ಕನ್ನಡದ ಬಿಗ್ ಬಾಸ್ 7ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲನೆ ಸ್ಪರ್ಧಿಯಾಗಿ ಹಾಸ್ಯನಟ ಕುರಿ ಪ್ರತಾಪ್ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಎಂದಿನಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿ ಎಲ್ಲವನ್ನೂ ಪರಿಚಯಿಸಿ ಕುರಿ ಪ್ರತಾಪ್ ಅವರನ್ನು ಒಳಕ್ಕೆ ಕಳಿಸಿದ್ದಾರೆ.

ವೇದಿಕೆಯ ಮೇಲೆ ನಗುವಿನ ಹೊಳೆ ಹರಿಸಿದ ಕಿಚ್ಚ ಸುದೀಪ್ ಮತ್ತು ಕುರಿ ಪ್ರತಾಪ್ ನಕ್ಕು ನಗಿಸಿದರು. ಇದಾದ ಮೇಲೆ ಮನೆ ಪ್ರವೇಶ ಮಾಡಿದ ಕುರಿ ಪ್ರತಾಪ್ ಗೆ ಮೊದಲ ದಿನವೇ ಬಿಗ್ ಬಾಸ್ ಟಾಸ್ಕ್ ನೀಡಿದರು.

ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ಎಷ್ಟು?

ನಿಮಗೆ ಒಗಟುಗಳು ಗೊತ್ತೆ ಎಂದು ಕುರಿ ಪ್ರತಾಪ್ ಅವರನ್ನು ಬಿಗ್ ಬಾಸ್ ಪ್ರಶ್ನೆ ಮಾಡಿದರು. ಇದಕ್ಕೆ ಕುರಿ ಪ್ರತಾಪ್ ಕೈ ಕೆಸರಾದರೆ ಬಾಯಿ ಮೊಸರು ಎಂದು ಗಾದೆ ಮಾತು ಹೇಳಿದರು. ಕುರಿಯವರನ್ನು ಸರಿ ಮಾಡಿದ ಬಿಗ್ ಬಾಸ್ ಅದು ಗಾದೆ ಮಾತು ಒಗಟುಗಳು ಎಂದರೆ ಬೇರೆ ಎಂದು ತಿಳಿಸಿದರು.

‘ಸುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ’ ಈ ಒಗಟನ್ನು ಮತ್ತೊಬ್ಬ ಸ್ಪರ್ಧಿ ಬಳಿ ಕೇಳಿ ಉತ್ತರ ಪಡೆದುಕೊಳ್ಳಬೇಕು. ಆದರೆ ಕನ್ನಡದಲ್ಲಿ ಕೇಳುವ ಹಾಗಿಲ್ಲ.. ಇಂಗ್ಲಿಷ್ ನಲ್ಲಿಯೇ ಕೇಳಬೇಕು ಎಂದು ಷರತ್ತು ವಿಧಿಸಿ ಕಳುಹಿಸಿದರು.

‘ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆ ತುಂಬಾ’ ಎಂಬ ಎರಡನೇ ಒಗಟನ್ನು ಮೊದಲನೆ ಒಗಟಿಗೆ ಉತ್ತರ ಬಂದ ನಂತರ ಕೇಳಬೇಕು ಎಂದು ತಿಳಿಸಿ ಕಳಿಸಿದರು.