಅಲ್ಲಿ ಸಂಭ್ರಮ ಸಂತಸ ಮನೆ ಮಾಡಿರುತ್ತದೆ. ಮದುವೆಯ ದಿನ ಸ್ನೇಹಿತರು ಬಂಧುಗಳು ಮಾಡುವ ತುಂಟಾಟ ಕಪಿಚೇಷ್ಟೆಗಳಿಗೆ ಲೆಕ್ಕವೇ ಇರುವುದಿಲ್ಲ. ವಧು ಹಾಗೂ ವರನ ಗೆಳೆಯರು(Friends) , ಸಮ ವಯಸ್ಕ ಸಂಬಂಧಿಗಳು ಮದುವೆ ದಿನ ಮಾಡುವ ಕಿತಾಪತಿಗೆ ಲೆಕ್ಕವಿರುವುದಿಲ್ಲ. ತಮ್ಮ ಗೆಳೆಯನಿಗೆ ಅಥವಾ ಗೆಳತಿಗೆ ತರಲೆ ಮಾಡಲು ಸಿಗುವ ಕೊನೆ ಅವಕಾಶ ಇದೇ ಎಂದು ಭಾವಿಸುವ ಸ್ನೇಹಿತರು ಎಷ್ಟು ಸಾಧ್ಯವೋ ಅಷ್ಟು ತರಲೆಗಳನ್ನು ಮಾಡಿ ಮದುವೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮದುವೆಯಲ್ಲಿ ವರನ ಗೆಳೆಯರ ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. 

ವೈವಿಧ್ಯ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಮದುವೆಗಳಿಗೆ ಒಂದೊಂದು ಕಡೆ ಒಂದೊಂದು ಸಂಪ್ರದಾಯವಿರುತ್ತದೆ. ಅದೇ ರೀತಿ ವಧು ವರ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಳ್ಳುವುದು ಮದುವೆಯ ಒಂದು ಪ್ರಮುಖ ಘಟ್ಟ ಈ ಸಂದರ್ಭದಲ್ಲಿ ಕೂಡ ಅನೇಕ ಕಿತಾಪತಿಗಳನ್ನು ಮಾಡಲು ಗೆಳೆಯ ಗೆಳತಿಯರು ಸಜ್ಜಾಗಿರುತ್ತಾರೆ. ಇಲ್ಲಿ ನಾವು ತೋರಿಸುತ್ತಿರುವ ವಿಡಿಯೋದಲ್ಲೂ ಅದೇ ಆಗಿದೆ. ವಧು ಹಾರ ಹಾಕಲು ಬರುತ್ತಿದ್ದಂತೆ ವರನ ಕಡೆಯ ಹುಡುಗರು ವರನನ್ನು ಆಕೆಯ ಕೈಗೆ ಎಟುಕದಷ್ಟು ಎತ್ತರಕ್ಕೆ ವರನನ್ನು ಮೇಲೆತ್ತುತ್ತಾರೆ. ಆದರೆ ಆತನನ್ನು ಕೆಳಗಿಳಿಸಿ ಎಂದು ವಧು ಒಮ್ಮೆ ಕೇಳುತ್ತಾಳೆ. ಆದರೆ ಸ್ನೇಹಿತರು ಮಾತ್ರ ವರನನ್ನು ಕೆಳಗಿಳಿಸಲು ಮುಂದಾಗುವುದಿಲ್ಲ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ವಧು ಕೆಲವು ಸೆಕೆಂಡ್‌ಗಳ ಕಾಲ ಕಾದು ಕೆಳಗಿಳಿಸದಿದ್ದರೆ ಕತ್ತೆ ಬಾಲ ಎಂಬಂತೆ ರಿಯಾಕ್ಷನ್ ನೀಡಿ ಸೀದಾ ಹೋಗಿ ಚೇರೊಂದರ ಮೇಲೆ ಕೂರುತ್ತಾಳೆ. ಈ ತಮಾಷೆಯ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

View post on Instagram

ರಾಣಿಯಂತೆ ಎಂಟ್ರಿ ಕೊಟ್ಟ ವಧು: ವಿಡಿಯೋ ವೈರಲ್


ವಧು (Bride) ಹಾಗೂ ವರ (Groom) ಇಬ್ಬರು ಮದುವೆ ಧಿರಿಸಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ದುಲ್ಹಾನಿಯಾ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಹತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆ ಎಂಬುದು ಬದುಕಿನ ಒಂದು ಸುಂದರ ಕ್ಷಣ. ಮದುವೆಯ ನಂತರ ಬಹುತೇಕರ ಬದುಕು ಜೀವನ ಶೈಲಿ ಬದಲಾಗುತ್ತದೆ. ಎರಡು ಜೋಡಿಗಳು ಜೊತೆಯಾಗಿ ಜೀವನ ಪೂರ್ತಿ ಸಾಗಲು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಲು ತಮ್ಮ ತಮ್ಮಲೇ ಬದಲಾವಣೆಗಳನ್ನು ತಂದುಕೊಂಡು ಮುಂದೆ ಸಾಗಬೇಕಾಗುತ್ತದೆ. ಈ ಕಾರಣ ಮದುವೆಯೆಂಬುದು ಬಹುತೇಕರ ಬದುಕಿನಲ್ಲಿ ದೊಡ್ಡ ಮೈಲುಗಲ್ಲಾಗುವುದು. 

ಅರ್ಧದಲ್ಲೇ ಬಿದ್ದೋಯ್ತು ಮಧುವಣಗಿತ್ತಿಯ ಗೌನ್‌..

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಅತ್ತೆಯೊಬ್ಬರು ವಿಧವೆಯಾದ ಸೊಸೆಯನ್ನು ಮಗಳಂತೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಂಡನ ಮರಣದ ನಂತರ ಸೊಸೆಯು ಮದುವೆಗೆ ಸಿದ್ಧಳಾಗಿರಲಿಲ್ಲ, ಆದರೆ ಅತ್ತೆಗೆ ಆಕೆಯ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು. ಮಗನ ತಿಥಿಯಂದೇ, ಅತ್ತೆ ತನ್ನ ಸೊಸೆಗೆ ಬಆಕೆಯ ಭವಿಷ್ಯದ ಬಗ್ಗೆ ವಿವರಿಸಿದ್ದಾರೆ. ಸೊಸೆ ಒಪ್ಪಿಕೊಂಡ ಬಳಿಕ, ಅತ್ತೆ ಮಾವ ಸೇರಿ ಆಕೆಗೆ ಸಂಬಂಧ ಹುಡುಕಲು ಮುಂದಾಗಿದ್ದಾರೆ. ಇದಾದ ನಂತರ ನಾಗ್ಪುರದಲ್ಲಿ ನೆಲೆಸಿರುವ ಹುಡುಗನೊಂದಿಗೆ ಸೊಸೆಯ ಸಂಬಂಧವನ್ನು ನಿಶ್ಚಯಗೊಳಿಸಲಾಗಿದೆ. ಅಕ್ಷಯ ತೃತೀಯ ದಿನದಂದು ನಾಗ್ಪುರದಲ್ಲಿ ಸೊಸೆಯ ಮದುವೆಯಾಗಿದೆ. ಅತ್ತೆ ಮಾವ ಖುದ್ದು ತಾವೇ ಮುಂದೆ ನಿಂತು ಸೊಸೆಗೆ ಮದುವೆ ಮಾಡಿಸಿದ್ದಾರೆ.