ನವದೆಹಲಿ (ನ. 07):  ಅಬಿಶ್‌ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್‌ ಚಾಟ್‌ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.

ಛೀ.. ಛೀ.. ಈ ಆಂಟಿ ಅಂದವನಿಗೆ 'ಆ' ಪದ ಬಳಸಿದ ಸ್ವರಾಗೆ ಮಂಗಳಾರತಿ!

ಚಾಟ್‌ ಶೋ ವೇಳೆ ಸ್ವರಾ ಭಾಸ್ಕರ್‌ ಅವರು, ತಾವು ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಈ ವೇಳೆ, 4 ವರ್ಷದ ಮಗುವಿನ ಜೊತೆ ಸೋಪ್‌ ಜಾಹೀರಾತಿನ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಈ ಸಂದರ್ಭದಲ್ಲಿ ಆ ಮಗು ತಮ್ಮನ್ನು ಉದ್ದೇಶಿಸಿ ಆಂಟಿ ಎಂದು ಕರೆಯಿತು. ಇದು ತಮಗೆ ತೀರಾ ಇರಿಸು-ಮುರಿಸು ಮಾಡಿತ್ತು. ಅಲ್ಲದೆ, ಮಕ್ಕಳ ಈ ರೀತಿಯ ವರ್ತನೆಯು ಪೀಡೆ ಮತ್ತು ಅಪಶಕುನಗಳಾಗಿವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸ್ವರ ವಿರುದ್ಧ ಕೇಸ್‌ ದಾಖಲಾಗಿವೆ.