ಆದಿಪುರುಷ್ ವಿವಾದದ ಬೆನ್ನಲ್ಲೇ ಪ್ರತ್ಯಕ್ಷಳಾದ ರಾಮಾಯಣದ ಸೀತೆ! ನಟಿ ಹೇಳಿದ್ದೇನು?
80ರ ದಶಕದಲ್ಲಿ ಫೇಮಸ್ ಆಗಿದ್ದ ರಾಮಾಯಣದ ಸೀತೆ ದೀಪಿಕಾ ಆದಿಪುರುಷ್ ಚಿತ್ರದ ಕುರಿತು ಹೇಳಿದ್ದೇನು?
‘ಆದಿಪುರುಷ್’ (Adipurush) ಚಿತ್ರ ಬಿಡುಗಡೆಯಾದಾಗಿನಿಂದಲೂ ವಿವಾದದ ಸುಳಿಯಲ್ಲಿಯೇ ಸುತ್ತುತ್ತಿದೆ. ಇದರ ವೇಷಭೂಷಣದಿಂದ ಹಿಡಿದು ಪಾತ್ರಧಾರಿಗಳ ಮಾತು, ಕೃತ್ಯ, ಮೇಕಪ್, ಡೈಲಾಗ್ ಎಲ್ಲವನ್ನೂ ಟ್ರೋಲ್ ಮಾಡಲಾಗುತ್ತಿದೆ. ರಾಮನಾಗಿ ಕಾಣಿಸಿಕೊಂಡ ಪ್ರಭಾಸ್, ಸೈಫ್ ಅಲಿ ಖಾನ್ ಅವರ ರಾವಣನ ಪಾತ್ರ, ದೇವದತ್ತ ನಾಗೆ ಅವರ ಆಂಜನೇಯನ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳಲ್ಲಿಯೂ ಪ್ರೇಕ್ಷಕರು ಹುಳುಕು ಎತ್ತಿ ತೋರಿಸಿದ್ದಾರೆ. ಕೆಲವರು ಈ ಚಿತ್ರವನ್ನು ಹೊಗಳುತ್ತಿದ್ದರೆ, ಇದು ಹೊಗಳಿಕೆಗಿಂತ ತೆಗಳಿಕೆಯೇ ದಿನೇ ದಿನೇ ಹೆಚ್ಚಾಗುತ್ತಿದೆ. ಆದಿಪುರುಷ್ ಸೀತೆಯ ಪಾತ್ರವೂ ಟ್ರೋಲ್ ಆಗುತ್ತಿರುವ ಬೆನ್ನಲ್ಲೇ ರಾಮಾಯಣ ಸೀತೆ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಹೌದು! ರಾಮಾಯಣ ಎಂದಾಕ್ಷಣ ಬಹುತೇಕ ಎಲ್ಲರ ಕಣ್ಮುಂದೆ ಬರುವುದು ದೂರದರ್ಶನದಲ್ಲಿ 80ರ ದಶಕದಲ್ಲಿ ಬರುತ್ತಿದ್ದ ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ. ಜನರು ಖುದ್ದು ಟಿ.ವಿಯನ್ನು ಪೂಜಿಸಿ, ನೈವೇದ್ಯ ಸಮರ್ಪಿಸಿ ರಾಮಾಯಣ ನೋಡುತ್ತಿದ್ದರು. ಅಂಥ ಒಂದು ಧಾರ್ಮಿಕ ಭಾವನೆಯನ್ನು ಇದು ಬೆಳೆಸಿಕೊಂಡಿತ್ತು. ಇದರ ಪಾತ್ರಧಾರಿಗಳಾದ ರಾಮ, ಸೀತೆ, ಹನುಮ ಇತ್ಯಾದಿ ಪಾತ್ರಧಾರಿಗಳನ್ನು ಖುದ್ದು ದೇವರೆಂದೇ ಭಾವಿಸುತ್ತಿದ್ದರು ಎಷ್ಟೋ ಮಂದಿ. ಅವರು ಎಲ್ಲಿಯಾದರೂ ಕಾಣಿಸಿಕೊಂಡರೆ ಅವರ ಕಾಲಿಗೆ ಬೀಳುತ್ತಿದುದು ಉಂಟು. ಅಂಥ ರಾಮಾಯಣ ಧಾರಾವಾಹಿಯಲ್ಲಿ ಸೀತೆಯ ಪಾತ್ರಧಾರಿಯಾದವರು ನಟಿ ದೀಪಿಕಾ ಚಿಖ್ಲಿಯಾ (Deepika Chikhalia).
