Asianet Suvarna News Asianet Suvarna News

’ಅವರು ಏನಾದ್ರೂ ಮಾಡ್ಕೊಳ್ಳಲಿ, ತಲೆ ಕೆಡಿಸ್ಕೋಳ್ಳಲ್ಲ’ ಹನುಮಂತ ರಿಯಾಕ್ಷನ್

ಡ್ಯಾನ್ಸ್ ವೇದಿಕೆಯಲ್ಲೇ ಹನುಮಂತನ ಮುತ್ತಿಕೊಂಡ ವರದಿಗಾರರು/ ಪದೇ ಪದೇ ಎಪಿಸೋಡ್ ಪ್ರಸಾರ ಮಾಡುವುದಕ್ಕೆ ಹನುಮಂತ ಹೇಳುವುದೇನು?

continue episode in Media SaReGaMaPa Season Star Hanumantha Reaction
Author
Bengaluru, First Published Oct 13, 2019, 6:41 PM IST
  • Facebook
  • Twitter
  • Whatsapp

ಹಾಡಿನ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದ ಹಾವೇರಿಯ ಹನುಮಂತ ಡ್ಯಾನ್ಸ್ ಶೋ ಮೂಲಕವೂ ಜನರ ಪ್ರೀತಿಗೆ ಪಾತ್ರವಾಗಿದ್ದಾರೆ. ಆದರೆ ಸುದ್ದಿ ಮಾಧ್ಯಮಗಳಲ್ಲಿ ಹನುಮಂತನ ಬಗ್ಗೆ ನಿರಂತರ ಕಾರ್ಯಕ್ರಮಗಳು ಬರುತ್ತಲೆ ಇರುತ್ತವೆ. ಹಾಗಾದರೆ ಹನುಮಂತನಿಗೆ ತನ್ನ ಬಗ್ಗೆಯೇ ಬರುವ ಪ್ರೋಗ್ರಾಮ್ ಗಳ ಬಗ್ಗೆ ಗೊತ್ತೆ? ಈ ಪ್ರಶ್ನೆಗೂ ಹನುಮಂತ ತಮ್ಮ ಬಾಯಿಂದಲೇ ಉತ್ತರ ಕೊಟ್ಟಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಹನುಮಂತ ಭಾನುವಾರ ಅಧ್ಯಕ್ಷ.. ಅಧ್ಯಕ್ಷ ಸಾಂಗ್‌ಗೆ ಸಖತ್ ಆಗಿಯೇ ಸ್ಟೆಪ್ ಹಾಕಿದರು. ಇದಾದ ಮೇಲೆ ನಿರ್ಣಾಯಕರ ಸ್ಥಾನದಲ್ಲಿದ್ದ ರಕ್ಷಿತಾ. ಯೋಗರಾಜ್ ಭಟ್, ವಿಜಯ್ ರಾಘವೇಂದ್ರ, ಜಗ್ಗೇಶ್ ಕಮೆಂಟ್ ಗಳನ್ನು ನೀಡಿದರು. ಆದರೆ ಇದೆಲ್ಲ ಆದ ಮೇಲೆ ಅಚ್ಚರಿಯೊಂದು ಕಾದಿತ್ತು.

ಕೋಗಿಲೆ ಹನುಮಂತನ ಮೊಬೈಲ್ ಕಳ್ಳತನ

ಇದ್ದಕ್ಕಿದ್ದಂತೆ ಲೋಗೋ ಮತ್ತು ಕ್ಯಾಮರಾ ಹಿಡಿದುಕೊಂಡು ಬಂದ ಮಾಧ್ಯಮಗಳ ಪ್ರತಿನಿಧಿಗಳು ಹನುಮಂತ ಅವರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಮುಗಿಬಿದ್ದರು.. ಹನುಮಂತ ಅವರ ಪಂಚೆ ಬಗ್ಗೆ ಮಾಹಿತಿ ಕೊಡುತ್ತೇವೆ.. ಹನುಮಂತ ಅವರು ಮೇಲೆ ನೋಡ್ತಿದ್ದಾರೆ.. ಕೆಳಗೆ ನೋಡತ್ತಿದ್ದಾರೆ ಎಂದು ಶುರು ಹಚ್ಚಿಕೊಂಡರು.  ಈ ವೇಳೆ ಮಧ್ಯ ಪ್ರವೇಶ ಮಾಡಿದ ನಿರೂಪಕ ಮಾಸ್ಟರ್ ಆನಂದ ಅವನ ಪಾಲಿಗೆ ಅವ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿಕೊಂಡು ಇದ್ದಾರೆ. ಬಿಟ್ಟುಬುಡ್ರಪ್ಪಾ ಎಂದು ಅಲ್ಲಿಂದ ಓಡಿಸಿದರು.

ಈ ಬಗ್ಗೆ ಹನುಮಂತ ಏನು ಹೇಳ್ತಾರೆ ಎಂದಾಗ ’ನಾನು ನ್ಯೂಸ್ ನೋಡಲ್ಲ. ಸ್ನೇಹಿತರು ಹೇಳಿದ್ದನ್ನ ಕೇಳಿಸಿಕೊಂಡಾಗ ಗೊತ್ತಾಗುತ್ತದೆ. ತಲೆ ಕೆಡಿಸಿಕೊಳ್ಳಲ್ಲ, ಅವರ ಏನಾದರೂ ಮಾಡಿಕೊಳ್ಳಲಿ’ ಎಂದರು. ಇದು ಇಷ್ಟಕ್ಕೆ ಮುಗಿಯಲಿಲ್ಲ.

ನಂತರ ನಿರೂಪಕಿ ಅನುಶ್ರೀ ಅವರರನ್ನು ವೀಕೆಂಡ್ ವಿತ್ ರಮೇಶ್ ಮಾದರಿಯ ಶೋನಲ್ಲಿ ಸಾಧಕರ ಸೀಟ್ ನಲ್ಲಿ ಕೂರಿಸಿದಾಗ.. ಅಲ್ಲಿಗೂ ಹನುಮಂತ ಬಂದಿದ್ದ. ಬರುವಾಗ ಕುತ್ತಿಗೆಗೆ ಆರೇಳು ಟಿವಿ ಚಾನಲ್ ಗಳ ಲೋಗೋ ಹಾಕಿಕೊಂಡೇ ಬಂದಿದ್ದ. ಯಾಕೆ ಹಿಂಗೆ ಕೇಳಿದಾಗ ನಾನು ಮಾತನಾಡುವುದೆಲ್ಲ ಕಂಟೆಂಟ್ ಆಗುತ್ತದೆಯಂತೆ? ಎಂದು ಹೇಳಿದ್ರು[ಇಲ್ಲಿ  ಬಂದಿದ್ದು ಒರಿಜಲ್ ಹನುಮಂತ ಅಲ್ಲ, ಕಾಮಿಡಿ ಶೋದ ಪಾತ್ರಧಾರಿ? !

Follow Us:
Download App:
  • android
  • ios