ಮುಂಬೈ (ಮಾ.01): ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ನಟ ಅಮಿತಾಬ್‌ ಬಚ್ಚನ್‌ (78) ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. 

ಆದರೆ ಯಾವ ಸಮಸ್ಯೆಗೆ ಈ ಶಸ್ತ್ರಚಿಕಿತ್ಸೆ ಎಂದು ಅವರು ಬಹಿರಂಗಪಡಿಸಿಲ್ಲ. ಶನಿವಾರ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಒಂದು ಸಾಲಿನ ಅಸ್ಪಷ್ಟ, ಗೌಪ್ಯ ಸಂದೇಶ ಹಂಚಿಕೊಂಡಿರುವ ಅಮಿತಾಭ್‌, ‘ಆರೋಗ್ಯ ಪರಿಸ್ಥಿತಿ...ಶಸ್ತ್ರಚಿಕಿತ್ಸೆ...ಏನನ್ನೂ ಬರೆಯಲಾರೆ’ ಎಂದು ಬರೆದುಕೊಂಡಿದ್ದಾರೆ. 

ಸಿಟ್ಟಿನಲ್ಲಿ ಅಭಿಮಾನಿಗೆ ಹೊಡೆದ ಅಮಿತಾಭ್..! ಕಾರಣ ಈ ನಟಿ ..

ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಬಚ್ಚನ್‌ ಹೇಳಿಕೊಂಡಿದ್ದರು. ಅದರೆ ಇದೀಗ ಅವರು ಶಸ್ತ್ರಚಿಕಿತ್ಸೆಯ ಸುಳಿವು ನೀಡಿದ್ದಾರೆ.