ಕಿರೀಟಿ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಜೂನಿಯರ್ ಸಿನಿಮಾ ರಿಲೀಸ್ ಆಗಲಿದೆ...
ಜನಾರ್ದನ ರೆಡ್ಡಿ (Janardhan Reddy) ಪುತ್ರ ಕಿರೀಟಿ (Kireeti) ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಎಸ್ ಎಸ್ ರಾಜಮೌಳಿಯವರು ಕ್ಲ್ಯಾಪ್ ಮಾಡಿ ಕಿರೀಟಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಇದೀಗ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಕಿರೀಟಿ ನಾಯಕನಾಗಿ ಚಿತ್ರರಂಗಕ್ಕೆ ಚೊಚ್ಚಲ ಹೆಜ್ಜೆ ಇಟ್ಟಿರುವ ಜೂನಿಯರ್ ಸಿನಿಮಾ ತೆರೆಗೆ ಬರುವ ದಿನಾಂಕ ನಿಗದಿಯಾಗಿದೆ. ಜುಲೈ 18ಕ್ಕೆ ಜೂನಿಯರ್ ಚಿತ್ರ ಬೆಳ್ಳಿಪರದೆ ಅಖಾಡಕ್ಕೆ ಇಳಿಯುತ್ತಿದೆ.
ಪಂಚ ಭಾಷೆಯಲ್ಲಿ ರಿಲೀಸ್:
ಕಿರೀಟಿ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಜೂನಿಯರ್ ಸಿನಿಮಾ ರಿಲೀಸ್ ಆಗಲಿದೆ.
'ಮಾಯಾಬಜಾರ್' ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಜೂನಿಯರ್ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಚಿತ್ರ ಮೂಡಿ ಬಂದಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್.
'ಕ್ರೇಜಿಸ್ಟಾರ್' ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್ ಜೂನಿಯರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರೀಟಿಗೆ ಜೋಡಿಯಾಗಿ ನಟಿ ಶ್ರೀಲೀಲಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಜೂನಿಯರ್ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, 'ಬಾಹುಬಲಿ' ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.
ಸೌಂಡ್ ಮಾಡಿದ್ದ ಇಂಟ್ರೂಡಕ್ಷನ್ ಟೀಸರ್:
ಕಿರೀಟಿ ಅವರನ್ನು ಇಂಟ್ರಡ್ಯೂಸ್ ಮಾಡಲು ಟೀಸರ್ ಒಂದನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್ನಲ್ಲಿ ಸ್ಟಂಟ್ಗಳನ್ನು ಮಾಡಿ ಅವರು ಗಮನ ಸೆಳೆದಿದ್ದರು.
ಇದೇ ತಿಂಗಳ 19ಕ್ಕೆ ಮೊದಲ ಹಾಡು ರಿಲೀಸ್:
ಜೂನಿಯರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಚಿತ್ರತಂಡ ಪ್ರಚಾರದ ಕಾರ್ಯಕ್ಕೂ ಪ್ಲ್ಯಾನ್ ಹಾಕಿಕೊಂಡಿದೆ. ಇದೇ ತಿಂಗಳ 19ಕ್ಕೆ ಮೊದಲ ಹಾಡು ರಿಲೀಸ್ ಮಾಡಿ, ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಡಲಿದೆ.
ಅಂದಹಾಗೆ,
ಸಿನಿಮಾರಂಗದ ಆಕರ್ಷಣೆ, ಎಂಥವರನ್ನೂ ಸೆಳೆದುಬಿಡುತ್ತೆ. ಸದ್ಯ ರಾಜಕಾರಣಿ, ಬಳ್ಳಾರಿ ಗಣಿದಣಿ ಜನಾರ್ಧನರೆಡ್ಡಿ ಪುತ್ರ ಕಿರೀಟಿಗೂ ಇದೇ ಸೆಳೆತ. ಸಿನಿಮಾ ಆಕರ್ಷಣೆಯಲ್ಲಿ ಅಪ್ಪ ದುಡ್ಡಾಕ್ತಾರೆ ನಾನೂ ಹೀರೋ ಆಗ್ತೀನಿ ಅಂತ ಬರಲಿಲ್ಲ. ಸಿನಿಮಾಗೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಕಿರೀಟಿ ರೆಡ್ಡಿ, ತಮ್ಮ ಮೊದಲ ಸಿನಿಮಾಗಾಗಿ ಏನೆಲ್ಲ ಶ್ರಮಪಟ್ಟಿದ್ದಾನೆ ಅನ್ನೋದಕ್ಕೆ ಉದಾಹರಣೆ ಈ ಸಿನಿಮಾದಲ್ಲಿ ಕಾಣಿಸುತ್ತದೆ ಎನ್ನಲಾಗುತ್ತಿದೆ.
ಸಿನಿಮಾ ಇಂಟ್ರೋಡಕ್ಷನ್‌ಗಾಗಿಯೇ ಇಷ್ಟು ಕಷ್ಟ ಪಟ್ಟಿದ್ದಾರೆಂದರೆ ಇನ್ನು ಇಡೀ ಸಿನಿಮಾಗಾಗಿ ಎಷ್ಟೆಲ್ಲಾ ಪರಿಶ್ರಮ ಹಾಕಿರಬಹುದು? ಕಿರೀಟಿ ನಟನೆಯ ಮೊದಲ ಸಿನಿಮಾದ ಇಂಟ್ರಡಕ್ಷನ್ ಟೀಸರ್ ಯೂಟ್ಯೂಬ್ ನಲ್ಲಿ ಈಗ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದಾರೆ.
ಸ್ವತಃ ಬಾಹುಬಲಿ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ಅಷ್ಟೇ ,ನೋವು, ಕಷ್ಟದ ಪರಿಶ್ರಮ ಕೂಡ ಅಡಗಿದೆ ಅನ್ನೋದನ್ನ ಟೀಸರ್ ದೃಶ್ಯಗಳು ಹೇಳುತ್ತಿವೆ.
ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರಡಕ್ಷನ್ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ ಇದಾಗಿದೆ.
ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.


