ಇದೊಂದು ಹಳೆಯ ಕತೆ. ಆದರೂ ಸ್ವಾರಸ್ಯಕರವಾದ ಕತೆ. ಅಮಿತಾಭ್ ಬಚ್ಚನ್ ಮತ್ತು ರೇಖಾ ನಡುವಿನ ಸಂಬಂಧದ ಬಗ್ಗೆ ಗೊತ್ತಿರುವವರಿಗೆ ಇದು ತಿಳಿದಿರಬಹುದು. ಇಲ್ಲವಾದರೆ ಓದಿ.

ಅದು ಎಪ್ಪತ್ತು- ಎಂಬತ್ತರ ದಶಕದ ಕಾಲ. ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್‌ ಮ್ಯಾನ್ ಲುಕ್‌ನಲ್ಲಿ ಬಾಲಿವುಡ್‌ ಅನ್ನು ಆಳುತ್ತಿದ್ದರು. ರೇಖಾ ಕೂಡ ಆಗ ಬಾಲಿವುಡ್ ರಸಿಕರ ಕನಸಿನ ರಾಣಿ. ಎಂದೂ ವಯಸ್ಸಾಗದ ಚೆಲುವೆ. ಆಗ ಇನ್ನೂ ಆಕೆಯ ಯವ್ವನದ ದಿನಗಳು. ಅಮಿತಾಭ್‌ಗೂ ತುಂಬಿದ ಪ್ರಾಯ. ಇಬ್ಬರೂ ಜೊತೆಯಾಗಿ ಹಲವು ಫಿಲಂಗಳಲ್ಲಿ ನಟಿಸಿದ್ದರು. ಇಬ್ಬರೂ ತುಂಬಾ ಹತ್ತಿರವಾದರು.  ಬಾಲಿವುಡ್‌ನಲ್ಲಿ ಇರುವ ಮಂದಿಗೆಲ್ಲಾ, ಇವರಿಬ್ಬರ ನಡುವೆ ಏನೋ ಇದೆ ಎಂದು ಮನದಟ್ಟಾಗಿ ಬಿಟ್ಟಿತ್ತು. ಆದರೆ ಅಮಿತಾಭ್‌ಗೆ ಆಗಲೇ ಮದುವೆಯಾಗಿತ್ತು. ಜಯಾ ಬಚ್ಚನ್ ಅವನ ಮನೆ ತುಂಬಿದ್ದಳು.

ಶ್ರೀದೇವಿ ಪುಣ್ಯ ತಿಥಿ: ನಟಿಯ ಆಸ್ತಿಯೆಲ್ಲ ಮಾರಿದ್ದರಾ ಬೋನಿ ಕಪೂರ್? ...

1977ರಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಹೀರೋ ಅಮಿತಾಭ್ ಬಚ್ಚನ್, ಹೀರೋಯಿನ್ ರೇಖಾ. ಅದು ಗಂಗಾ ಕಿ ಸೌಗಂಧ್ ಫಿಲಂನ ಚಿತ್ರೀಕರಣ, ನಡೆಯುತ್ತಿದ್ದುದು ಜೈಪುರ ಅರಮನೆ ಪ್ರದೇಶದಲ್ಲಿ. ಸ್ಟಾರ್‌ಗಳನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಅವರಲ್ಲಿ ಒಬ್ಬ ರೇಖಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ. ಆತನಿಗೆ ಎಚ್ಚರಿಕೆ ಕೊಡಲಾಯಿತು. ಆದರೆ ಆತ ಹೊಲಸು ಟೀಕೆ ಮಾಡುವುದನ್ನು ಮುಂದುವರಿಸಿದ. ಸಾಕಷ್ಟು ವಾರ್ನಿಂಗ್ ಕೊಟ್ಟರೂ ಅವನು ಸುಮ್ಮನಿರಲಿಲ್ಲ.. ಒಂದು ಹಂತದಲ್ಲಿ ಕೆರಳಿದ ಅಮಿತಾಭ್, ಶೂಟಿಂಗ ಆವರಣದಿಂದ ಜನರ ಮಧ್ಯೆ ನುಗ್ಗಿ ಹೋಗಿ ಆ ಮನುಷ್ಯನಿಗೆ ಸರಿಯಾಗಿ ಬಾರಿಸಿದರು. ಮಿಸ್ಟರ್ ಕೂಲ್ ಎಂದೇ ಹೆಸರಾಗಿದ್ದ ಅಮಿತಾಬ್‌ ತನ್ನ ಕೂಲ್‌ನೆಸ್‌ ಯಾಕೆ ಕಳೆದುಕೊಂಡು ಅಷ್ಟೊಂದು ರಾಂಗ್ ಆದರು ಅಂತ ಯಾರಿಗೂ ಅರ್ಥವಾಗಲಿಲ್ಲ. ಅದು ರೇಖಾ ಮಹಿಮೆ ಎಂಬುದು ಮಾತ್ರ ಅಂದಾಜಿತ್ತು.

