Asianet Suvarna News Asianet Suvarna News

ಇಷ್ಟೊಂದು ಬ್ಲ್ಯಾಕ್ ಕ್ಯಾಟ್ಸ್ ಒಟ್ಟೊಟ್ಟಿಗೆ ಬಂದಿದ್ದೆಲ್ಲಿಗೆ?

ಸಿನಿಮಾಗಳು ಜನರನ್ನು ಆಕರ್ಷಿಸುತ್ತವೆ. ಹಿಟ್ ಸಿನಿಮಾ ಭಾಗವಾಗಬೇಕೆಂದು ಜನರು ಬಯಸ್ತಾರೆ. ತಮ್ಮ ಜೊತೆ ತಮ್ಮ ಪ್ರಾಣಿಗಳೂ ಸಿನಿಮಾದಲ್ಲಿ ಕಾಣಿಸಿಕೊಳ್ಬೇಕೆಂಬ ಬಯಕೆ ಹೊಂದಿರುತ್ತಾರೆ. ಹಿಂದೆ ಕೂಡ ಸಿನಿಮಾಕ್ಕೆ ನಡೆದ ಬೆಕ್ಕಿನ ಆಡಿಷನ್ ಒಂದು ಈಗ ಸುದ್ದಿ ಮಾಡ್ತಿದೆ.  
 

Hollywood Horror Film Tales Of Terror One Fifty Two Black Cats Audition Viral Photo roo
Author
First Published Oct 16, 2023, 11:57 AM IST

ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಬಹುತೇಕ ಎಲ್ಲರಿಗೂ ಇರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ತೆರೆ ಮೇಲೆ ಕಾಣಿಸಿಕೊಂಡಾಗ ಅವರಿಗೇನೋ ವಿಶೇಷ ಖುಷಿ. ಕೆಲವರು ನಟ – ನಟಿಯಾಗ್ಬೇಕೆಂದು ಸಾಕಷ್ಟು ಪ್ರಯತ್ನನಡೆಸುತ್ತಾರೆ. ಸೂಪರ್ ಸ್ಟಾರ್ ಆಗಲು ಹಗಲಿರುಳು ಶ್ರಮಿಸ್ತಾರೆ. ಹಿರೋ, ಹಿರೋಯಿನ್ ಸ್ಥಾನ ಬೇಡ, ದೊಡ್ಡ ಸಿನಿಮಾಗಳಲ್ಲಿ ಚಿಕ್ಕ ಪಾತ್ರ ಸಿಕ್ಕಿದ್ರೂ ಸಾಕು, ಡಾನ್ಸ್ ಮಾಡುವ ಅವಕಾಶ ಸಿಕ್ಕಿದ್ರೂ ಸಾಕು ಎಂದುಕೊಳ್ಳುವವರಿದ್ದಾರೆ. ಮತ್ತೆ ಕೆಲವರು ತಮ್ಮ ಊರು, ತಮ್ಮ ಮನೆ ಟಿವಿಯಲ್ಲಿ ಬಂದ್ರೂ ಖುಷಿಯಾಗ್ತಾರೆ. ಪ್ರಾಣಿ ಪ್ರಿಯರು, ತಮ್ಮ ಪ್ರಾಣಿ ಸಿನಿಮಾದಲ್ಲಿ, ಧಾರಾವಾಹಿಯಲ್ಲಿ ಇಲ್ಲ ಟಿವಿಯಲ್ಲಿ ಕಾಣಿಸಿಕೊಳ್ಳಲಿ ಎಂಬ ಆಸೆಯನ್ನು ಹೊಂದಿರುತ್ತಾರೆ.

