ಗೌತಮಿ ಕಪೂರ್ ತಮ್ಮ 16 ವರ್ಷದ ಮಗಳಿಗೆ ಪ್ಲೆಶರ್ ಟಾಯ್ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಮಗಳು ಆಶ್ಚರ್ಯಚಕಿತಳಾಗಿದ್ದರೂ, ನಂತರ ತಾಯಿಯ ಯೋಚನೆಯನ್ನು ಪ್ರಶಂಸಿಸಿದ್ದಾಳೆ. ಗೌತಮಿ ತಮ್ಮ ಬಾಲ್ಯದ ಲೈಂಗಿಕ ದೌರ್ಜನ್ಯದ ಘಟನೆಯನ್ನೂ ಹಂಚಿಕೊಂಡಿದ್ದಾರೆ.
ಗೌತಮಿ ಕಪೂರ್ ತಮ್ಮ ಮಗಳು ಸಿಯಾ ಕಪೂರ್ ಅವರ 16 ನೇ ಹುಟ್ಟುಹಬ್ಬದಂದು ಆಕೆಗೆ ಪ್ಲೆಶರ್ ಟಾಯ್ ಉಡುಗೊರೆಯಾಗಿ ನೀಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಕೇಳಿದಾಗ ಸಿಯಾಗೆ ನಂಬಲು ಸಾಧ್ಯವಾಗಲಿಲ್ಲ. ಮಗಳು ತನ್ನ ತಾಯಿಗೆ 'ಅಮ್ಮಾ, ನಿನಗೇನಾಗಿದೆ' ಎಂದು ಆಶ್ಚರ್ಯಚಕಿತಳಾಗಿ ಕೇಳಿದಾಗ, ಗೌತಮಿ ತನ್ನ ಮಗಳಿಗೆ 'ನೀನು ಇದರ ಬಗ್ಗೆ ಯೋಚಿಸು' ಎಂದರು. "ನೀವು ಯಾಕೆ ಪ್ರಯೋಗ ಮಾಡಬಾರದು?, ಎಲ್ಲಾ ನಿಷೇಧಗಳ ಹೊರತಾಗಿಯೂ ಈ ಗಿಫ್ಟ್ ಕೊಟ್ಟಿದ್ದಕ್ಕೆ ನನ್ನನ್ನು ಮಗಳು ಪ್ರಶಂಸಿಸುತ್ತಾಳೆ" ಎಂದಿದ್ದಾರೆ.
ಪ್ರಶಂಸೆ ವ್ಯಕ್ತಪಡಿಸಿದ ಮಗಳು
ಗೌತಮಿ ಕಪೂರ್ ಹಾಟರ್‌ಫ್ಲೈ ಜೊತೆ ಮಾತನಾಡುವಾಗ ಈ ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. 'ನನ್ನ ಮಗಳಿಗೆ 16 ವರ್ಷ ತುಂಬಿದಾಗ, ನಾನು ಅವಳಿಗೆ ಒಂದು ಉಡುಗೊರೆ ನೀಡಬೇಕಾಗಿ ಬಂದಿದ್ದು ತುಂಬಾ ತಮಾಷೆಯಾಗಿದೆ' ಎಂದು ನಟಿ ಹೇಳಿದ್ದಾರೆ. ಆಕೆಗೆ ಏನು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ?, ಒಂದು ಪ್ಲೆಶರ್ ಟಾಯ್ ತಂದುಕೊಡಬೇಕೇ ಎಂದು ಯೋಚಿಸಿದೆ?, ನಾನು ಆಕೆಯೊಂದಿಗೆ ಇದರ ಬಗ್ಗೆ ಮಾತನಾಡಿದಾಗ, ಆಶ್ಚರ್ಯ ವ್ಯಕ್ತಪಡಿಸಿದಳು. ನಾನು 'ಆಲೋಚಿಸಿ ನೋಡು' ಅಂದೆ. ಎಷ್ಟು ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಇಂತಹ ಉಡುಗೊರೆಯನ್ನು ನೀಡುವ ಬಗ್ಗೆ ಮಾತನಾಡಲು ಸಿದ್ಧರಿರುತ್ತಾರೆ?, ಇಂದು ನನ್ನ ಮಗಳಿಗೆ 19 ವರ್ಷ ಮತ್ತು ನಾನು ಈ ರೀತಿ ಯೋಚಿಸಿದ್ದಕ್ಕೆ ಆಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ ಎಂದು ಗೌತಮಿ ತಿಳಿಸಿದ್ದಾರೆ.
