ಅಕ್ಷಯ್ ಕುಮಾರ್ ವಿಶ್ವದ ಟಾಪ್ 6 ಶ್ರೀಮಂತ ನಟ!| ಫೋರ್ಬ್ಸ್ ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ| ‘ದ ರಾಕ್’ ಖ್ಯಾತಿಯ ಜಾನ್ಸನ್‌ಗೆ ಪ್ರಥಮ ಸ್ಥಾನ
ವಾಷಿಂಗ್ಟನ್(ಆ.13): ಫೋಬ್ಸ್‌ರ್ ನಿಯತಕಾಲಿಕೆ ಅತಿ ಹೆಚ್ಚು ಸಂಭಾವನೆ ಪಡೆವ ಪುರುಷ ಸಿನಿಮಾ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ 362 ಕೋಟಿ ರು. ಗಳಿಕೆಯೊಂದಿಗೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷ 4ನೇ ಸ್ಥಾನ ಪಡೆದಿದ್ದ ಅಕ್ಷಯ್, ಈ ವರ್ಷ ಎರಡು ಸ್ಥಾನ ಇಳಿಕೆ ಕಂಡಿದ್ದಾರೆ. ಆದಾಗ್ಯೂ ಅತಿ ಹೆಚ್ಚು ಸಂಭಾವನೆ ಪಡೆದ ಅಗ್ರ 10 ಸಿನಿಮಾ ತಾರೆಯರ ಪೈಕಿ ಸ್ಥಾನ ಪಡೆದ ಬಾಲಿವುಡ್‌ನ ಏಕೈಕ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ಸೈಫೀನಾಗೆ ಲಾಕ್‌ಡೌನ್ ಬೇಬಿ: ಅಣ್ಣನಾಗ್ತಿದ್ದಾನೆ ತೈಮೂರ್
‘ದ ರಾಕ್’ ಖ್ಯಾತಿಯ ಡ್ವೇನ್ ಜಾನ್ಸನ್ 656 ಕೋಟಿ ರು. ಗಳಿಕೆಯೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. 2019ರ ಜೂ.1ರಿಂದ 2020ರ ಜೂ.1ರವರೆಗಿನ ಆದಾಯವನ್ನು ಪರಿಗಣಿಸಿ ಈ ಪಟ್ಟಿತಯಾರಿಸಲಾಗಿದೆ.
ಫೋಬ್ಸ್‌ರ್ ಪ್ರಕಾರ, ಅಕ್ಷಯ್ ಕುಮಾರ್ ಒಂದು ಚಿತ್ರಕ್ಕೆ 35ರಿಂದ 75 ಕೋಟಿ ರು.ನಷ್ಟುಸಂಭಾವನೆ ಪಡೆಯುತ್ತಿದ್ದಾರೆ. ಅಕ್ಷಯ ಕುಮಾರ್ ಅವರ ಇತ್ತೀಚಿನ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದ್ದು, 2020ರಲ್ಲಿ ತೆರೆಕಂಡ ಹಲವು ಚಿತ್ರಗಳು 700 ಕೋಟಿ ರು.ವರೆಗೂ ಸಂಪಾದಿಸಿವೆ. ಸದ್ಯ ಅಕ್ಷಯ್ ಕುಮಾರ್ ‘ದಿ ಎಂಡ್’ ಎಂಬ ಅಮೆಜಾನ್ ಪ್ರೈಮ್‌ನ ಟೀವಿ ಸೀರಿಸ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಖಿ ಹಬ್ಬಕ್ಕೆ ತಂಗಿಗೆ ಅಕ್ಷಯ್ ಕುಮಾರ್ ಬಂಪರ್ ಗಿಫ್ಟ್.! ಹೊಸ ಸಿನಿಮಾ 'ರಕ್ಷಾ ಬಂಧನ್'
ಟಾಪ್ 10 ಶ್ರೀಮಂತ ನಟರು
1.ಡ್ವೇನ್ ಜಾನ್ಸನ್ .656 ಕೋಟಿ ರೂ.
2. ರಿಯಾನ್ ರೆನಾಲ್ಡ್$್ಸ 536 ಕೋಟಿ ರೂ.
3. ಮಾರ್ಕ್ ವಾಲ್ಬರ್ಗ್ 435 ಕೋಟಿ ರೂ.
4. ಬೆನ್ ಅಫ್ಲೆಕ್ 412 ಕೋಟಿ ರೂ.
5. ವಿನ್ ಡಿಸೆಲ್ 388 ಕೋಟಿ ರೂ.
6 ಅಕ್ಷಯ್ ಕುಮಾರ್ 362 ಕೋಟಿ ರೂ.
7. ಲಿನ್ ಮ್ಯಾನುಯೆಲ್ ಮಿರಾಂಡಾ 341 ಕೋಟಿ ರೂ.
8. ವಿಲ್ ಸ್ಮಿತ್ 341 ಕೋಟಿ ರೂ.
9. ಅಡಮ್ ಸಂಡ್ಲರ್ 352 ಕೋಟಿ ರೂ.
10. ಜಾಕಿ ಚಾನ್ 300 ಕೋಟಿ ರೂ.