ಸಿನಿಮಾ (Movie) ಗಳಲ್ಲಿ ನೀವು ಸಾಕಷ್ಟು ವೆರೈಟಿ ನೋಡ್ಬಹುದು. ರೋಮ್ಯಾಂಟಿಕ್ ಚಿತ್ರ, ಫೈಟಿಂಗ್ ಸಿನಿಮಾ, ಸಸ್ಪೆನ್ಸ್ ಸಿನಿಮಾ, ಹಾರರ್ ಸಿನಿಮಾ ಹೀಗೆ ಬೇರೆ ಬೇರೆ ಸಿನಿಮಾಗಳನ್ನು ನೀವು ನೋಡ್ತಿರುತ್ತೀರಿ. ಹಾರರ್ (Horror) ಸಿನಿಮಾ ಬೇರೆ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆ. ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಭಯ ಹುಟ್ಟಿಸೋದು ಮುಖ್ಯವಾಗುತ್ತದೆ. ಹಾಗಾಗಿಯೇ ವಸ್ತ್ರ ವಿನ್ಯಾಸದಿಂದ ಹಿಡಿದು ಧ್ವನಿ ಟ್ರ್ಯಾಕ್‌ನವರೆಗೆ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಜನರನ್ನು ಹೆದರಿಸಲು ಹೆಜ್ಜೆಗುರುತುಗಳು, ಗಾಢ ನೆರಳುಗಳು ಮತ್ತು ಭೂತದ ಧ್ವನಿಗಳನ್ನು  ಬಳಸಲಾಗುತ್ತದೆ. ಹಾರರ್ ಚಿತ್ರದಲ್ಲಿ ನೀವು ಅತಿ ಹೆಚ್ಚಾಗಿ ನೋಡುವ ಪ್ರಾಣಿ ಅಂದ್ರೆ ಅದು ಬೆಕ್ಕು (Cat) . ಅದ್ರಲ್ಲೂ ಕಪ್ಪು ಬೆಕ್ಕು. 

ಇತಿಹಾಸದಲ್ಲಿ ಇದೇ ಮೊದಲು ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಇಬ್ಬರು ಟ್ರಾನ್ಸ್‌ಜೆಂಡರ್‌ ಗಳು!

ನಮ್ಮ ಭಾರತೀಯ ಹಾರರ್ ಸಿನಿಮಾಗಳಿಗಿಂತ ಹಾಲಿವುಡ್‌ ಹಾರರ್ ಸ್ವಲ್ಪ ಭಿನ್ನವಾಗಿರುತ್ತದೆ. ಸಿನಿಮಾಕ್ಕೆ ಈಗ ಆಡಿಷನ್ ಮಾಡೋದು ಕೂಡ ಸುಲಭ. ಮೊಬೈಲ್ ಗಳಲ್ಲಿ ವಿಡಿಯೋ ಕಳುಹಿಸಿಯೇ ಅರ್ಥ ಆಡಿಷನ್ ಆಗಿರುತ್ತದೆ. ಆದ್ರೆ ಹಿಂದೆ ಹಾಗಿರಲಿಲ್ಲ. ಆಡಿಷನ್ ಸ್ಥಳಕ್ಕೆ ಹೋಗಿ, ನಮ್ಮ ಕಲೆ ತೋರಿಸ್ಬೇಕಿತ್ತು. ಆಡಿಷನ್ ಗೆ ಮನುಷ್ಯರು ಹೋಗೋದು ಮಾಮೂಲಿ. ಆದ್ರೆ ಹಾಲಿವುಡ್ ನ ಒಂದು ಚಿತ್ರಕ್ಕೆ ಕಪ್ಪು ಬೆಕ್ಕಿನ ಪಾತ್ರಕ್ಕಾಗಿ ಆಡಿಷನ್ ನಡೆಸಲಾಗಿತ್ತು. ಆ ಸಿನಿಮಾ ಆಡಿಷನ್ ಫೋಟೋಗಳು ಈಗ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿವೆ.