ಗೌತಮಿ ಕಪೂರ್ ಜನಪ್ರಿಯ ನಟ ರಾಮ್ ಕಪೂರ್ ಅವರ ಪತ್ನಿ . ಗೌತಮಿ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು 'ಘರ್ ಏಕ್ ಮಂದಿರ್', 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಮತ್ತು 'ಪರ್ವರೀಶ್ 2' ನಂತಹ ಹಲವಾರು ಜನಪ್ರಿಯ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಘಟನೆ ಹಂಚಿಕೊಂಡ ಗೌತಮಿ
ಗೌತಮಿ ಕಪೂರ್ ಇತ್ತೀಚೆಗೆ ಹಾಟರ್‌ಫ್ಲೈ ಜೊತೆಗಿನ ಸಂಭಾಷಣೆಯಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಘಟನೆಯನ್ನೂ ಸಹ ಹಂಚಿಕೊಂಡಿದ್ದಾರೆ. ತನ್ನ ಶಾಲಾ ದಿನಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಹೇಗೆ ಲೈಂಗಿಕ ಕಿರುಕುಳಕ್ಕೊಳಗಾದೆ ಎಂದು ಹೇಳಿಕೊಂಡಿದ್ದಾರೆ. ನಟಿ ತಾನು 5 ನೇ ವಯಸ್ಸಿನಿಂದ ಶಾಲೆಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ ಮತ್ತು ಆ ದಿನಗಳಲ್ಲಿ ತನಗೆ ಕೆಟ್ಟ ಘಟನೆ ಸಂಭವಿಸಿತು ಎಂದು ಹೇಳಿದ್ದಾರೆ. "ನಾನು ಬಸ್ಸಿನಲ್ಲಿದ್ದೆ... ಆ ಸಮಯದಲ್ಲಿ ನಾನು 6ನೇ ತರಗತಿಯಲ್ಲಿದ್ದೆ ಮತ್ತು ಒಬ್ಬ ವ್ಯಕ್ತಿ ನನ್ನ ಪ್ಯಾಂಟ್‌ಗೆ ಕೈ ಹಾಕಿದನು. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ ಮತ್ತು ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ. ಭಯಭೀತಳಾಗಿ ತಕ್ಷಣ ಬಸ್ಸಿನಿಂದ ಇಳಿದೆ ಮತ್ತು ಸ್ವಲ್ಪ ಸಮಯದವರೆಗೆ ಆ ವ್ಯಕ್ತಿ ನನ್ನನ್ನು ಹಿಂಬಾಲಿಸುತ್ತಿದ್ದಾನೆಯೇ ಎಂದು ಆಶ್ಚರ್ಯ ಪಡುತ್ತಿದ್ದೆ." ಈ ಘಟನೆಯ ನಂತರ ತಾನು ತುಂಬಾ ಹೆದರುತ್ತಿದ್ದೆ ಎಂದು ಗೌತಮಿ ಹೇಳಿದ್ದಾರೆ. ಆದರೆ ಮನೆಗೆ ತಲುಪಿ ಈ ಬಗ್ಗೆ ತನ್ನ ತಾಯಿಗೆ ಹೇಳಿದಾಗ, ಆಕೆಯ ತಾಯಿ ಆಕೆಯನ್ನು ಪ್ರೋತ್ಸಾಹಿಸಿದರು ಮತ್ತು ಇಂತಹ ಘಟನೆಗಳಿಗೆ ಯಾರೂ ಭಯಪಡಬಾರದು ಎಂದು ಹೇಳಿದರು. ಮಹಿಳೆಯರು ತಮ್ಮೊಂದಿಗೆ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಬೇಕು ಮತ್ತು ಇನ್ನೇನೂ ಮಾಡಲು ಆಗದಿದ್ದರೆ ಅವರು ತಮ್ಮ ಶೂ ತೆಗೆದು ಪುರುಷನಿಗೆ ಹೊಡೆಯಬೇಕು ಎಂದು ಗೌತಮಿ ತಿಳಿಸಿದ್ದಾರೆ.