ಈ ಪ್ರಕರಣವನ್ನು ಇಟ್ಟುಕೊಂಡು ಸಿನಿ ಮ್ಯಾಗಜಿನ್‌ಗಳು, ಪತ್ರಿಕೆಗಳು ವರ್ಣರಂಜಿತವಾಗಿ ವರದಿ ಮಾಡಿದವು. ರೇಖಾ ಮತ್ತು ಅಮಿತಾಭ್ ನಡುವೆ ಅಫೇರ್ ಇರುವುದು ನಿಜ, ಇಲ್ಲವಾದರೆ ಬಚ್ಚನ್ ಅಷ್ಟೊಂದು ಯಾಕೆ ಸಿಟ್ಟಾಗಬೇಕಿತ್ತು ಎಂಬುದು ವಾದದ ತಿರುಳು. ಇದರ ಬಳಿಕ ಅವರಿಬ್ಬರ ನಡುವೆ ಪ್ರೇಮ ಇದೆ ಎಂಬ ಊಹೆ ಎಲ್ಲರಲ್ಲಿ ಗಾಢವಾಯಿತು. ಇದು ಮತ್ತೂ ಮೂರ್ನಾಲ್ಕು ವರ್ಷಗಳ ಕಾಲ ಮುಂದುವರಿಯಿತು. ಆದರೆ ಅಮಿತಾಭನೇ ಇದಕ್ಕೆ ಒಂದು ಹಂತದಲ್ಲಿ ಕೊನೆ ಹಾಡಿದ. ''ನನಗೂ ರೇಖಾ ಮಧ್ಯೆ ಏನೂ ಇಲ್ಲ. ಇದು ಬರಿಯ ಗಾಸಿಪ್ ಅಷ್ಟೇ'' ಎಂದು ಹೇಳಿದ.

ನಟನೆಗೆ ಬಾಯ್ ಬಾಯ್ ಹೇಳಿದ ಹ್ಯಾರಿ ಪಾಟರ್ ಚೆಲುವೆ ಎಮ್ಮ ವಾಟ್ಸನ್ ...

ಆದರೆ ಇದು ಕೂಡ ಸುಳ್ಳು ಎಂಬುದನ್ನು ರೇಖಾಳೇ ಬಿಡಿಸಿ ಹೇಳಬೇಕಾಯಿತು. ಮುಂದೆ ಹಲವು ವರ್ಷಗಳ ಬಳಿಕ ಆಕೆಯ ಆತ್ಮಕತೆ 'ದಿ ಅನ್‌ಟೋಲ್ಡ್ ಸ್ಟೋರಿ' ಹೊರಬಂತು. ಅದರಲ್ಲಿ ರೇಖಾ ಹೆಳಿಕೊಂಡಿದ್ದಳು: 'ಅಮಿತಾಭ್ ತುಂಬಾ ಸಂಭಾವಿತ, ಯಾರಿಗೂ ಮನಸ್ಸು ನೋಯಿಸಲು ಅವನಿಗೆ ಮನಸ್ಸು ಒಪ್ಪದು. ನಮ್ಮ ಮಧ್ಯೆ ಪ್ರೇಮ ಇದ್ದುದು ನಿಜ. ಆದರೆ ಅದನ್ನು ಪಬ್ಲಿಕ್‌ ಮಾಡಿ, ತನ್ನ ಕುಟುಂಬವನ್ನೂ ಇಕ್ಕಟ್ಟಿಗೆ ಸಿಕ್ಕಿಸಲು ಆತ ಬಯಸಲಿಲ್ಲ. ಹೀಗಾಗಿ ನನ್ನಿಂದ ದೂರ ಸರಿದ. ಇದರಿಂದ ನೋವಾದದ್ದು ನನಗೂ ಹಾಗೂ ಆತನಿಗೂ. ಆದರೆ ಲೋಕಕ್ಕಾಗಿ, ಕುಟುಂಬಕ್ಕಾಗಿ ನಾವು ನೋವನ್ನು ನುಂಗಿಕೊಂಡೆವು.'