ಇದು ಈಗ ನಡೆದ ಆಡಿಷನ್ ಅಲ್ಲ. 1962 ರಲ್ಲಿ ನಡೆದ ಸಿನಿಮಾ ಆಡಿಷನ್. 1962 ರಲ್ಲಿ  ಟೇಲ್ಸ್ ಆಫ್ ಟೆರರ್  ಎಂಬ ಭೂತದ ಚಿತ್ರ ಬಿಡುಗಡೆಯಾಯಿತು. ಅದರ ನಿರ್ದೇಶಕರು ಚಿತ್ರದಲ್ಲಿ ಎಲ್ಲವನ್ನೂ ನೈಜವಾಗಿ ತೋರಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಕಪ್ಪು ಬೆಕ್ಕಿನ ಪಾತ್ರಕ್ಕೆ ಆಡಿಷನ್ ಮಾಡಿದ್ರು. 

ರೇಷ್ಮೆ ಸೀರೆಯುಟ್ಟು ನಾಚಿದ ವೈಷ್ಣವಿ, ಸೀರೆಲಿ ಹುಡುಗೀನಾ ನೋಡಲೇಬಾರದು ಎಂದ ಫ್ಯಾನ್ಸ್‌!

ಪತ್ರಿಕೆಯಲ್ಲಿ ಜಾಹೀರಾತು : ಯಾರಾದರೂ ತಮ್ಮ ಬೆಕ್ಕನ್ನು ಸಿನಿಮಾದಲ್ಲಿ ನೋಡಲು ಬಯಸಿದ್ರೆ ಆಡಿಷನ್ ಗೆ ಬರಬಹುದು ಎಂದು  ಚಿತ್ರದ ನಿರ್ಮಾಪಕರು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಇದರ ನಂತರ, ಜನರು ತಮ್ಮ ಬೆಕ್ಕುಗಳೊಂದಿಗೆ ಹಾಲಿವುಡ್‌ನ ಎನ್ ಬ್ರಾನ್ಸನ್ ಅವೆನ್ಯೂವನ್ನು ತಲುಪಿದ್ದರು. 

ಆಡಿಷನ್ ಗೆ ಬಂದ ಬೆಕ್ಕೆಷ್ಟು ಗೊತ್ತಾ? :  ಪತ್ರಿಕೆಯಲ್ಲಿ ಹಾಕಿದ್ದ ಈ ಜಾಹೀರಾತಿಗೆ ಜನರು ಸ್ಪಂದಿಸುತ್ತಾರೆಂದು ನಿರ್ಮಾಪಕರು ಅಂದುಕೊಂಡಿರಲಿಲ್ಲ. ಆದ್ರೆ ಅವರ ನಿರೀಕ್ಷೆ ಸುಳ್ಳಾಗಿತ್ತು. ಈ ಆಡಿಷನ್ ಗೆ 152 ಬೆಕ್ಕುಗಳು ಬಂದಿದ್ದವು. ಸ್ಟುಡಿಯೋ ಹೊರಗೆ ಬೆಕ್ಕುಗಳ ಕತ್ತಿಗೆ ಒಂದು ಬೆಲ್ಟ್ ಹಾಕಿ ಅದನ್ನು ಹಿಡಿದುಕೊಂಡು ನಿಂತಿದ್ದರು. ಅದೇ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಸ್ಟುಡಿಯೋ ಮುಂದೆ ಬೆಕ್ಕಿನ ಜೊತೆ ನಿಂತಿದ್ದ ಮಾಲಿಕರ ಫೋಟೋವನ್ನು ರಾಲ್ಫ್ ಕ್ರೇನ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.  ಸುಮಾರು 62 ವರ್ಷಗಳ ಹಿಂದೆ ನಡೆದ ಆಡಿಷನ್ ಇದು. ಈಗ ಈ ಫೋಟೋ ಇನ್ಸ್ಟಾದಲ್ಲಿ ಸದ್ದು ಮಾಡ್ತಿದೆ. ಆರು ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ವೀಕ್ಷಿಸಿದ್ದಾರೆ. 
 

Follow Us:
Download App:
  • android
  • ios