Salman Khan: ಪತ್ರಕರ್ತ ದಾಖಲಿಸಿದ್ದ ಕ್ರಿಮಿನಲ್ ಕೇಸ್​ನಿಂದ ಸಲ್ಲುಗೆ ಮುಕ್ತಿ

2019ರಲ್ಲಿ  ನಟ ಸಲ್ಮಾನ್​ ಖಾನ್​ ವಿರುದ್ಧ ಪತ್ರಕರ್ತರೊಬ್ಬರು ದಾಖಲು ಮಾಡಿದ್ದ ಕ್ರಿಮಿನಲ್​ ಕೇಸ್​ ಅನ್ನು ಮುಂಬೈ ಹೈಕೋರ್ಟ್​ ರದ್ದುಗೊಳಿಸಿದೆ. ಏನಿದು ಪ್ರಕರಣ?
 

Bombay High Court quashes criminal proceedings against Salman Khan in case filed by journalist

ಪತ್ರಕರ್ತರೊಬ್ಬರ (Jounalist) ಮೊಬೈಲ್​ ಕಸಿದು ಸಂಕಷ್ಟಕ್ಕೆ ಸಿಲುಕಿದ್ದ ನಟ ಸಲ್ಮಾನ್​ ಖಾನ್​ ಈಗ ನಿರಾಳರಾಗಿದ್ದಾರೆ. 2019ರಲ್ಲಿ ನಡೆದ ಈ ಘಟನೆಯನ್ನು ಪತ್ರಕರ್ತರೊಬ್ಬರು ಸಲ್ಮಾನ್​ ವಿರುದ್ಧ ದೂರು ದಾಖಲು ಮಾಡಿದ್ದರು. ಪತ್ರಕರ್ತನಿಗೆ ಬೆದರಿಕೆ ಒಡ್ಡಿದ್ದ ಆರೋಪದ ಅಡಿ ಸಲ್ಮಾನ್​ ಖಾನ್​  ವಿರುದ್ಧ  ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗಿತ್ತು. ಇಂದು ಬಾಂಬೆ ಹೈಕೋರ್ಟ್ ಈ ದೂರನ್ನು ರದ್ದುಗೊಳಿಸಿದ್ದು, ಸಲ್ಮಾನ್​ ಖಾನ್​ (Salman Khan) ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಇವರ ವಿರುದ್ಧ 2019ರಲ್ಲಿ ಅಶೋಕ್ ಶ್ಯಾಂ ಲಾಲ್ ಪಾಂಡೆ (Ashok Shyamlal Pandey) ಎನ್ನುವವರು ನೀಡಿದ್ದ ದೂರನ್ನು ಆಧರಿಸಿ, ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಸುಮಾರು ಮೂರುವರೆ ವರ್ಷಗಳ ವಿಚಾರಣೆ ಬಳಿಕ ಇಂದು ಹೈಕೋರ್ಟ್​ ಸಲ್ಮಾನ್​ ಪರವಾಗಿ ತೀರ್ಪು ನೀಡಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ,  ಸಲ್ಮಾನ್ ಖಾನ್​ ಅವರು ಘಟನೆ ನಡೆದ ದಿನ ಬೆಳಗ್ಗೆ ಸೈಕಲ್‍ನಲ್ಲಿ ಜುಹೂವಿನಿಂದ (Juhu)ಕಂದಿವಾಲಿ ಕಡೆ ಹೋಗುತ್ತಿದ್ದರು. ಈ ವೇಳೆ ಪತ್ರಕರ್ತ ಅಶೋಕ್ ತಮ್ಮ ಕ್ಯಾಮೆರಾಮೆನ್ ಜೊತೆ ನಟ ಸಲ್ಮಾನ್ ಖಾನ್ ಪಕ್ಕದಲ್ಲೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕ್ಯಾಮೆರಾಮನ್ ಸಲ್ಮಾನ್​ ಖಾನ್​ ಅವರ ವಿಡಿಯೋವನ್ನು ತಮ್ಮ ಮೊಬೈಲ್​ನಿಂದ ಮಾಡಿದ್ದಾರೆ. ಇದನ್ನು ಗಮನಿಸಿದ ಸಲ್ಮಾನ್ ಖಾನ್​ ಅವರು ವಿಡಿಯೋ ತೆಗೆಯಬೇಡಿ ಎಂದು ಅವರಿಗೆ ಹೇಳಿದ್ದಾರೆ. ಇಷ್ಟಾದರೂ ಸೆಲೆಬ್ರಿಟಿಗಳು ಹೀಗೆ ಸಿಕ್ಕರೆ ಯಾರಾದರೂ ಬಿಡುತ್ತಾರೆಯೆ? ಅದರಲ್ಲಿಯೂ ಹೇಳಿಕೇಳಿ ಅವರು ಪತ್ರಿಕಾ ಛಾಯಾಗ್ರಾಹಕ. ಹೀಗಿದ್ದ ವೇಳೆ ವಿಡಿಯೋ (Vedio) ಮಾಡಬೇಡಿ ಎಂದರೆ ಕೇಳುವುದು ಹೇಗೆ?