ರೂಮರ್‌ಗಳು ನಿಲ್ಲುವುದಿಲ್ಲ. ರೇಖಾ ಇಂದಿಗೂ ಹನೆಗೆ ಸಿಂಧೂರ ಹಚ್ಚುತ್ತಾರೆ. ಮಂಗಲಸೂತ್ರ ಧರಿಸುತ್ತಾರೆ. ಅದೆಲ್ಲ ಅಮಿತಾಭ್‌ನೇ ಕಟ್ಟಿದ್ದು, ಆಕೆ ಇಂದಿಗೂ ಅಮಿತಾಭ್ ನೆನಪಿನಲ್ಲೇ ಇದ್ದಾಳೆ ಎನ್ನುವವರೂ ಇದ್ದಾರೆ. ಒಂದು ಫಿಲಂಫೇರ್ ಸಮಾರಂಭದಲ್ಲಿ, ಅಮಿತಾಭ್ ಹಾಗೂ ಜಯಾ ಬಚ್ಚನ್ ಒಟ್ಟಿಗೆ ಕುಳಿತಿದ್ದರು. ಅಲ್ಲಿಗೆ ರೇಖಾ ಪ್ರವೇಶವಾಯಿತು. ಬಿಳಿ ಸೀರೆ ತೊಟ್ಟು, ಹಣೆಗೆ ಸಿಂದೂರ ಇಟ್ಟು, ಮಂಗಳಸೂತ್ರ ಧರಿಸಿದ್ದ ಆಕೆ ಬರುವಾಗ ಎಲ್ಲ ಕ್ಯಾಮೆರಾಗಳು ಆಕೆಯ ಕಡೆಗೆ ತಿರುಗಿದವು. ಆಕೆ ಬಂದು ಅಮಿತಾಭ್ ಬಳಿ ಸುಮಾರು ಹೊತ್ತು ಮಾತನಾಡುತ್ತಿದ್ದಳು. ಆಗ ಪಕ್ಕದಲ್ಲೇ ಇದ್ದ ಜಯಾ ಕಣ್ಣುಗಳು ತುಂಬಿಕೊಂಡಿದ್ದುದನ್ನು ಎಲ್ಲರೂ ಗಮನಿಸಿದ್ದರು.

ಏನೋ ಮಿಸ್ ಹೊಡೀತಿದೆ ಎಂದ ದರ್ಶನ್‌ಗೆ ಅಪಾಯದ ಹಿಂಟ್ ಮೊದಲೇ ಸಿಕ್ಕಿತ್ತು ...

ಮುಕದ್ದರ್‌ ಕಾ ಸಿಕಂದರ್ ಫಿಲಂನ ಪ್ರೀಮಿಯರ್ ಸ್ಕ್ರೀನಿಂಗ್ ಸಮಯದಲ್ಲಿ, ಅಮಿತಾಭ್ ಮತ್ತು ರೇಖಾ ರೊಮ್ಯಾನ್ಸ್‌ನ ದೃಶ್ಯಗಳು ಬರುವಾಗ, ಪಕ್ಕದಲ್ಲೇ ಕುಳಿತಿದ್ದ ಜಯಾ ಕಣ್ಣೀರು ಹಾಕಿದ್ದನ್ನೂ ರೇಖಾ ಗಮನಿಸಿದ್ದಳು. ಇದನ್ನು ಬೇರೊಂದು ಕಡೆ ಆಕೆ ಹೇಳಿಕೊಂಡಿದ್ದಾಳೆ. ಇದಾದ ಬಳಿಕ, ತಾನಿನ್ನು ರೇಖಾ ಜೊತೆಗೆ ನಟಿಸುವುದಿಲ್ಲ ಎಂದು ಅಮಿತಾಭ್ ಎಲ್ಲ ಪ್ರೊಡ್ಯೂಸರ್‌ಗಳಿಗೆ, ಡೈರೆಕ್ಟರ್‌ಗಳಿಗೆ ಹೇಳಿಬಿಟ್ಟ. ಅದಕ್ಕೂ ಹಿನ್ನೆಲೆಯಲ್ಲಿ ಜಯಾ ಒತ್ತಡವಿತ್ತು. ಇದನ್ನೂ ರೇಖಾ ಹೇಳಿಕೊಂಡಿದ್ದಾಳೆ.