ಮುಂಬೈ (ಫೆ.21): ಪ್ರೇಮಿಗಳ ದಿನಾಚರಣೆಯಂದು ತಮ್ಮ ಪತ್ನಿ ಜೊತೆ ಹೆಲ್ಮೆಟ್‌ ಮತ್ತು ಮಾಸ್ಕ್‌ ಇಲ್ಲದೆ ಬೈಕ್‌ನಲ್ಲಿ ಜಾಲಿರೈಡ್‌ ಮಾಡಿದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ವಿವೇಕ್‌ ಒಬೆರಾಯ್‌ ಅವರು ಹಂಚಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳ ಆಧಾರದಲ್ಲೇ ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. 

ಜೊತೆಗೆ ಬೈಕ್‌ ಚಾಲನೆ ವೇಳೆ ಹೆಲ್ಮೆಟ್‌ ಹಾಕದ ಕಾರಣಕ್ಕೆ ವಿವೇಕ್‌ ಒಬೆರಾಯ್‌ ಅವರಿಗೆ 500 ರು. ದಂಡ ವಿಧಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್‌ ಧರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. 

'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ'

ಈ ಹಿನ್ನೆಲೆಯಲ್ಲಿ 6 ತಿಂಗಳು ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವೆರಡೂ ಶಿಕ್ಷೆ ವಿಧಿಸಬಹುದಾದ ಕಾಯ್ದೆಗಳಡಿ ನಟ ವಿವೇಕ್‌ ವಿರುದ್ಧ ಜೂಹು ಠಾಣೆ ಪೊಲೀಸರು ಕೇಸ್‌ ಜಡಿದಿದ್ದಾರೆ.