ಖ್ಯಾತ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಆಧಾರಿತ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅಜಿತ್ ನಟನೆಯ ಮುಂಬರುವ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ವಿಭಿನ್ನ ಭಾಷೆ, ವಿಭಿನ್ನ ಪಾತ್ರ ಹಾಗೂ ವಿಭಿನ್ನ ಜಾನರ್‌ಗಳ ಮೂಲಕ ರಶ್ಮಿಕಾ ತಮ್ಮ ಸಿನಿ ಪಯಣವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.
Rashmika Mandanna selection for Mysaa movie Secret Revealed: ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗಳು ಸತತವಾಗಿ ತೆರೆಗೆ ಬರುತ್ತಿವೆ. ಇತ್ತೀಚೆಗೆ ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಜೊತೆಗೆ ನಟಿಸಿದ್ದ ‘ಕಾಕ್‌ಟೇಲ್ 2’ ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಪತಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿರುವ ‘ರಣಬಾಲಿ’ ಸಿನಿಮಾ ಬಿಡುಗಡೆಯ ನಿರೀಕ್ಷೆ ಹೆಚ್ಚಿಸಿದೆ. ಇದರ ಬೆನ್ನಲ್ಲೇ ರಶ್ಮಿಕಾ ನಟಿಸಿರುವ ವಿಭಿನ್ನ ಹಾಗೂ ಮೊದಲ ಆಕ್ಷನ್ ಸಿನಿಮಾ ‘ಮೈಸಾ’ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

‘ಮೈಸಾ’ ಸಿನಿಮಾವನ್ನು ನಿರ್ದೇಶಿಸಿರುವ ರವೀಂದ್ರ ಪುಲ್ಲೆ ಇದೀಗ ಸಿನಿಮಾ ಮತ್ತು ರಶ್ಮಿಕಾ ಆಯ್ಕೆಯ ಹಿಂದಿನ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಶ್ಮಿಕಾ ಅವರನ್ನು ‘ಮೈಸಾ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲು ಪ್ರಮುಖ ಕಾರಣ ‘ಸೀತಾ ರಾಮಂ’ ಸಿನಿಮಾ ಎಂದು ಹೇಳಿದ್ದಾರೆ.
ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಸೀತಾ ರಾಮಂ’ ಸಿನಿಮಾದಲ್ಲಿ ರಶ್ಮಿಕಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾದಲ್ಲಿ ರವೀಂದ್ರ ಪುಲ್ಲೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ, ಸಹಾಯಕ ಸಂಭಾಷಣೆಕಾರ ಹಾಗೂ ಸೆಕೆಂಡ್ ಯೂನಿಟ್ ನಿರ್ದೇಶಕರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರಂತೆ.

‘ಸೀತಾ ರಾಮಂ’ ಚಿತ್ರೀಕರಣದ ಸಮಯದಲ್ಲಿ ರಶ್ಮಿಕಾ ನಟಿಸಿದ್ದ ಕೆಲವು ದೃಶ್ಯಗಳ ಚಿತ್ರೀಕರಣವನ್ನು ರವೀಂದ್ರ ಅವರೇ ನಿರ್ದೇಶಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ರಶ್ಮಿಕಾ ಅವರ ಕಣ್ಣುಗಳು ತಮಗೆ ಬಹಳ ಇಷ್ಟ ಎಂದು ಹೇಳಿರುವ ರವೀಂದ್ರ, ಅಂದೇ ತಮ್ಮ ಮನಸ್ಸಿನಲ್ಲಿದ್ದ ಮಾತೊಂದನ್ನು ನಟಿಗೆ ಹೇಳಿದ್ದರಂತೆ.
‘ನನ್ನ ಮೊದಲ ಸಿನಿಮಾಕ್ಕೆ ನೀವೇ ನಾಯಕಿಯಾಗಬೇಕು’ ಎಂದು ರಶ್ಮಿಕಾ ಬಳಿ ರವೀಂದ್ರ ಹೇಳಿದ್ದರಂತೆ. ಇದೀಗ ಆ ಮಾತು ನಿಜವಾಗಿದ್ದು, ತಮ್ಮ ಚೊಚ್ಚಲ ನಿರ್ದೇಶನದ ‘ಮೈಸಾ’ ಸಿನಿಮಾಕ್ಕೆ ರಶ್ಮಿಕಾರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾ ಕೇವಲ ಮತ್ತೊಂದು ಚಿತ್ರವಾಗಿರದೆ, ‘ಸೀತಾ ರಾಮಂ’ ಸಮಯದಲ್ಲಿ ಹುಟ್ಟಿದ ವೃತ್ತಿಪರ ನಂಟಿನ ಮುಂದುವರಿಕೆಯೂ ಆಗಿದೆ.

ಇನ್ನು ‘ಮೈಸಾ’ ಟೀಸರ್ ಬಿಡುಗಡೆಯಾದ ಬಳಿಕ ರಶ್ಮಿಕಾ ಅವರ ಲುಕ್ ಮತ್ತು ಪಾತ್ರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದುವರೆಗೆ ರಶ್ಮಿಕಾರನ್ನು ಹೆಚ್ಚಾಗಿ ಕ್ಯೂಟ್ ಹಾಗೂ ಗ್ಲಾಮರಸ್ ಪಾತ್ರಗಳಲ್ಲಿ ನೋಡಿದ್ದ ಅಭಿಮಾನಿಗಳಿಗೆ, ಕೈಯಲ್ಲಿ ಕತ್ತಿ ಹಿಡಿದು ಹಿಂಸಾತ್ಮಕ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ ಅವರ ಹೊಸ ಅವತಾರ ಅಚ್ಚರಿ ಮೂಡಿಸಿದೆ. ಟೀಸರ್‌ನಲ್ಲಿ ರಶ್ಮಿಕಾ ಪಾತ್ರ ಸಾಕಷ್ಟು ರಗಡ್ ಆಗಿ ಕಾಣಿಸಿಕೊಂಡಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿಸಿದೆ.
ರಶ್ಮಿಕಾ ಅವರ ಸಿನಿಮಾ ಲೈನ್‌ಅಪ್ ಕೂಡ ಸದ್ಯ ಸಾಕಷ್ಟು ದೊಡ್ಡದಾಗಿದೆ. ವಿಜಯ್ ದೇವರಕೊಂಡ ಜೊತೆಗಿನ ‘ರಣಬಾಲಿ’ ಬಳಿಕ ‘ಮೈಸಾ’ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ಜೊತೆಗಿನ ‘ರಾಕಾ’ ಸಿನಿಮಾದಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಹಿಂದಿಯಲ್ಲಿ ಇನ್ನೂ ಎರಡು ಸಿನಿಮಾಗಳಿಗೂ ಅವರು ಸಹಿ ಹಾಕಿದ್ದಾರೆ.

ಅಷ್ಟೇ ಅಲ್ಲದೆ, ಖ್ಯಾತ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಆಧಾರಿತ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅಜಿತ್ ನಟನೆಯ ಮುಂಬರುವ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಹೀಗಾಗಿ ವಿಭಿನ್ನ ಭಾಷೆ, ವಿಭಿನ್ನ ಪಾತ್ರ ಹಾಗೂ ವಿಭಿನ್ನ ಜಾನರ್‌ಗಳ ಮೂಲಕ ರಶ್ಮಿಕಾ ತಮ್ಮ ಸಿನಿ ಪಯಣವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ.


