Asianet Suvarna News

ಛೀ..ಛೀ.. ಆಂಟಿ ಅಂದವನಿಗೆ 'ಆ' ಪದ ಬಳಸಿದ ಸ್ವರಾಗೆ ಮಂಗಳಾರತಿ!

ಸ್ವರಾ ಭಾಸ್ಕರ್ ಗೆ ಟ್ವಿಟರ್ ನಲ್ಲಿ ಮಂಗಳಾರತಿ/ ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋ ವೈರಲ್/ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಚಿಂತನೆ

Swara Bhasker abuses 4-year-old kid for calling her aunty Trolled
Author
Bengaluru, First Published Nov 5, 2019, 10:13 PM IST
  • Facebook
  • Twitter
  • Whatsapp

ಮುಂಬೈ(ನ. 05)  ಆಂಟಿ ಎಂದು ಕರೆದಿದ್ದಕ್ಕೆ  4 ವರ್ಷದ ಬಾಲಕನ ಮೇಲೆ ಅಶ್ಲೀಲ ಪದ ಬಳಕೆ ಮಾಡಿದಕ್ಕೆ ನಟಿಗೆ ಟ್ವಿಟರ್ ನಲ್ಲಿ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ.  ಸ್ವರಾ ಭಾಸ್ಕರ್ ಇಂಡಸ್ಟ್ರಿಗೆ ಕಾಲಿಟ್ಟ ಸಮಯ. ಆಗ ಜಾಹೀರಾತೊಂದನ್ನು ಶೂಟಿಂಗ್ ಮಾಡುತ್ತಿದ್ದೆ. ಈ ವೇಳೆ ಬಾಲಕನೊಬ್ಬ ನನಗೆ ಆಂಟಿ ಎಂದು ಕರೆದ. ಆಗ ತಾನೆ ಹೊಸದಾಗಿ ಇಂಡಸ್ಟ್ರಿಗೆ ಬರುತ್ತಿದ್ದೆ. ನನಗೆ ಹೇಗಾಗಿರಬೇಡ? 

ಆ ದೃಶ್ಯದ ಬಳಿಕ ಲೈಂಗಿಕ ಸಾಧನಜಗಳ ಖರೀದಿ ಬಲು ಜೋರು

ಹೀಗೆ ಸ್ವರಾ ಹಿಂದೆ ಯಾವಾಗಲೋ ಮಾತನಾಡಿದ್ದ ಸಂದರ್ಶನದ ತುಣುಕೊಂದು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಸ್ವರಾ ಅವರನ್ನು ಸರಿಯಾಗೆ ಅಣುಕಿಸಿದೆ. ಆ ಬಾಲಕನಿಗೆ ಟಾಯ್ಲೆಟ್ ಕರೆದುಕೊಂಡು ಹೋಗಲು ಜನರು ಬೇಕು. ಮಕ್ಕಳಂದರೆ ಒಂಥರಾ ಇವಿಲ್ ಇದ್ದಂಗೆ ಎನ್ನುತ್ತಾ ಸ್ವರ ಸಂಭಾಷಣೆ ಮುಂದುವರಿಸಿದ್ದಾರೆ.

ಇದಾದ ಮೇಲೆ ಟ್ವಿಟರ್ ನಲ್ಲಿ ಸಹ #Swara_aunty  ಹ್ಯಾಷ್ ಟ್ಯಾಗ್ ಟ್ರೆಂಡ್ ಆಯಿತು. ಇನ್ನೊಂದು ಕಡೆ ಸ್ವಯಂ ಸೇವಾ ಸಂಸ್ಥೆಯೊಂದು ಸ್ವರಾ ಭಾಸ್ಕರ್ ಅವರ ಮೇಲೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೆ  ದೂರು ನೀಡಲು ಮುಂದಾಗಿದೆ.

 

Follow Us:
Download App:
  • android
  • ios