ಸಲ್ಮಾನ್​ಗೆ ಜೀವ ಬೆದರಿಕೆ ಮೇಲ್​ ಬಂದಿದ್ದಾದ್ರೂ ಎಲ್ಲಿಂದ? ಕೊನೆಗೂ ಸಿಕ್ತು ಸುಳಿವು!

 ಸಲ್ಮಾನ್ ಎಚ್ಚರಿಕೆ ನೀಡಿದ್ದರೂ ಕ್ಯಾಮೆರಾಮನ್ (Cameraman) ಮೊಬೈಲ್​ಫೋನ್​ನಿಂದ ವಿಡಿಯೋ ತೆಗೆಯುವುದನ್ನು ನಿಲ್ಲಿಸಿರಲಿಲ್ಲ. ಈ ವೇಳೆ ಸಲ್ಮಾನ್ ಖಾನ್ ತಮ್ಮ  ಬಾಡಿಗಾರ್ಡ್​ಗಳಿಗೆ  ಸೂಚನೆ ನೀಡಿದ್ದಾರೆ. ವಿಡಿಯೋ ಮಾಡುವುದನ್ನು ನಿಲ್ಲಿಸುವಂತೆ ಅವರಿಗೆ ತಿಳಿಸಿ ಎಂದು ಹೇಳಿದ್ದಾರೆ. ಬಾಡಿಗಾರ್ಡ್ಸ್ ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದಾಗ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಡಿಕ್ಕಿಯಲ್ಲಿ ಏನೋ ತೆಗೆದುಕೊಳ್ಳುವ ರೀತಿ ನಟಿಸಿದ್ದಾನೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಅಶೋಕ್ ಹಾಗೂ ಕ್ಯಾಮೆರಾಮನ್ ಸಲ್ಮಾನ್ ಖಾನ್‍ ಅವರನ್ನು ಹಿಂಬಾಲಿಸಿ ಮತ್ತೆ ಅವರ ವಿಡಿಯೋ ಸೆರೆ ಹಿಡಿದಿದ್ದಾರೆ. ಈ ಬಾರಿಯೂ  ಸಲ್ಮಾನ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಅಲ್ಲಿ ಟ್ರಾಫಿಕ್ ಜಾಮ್ ಕೂಡ ಆಯಿತು.  ಜನರಿಗೆ ತೊಂದರೆ ಆಗಬಾರದು ಎಂದು ಸಲ್ಮಾನ್ ಖಾನ್  ಮೊಬೈಲ್ ಕಸಿದುಕೊಂಡಿದ್ದಾರೆ. ಸ್ವಲ್ಪ ದೂರ ಹೋಗಿ ಸಲ್ಮಾನ್ ತನ್ನ ಬಾಡಿಗಾರ್ಡ್ ಮೂಲಕ ಆ ಮೊಬೈಲ್ ಮರಳಿ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಮೊಬೈಲ್ ಕಸಿದುಕೊಂಡಿದಕ್ಕೆ ಅಶೋಕ್ ಮುಂಬೈನ ಡಿಎನ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಲ್ಮಾನ್ ಖಾನ್ ಬಾಡಿಗಾರ್ಡ್ ಕೂಡ ಪ್ರತಿ ದೂರನ್ನು ಸಲ್ಲಿಸಿದ್ದರು.  ಸಲ್ಮಾನ್ ಖಾನ್ ಅನುಮತಿ ಪಡೆಯದೇ ಅವರನ್ನು ಹಿಂಬಾಲಿಸಿ ವಿಡಿಯೋ ಮಾಡಿದ್ದಾರೆ ಎಂದು ಬಾಡಿಗಾರ್ಡ್ ದೂರು ದಾಖಲಿಸಿದ್ದರು.  ಮ್ಯಾಜಿಸ್ಟ್ರೇಟ್​ ಕೋರ್ಟ್​ (Magistrate Court) ಸಲ್ಮಾನ್​ ಖಾನ್​ ಅವರ ತಪ್ಪಿದೆ ಎಂದು ಅಭಿಪ್ರಾಯ ಪಟ್ಟಿತ್ತು. ಸಲ್ಮಾನ್​  ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದಾಖಲಾಗಿದ್ದ ದೂರುಗಳನ್ನು ಮನಗಂಡಿದ್ದ  ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು, ಅವರನ್ನು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಇದನ್ನು ಸಲ್ಮಾನ್​ ಖಾನ್​ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ , ಸಲ್ಮಾನ್​ಖಾನ್​ ಅವರದ್ದು ತಪ್ಪು ಇಲ್ಲ ಎಂದು ಸೂಚಿಸಿ ಅವರನ್ನು ಮುಕ್ತಗೊಳಿಸಿದೆ. 

ಬಜರಂಗಿ ಭಾಯಿಜಾನ್-2ನಲ್ಲಿ ಕರೀನಾ ಬದ್ಲು ಸಲ್ಮಾನ್​ ಗರ್ಲ್​ಫ್ರೆಂಡ್​?

 

Latest Videos
Follow Us:
Download App:
  • android
  • ios