ಬೆಂಗಳೂರು, [ಫೆ.25]: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಆಗಿದೆ. 

ಇಂದು [ಮಂಗಳವಾರ] ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲನ ಈ ಆದೇಶ ಹೊರಡಿಸಿದೆ.  ಲಹರಿ ಸಂಸ್ಥೆಯ 'ಶಾಂತಿ ಕ್ರಾಂತಿ' ಚಿತ್ರದ ಮಧ್ಯ ರಾತ್ರಿಯಲಿ ಹಾಡನ್ನ,ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೇ ಬಳಸಲಾಗಿತ್ತು. 

ಕಿರಿಕ್ ಪಾರ್ಟಿ ಬಿಡುಗಡೆಯಾಗದಂತೆ ಕೋರ್ಟ್'ನಿಂದ ಕಿರಿಕ್ ನೀಡಿದ ಲಹರಿ ವೇಲು: ಹಾಡು ಕದ್ದಿರುವ ಆರೋಪ

ಈ ಹಿನ್ನೆಲೆಯಲ್ಲಿ ಜನವರಿ 11, 2017 ರಲ್ಲಿಯೇ ಲಹರಿ ಸಂಸ್ಥೆ ಕಾಪಿ ರೈಟ್ ಆಕ್ಟ್ ಅಡಿ ದೂರು ದಾಖಲಿಸಿತ್ತು.  ಆದರೆ, ಚಿತ್ರ ತಂಡ ಯಾವುದಕ್ಕೂ ರಿಪ್ಲೈ ಮಾಡಿಲ್ಲ.ಇದರಿಂದ ಬೆಂಗಳೂರಿನ ಮೆಟ್ರೋ ಪಾಲಿಟಿನ್ ಮೆಜಿಸ್ಟ್ರೇಟ್ ಕೋರ್ಟ್, ರಕ್ಷಿತ್ ಶೆಟ್ಟಿ ಹಾಗೂ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

"

ರವಿಚಂದ್ರನ್ ಅಭಿನಯಿಸಿದ 'ಶಾಂತಿ ಕ್ರಾಂತಿ' ಚಿತ್ರದ ಮಧ್ಯ ರಾತ್ರಿಯಲಿ ಹಾಡನ್ನ ಕಿರಿಕ್ ಪಾರ್ಟಿ ಚಿತ್ರದಲ್ಲಿ 'ಹೇ ವೂ ಆರ್ ಯು' ಅಂತ ಹಾಡನ್ನ ಕಂಪೋಸ್ ಮಾಡಲಾಗಿದೆ.

2016 ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ,  ಕಾಲೇಜು ಕ್ಯಾಂಪಸ್ ಪ್ರಣಯ, ಹಾಸ್ಯ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ರಿಶಬ್ ಶೆಟ್ಟಿ ನಿರ್ದೇಶಿಸಿದ್ದರೆ ಮತ್ತು ಜಿ.ಎಸ್. ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. 

 ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಐಯ್ಯರ್, ಧನಂಜಯ್ ರಂಜನ್ ಮತ್ತು ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರಮುಖ ತಾರಾಂಗಣ ಚಿತ್ರದಲ್ಲಿದೆ.

"