ಆದಿಪುರುಷ್ ಸಿನಿಮಾ ಸಕತ್ ಟ್ರೋಲ್ ಆಗುತ್ತಿದ್ದಂತೆಯೇ ಈಗ ದೀಪಿಕಾ ಅವರು ಇದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈಗ ಪುನಃ ರಾಮಾಯಣದ ಅದೇ ಸೀತೆಯ ರೀತಿ ಸಿಂಗರಿಸಿಕೊಂಡು ಆ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ದೀಪಿಕಾ, ಆದಿಪುರುಷ್ ಕಾಂಟ್ರವರ್ಸಿ ಕುರಿತು ಮಾತನಾಡಿದ್ದಾರೆ. ಈ ಚಿತ್ರವನ್ನು ದೀಪಿಕಾ ಖುದ್ದು ನೋಡಿಲ್ಲವಂತೆ. ಆದರೆ ಜನರು ಟ್ರೋಲ್ (Troll)ಮಾಡುತ್ತಿರುವುದನ್ನು ವಿಷಾದಿಸಿರುವ ಅವರು ಆದಿಪುರುಷ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Sonal Chauhan: ಆದಿಪುರುಷ್ನ ಎರಡೇ ದೃಶ್ಯಕ್ಕೆ 'ಮಂಡೋದರಿ'ಗೆ ಈ ಪರಿ ಸಂಭಾವನೆಯಾ?
ಇತ್ತೀಚಿನ ದಿನಗಳಲ್ಲಿ ರಾಮಾಯಣದ (Ramayana) ಧಾರಾವಾಹಿಯಾಗಲೀ, ಸಿನಿಮಾ ಆಗಲೀ ಹೆಚ್ಚಾಗಿ ಬರುತ್ತಿರುವ ಬಗ್ಗೆ ನೋವಿನಿಂದ ನುಡಿದಿರುವ ದೀಪಿಕಾ, ‘ಪ್ರತಿ ಬಾರಿ ರಾಮಾಯಣದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಅಥವಾ ಸೀರಿಯಲ್ ಮಾಡಿದಾಗ ಟೀಕೆ ಎದುರಾಗುತ್ತದೆ. ಪ್ರತಿ ಎರಡು-ಮೂರು ವರ್ಷಕ್ಕೊಮ್ಮೆ ನಾವು ರಾಮಾಯಣವನ್ನು ಯಾಕೆ ಸಿನಿಮಾ ಮಾಡುತ್ತೇವೆ ಎಂಬುದು ತಿಳಿದಿಲ್ಲ. ರಾಮಾಯಣ ಇರುವುದು ಮನರಂಜನೆಗೆ ಅಲ್ಲ. ಅದು ಇರುವುದು ಕಲಿಕೆಗಾಗಿ. ತಲೆಮಾರುಗಳಿಂದ ನಮಗೆ ಬಂದ ಕೃತಿ ಅದು. ಅದು ಸಂಸ್ಕಾರಕ್ಕೆ ಸಂಬಂಧಿಸಿದ್ದು’ ಎಂದಿದ್ದಾರೆ. ನಾನು ಈಗ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿರುವ ಕಾರಣ, ‘ಆದಿಪುರುಷ್’ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಇನ್ನೂ ಸ್ಪಷ್ಟವಾಗಿ ಮಾತನಾಡುತ್ತೇನೆ ಎಂದಿದ್ದಾರೆ.
Adipurush Review: ಸಿನಿಮಾ ನೋಡಿ ಖ್ಯಾತ ಧಾರ್ಮಿಕ ವಿದ್ವಾಂಸರು ಹೇಳಿದ್ದೇನು?
ಅಂದಹಾಗೆ ಇತ್ತೀಚೆಗೆ, ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ (Dipika Chikhlia) ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಗಿಡ್ಡ ಲಂಗದ ಫೋಟೋ ಪೋಸ್ಟ್ ಆದ ನಂತರ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ದೀಪಿಕಾ ಬಿಳಿ ಶರ್ಟ್, ಕಪ್ಪು ಶಾರ್ಟ್ ಸ್ಕರ್ಟ್, ನೆಕ್ ಟೈ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಅವರ ಫೋಟೋ ನೋಡಿದ ನಂತರ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ನಟಿಯನ್ನು ಟ್ರೋಲ್ (Troll) ಮಾಡಲು ಪ್ರಾರಂಭಿಸಿದ್ದರು 'ನೀವು ಅಂತಹ ಬಟ್ಟೆಗಳನ್ನು ಧರಿಸಬಾರದು ದೀಪಿಕಾ ಜೀ, ನಾವು ನಿಮಗೆ ದೇವತೆಯ ಸ್ಥಾನಮಾನವನ್ನು ನೀಡಿದ್ದೇವೆ' ಎಂದಿದ್ದರು. ದೀಪಿಕಾ ಜೀ ಇದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ' ಎಂದು ಬರೆದಿದ್ದರು.