ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಮೇಲೆ ಪ್ರಕರಣವೊಂದು ದಾಖಲಾಗಿದೆ. ಕೇದಾರ್‌ನಾಥ್’ ಸುಶಾಂತ್ ಸಿಂಗ್ ರಜಪೂತ್ ಎಂಬ ಬಾಯ್ ಫ್ರೆಂಡ್ ಜತೆ ಓಡಾಡಿಕೊಂಡಿದ್ದ ಸಾರಾ ಈಗ ಪ್ರಕರಣ ಎದುರಿಸಬೇಕಾಗಿದೆ.
ಮುಂಬೈ[ಏ. 11] ಸಾರಾ ಅಲಿಖಾನ್ ಟ್ರೋಲಿಗರ ಆಹಾರಕ್ಕೆ ಮಾತ್ರ ಗುರಿಯಾಗುತ್ತಿದ್ದರು. ಆದರೆ ಇದೀಗ ಪ್ರಕರಣವೊಂದನ್ನು ಸಾರಾ ಅಲಿ ಖಾನ್ ಎದುರಿಸಬೇಕಾಗಿದೆ.
ಚಿಕ್ಕಮ್ಮ ಕರೀನಾ ಕಪೂರ್ ರಿಂದ ಸಾಕಷ್ಟು ಸಲಹೆ ಪಡೆದುಕೊಂಡಿದ್ದ ಸಾರಾ ಅಲಿಖಾನ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿದೆ. ಬೈಕ್ ಹಿಂಬದಿಯಲ್ಲಿ ಸಾರಾ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ ಕೇಸ್ ಬಿದ್ದಿದೆ.
ಮಗಳು ಸಾರಾ ಖಾನ್ ಗೆ ಜೋಡಿ ಹುಡುಕಿದ ತಾಯಿ ಕರೀನಾ!
ಕಿರು ಚಿತ್ರವೊಂದರ ಶೂಟಿಂಗ್ ವೇಳೆ ಸಹನಟ ಕಾರ್ತಿಕ್ ಆರ್ಯನ್ ಜತೆ ಸಾರಾ ದೆಹಲಿಯ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ಈ ವೇಳೆ ಬೈಕ್ ಹಿಂಬದಿಗೆ ಕೂತಿದ್ದು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾ ಮೂಲಕವೇ ದೂರು ದಾಖಲಾಗಿದೆ.
