ಬಾಲಿವುಡ್ ಸೆಲಬ್ರಿಟಿ ಸೈಫ್ ಆಲಿಖಾನ್ ಹಾಗೂ ಕರೀನಾ ಮಗ ತೈಮೂರ್‌ ಅಣ್ಣನಾಗಲಿದ್ದಾನೆ. ಹೌದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬೇಬೂ. ಮುದ್ದು ತೈಮೂರ್ ಒಂದು ಫೋಟೋ ಶೇರ್ ಆದ್ರೂ ಫ್ಯಾನ್ಸ್ ಮುಗಿಬಿದ್ದು ನೋಡುತ್ತಾರೆ. ಇದೀಗ ಮೂವರ ಕುಟುಂಬಕ್ಕೆ ಇನ್ನೊಂದು ಪಾಪು ಬರಲಿದೆ. ಪುಟ್ಟ ತೈಮೂರ್ ಅಣ್ನನಾಗಲಿದ್ದಾನೆ.

ಕರೀನಾ ಹಾಗೂ ಸೈಫ್ ತಮ್ಮ ಎರಡನೇ ಮಗುವನ್ನು ಸ್ವಾಗತೀಸೋಕೆ ಸಿದ್ಧರಾಗಿದ್ದಾರೆ ಅನ್ನೋ ಸುದ್ದಿ ಎಲ್ಲಡೆ ವೈರಲ್ ಆಗಿದೆ. ಕರೀನಾಳ ಆಪ್ತ ಕುಟುಂಬ ಹಾಗೂ ಬಾಲಿವುಡ್‌ ಸ್ನೇಹಿತರಿಗೆ ಇದು ಮೊದಲೇ ತಿಳಿದಿತ್ತು ಎನ್ನಲಾಗುತ್ತಿದೆ. ಫ್ಯಾನ್ಸ್ ಮಾತ್ರ ಈ ಸುದ್ದಿಯಿಂದ ಫುಲ್ ಖುಷ್ ಆಗಿದ್ದಾರೆ.

ಕಿಸ್ಸಿಂಗ್ ಸೀನ್‌ಗೆ ಸುತಾರಾಂ ಒಪ್ಪೋಲ್ಲ ಬಾಲಿವುಡ್‌ನ ಈ ಸ್ಟಾರ್ಸ್!

ಈ ಮೊದಲು ಇಂಟರ್‌ವ್ಯೂ ಒಂದರಲ್ಲಿ ತಾನು ಹಾಗೂ ಸೈಫ್‌ ತಮ್ಮ ಕುಟುಂಬವನ್ನು ಇನ್ನಷ್ಟು ದೊಡ್ಡದಾಗಿಸುವ ಪ್ಲಾನ್‌ನಲ್ಲಿದ್ದೇವೆ. ಇನ್ನೆರಡು ವರ್ಷದಲ್ಲಿ ಇನ್ನೊಂದು ಮಗುವನ್ನು ಹೊಂದಲಿದ್ದೇವೆ ಎಂದು ಹೇಳಿದ್ದರು. ಅಂತೂ ದಂಪತಿಯ ಪ್ಲಾನ್ ವರ್ಕೌಟ್ ಆಗಿದೆ.

ಕರೀನಾ ಮೊದಲು ಗರ್ಭಿಯಾಣಿದ್ದಾಗಲೂ ಆಕೆಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೂವಿಯಿಂದ ದೂರವಿದ್ದರೂ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

ಮತ್ತೆ ಅಮ್ಮನೊಂದಿಗೆ ಮನೆಯಿಂದ ಹೊರಗೆ ಕಾಣಿಸಿಕೊಂಡ ತೈಮೂರ್‌

ಕರೀನಾ ಕರಣ್‌ ಜೋಹರ್‌ನ ತಖ್ತ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಣವೀರ್‌ ಸಿಂಗ್, ಅಲಿಯಾ ಭಟ್, ವಿಕ್ಕಿ ಕೌಷಲ್, ಭೂಮಿ ಪಡ್ನೇಕರ್, ಜಾಹ್ನವಿ ಕಪೂರ್ ಹಾಗೂ ಅನಿಲ್ ಕಪೂರ್ ನಟಿಸಲಿದ್ದಾರೆ. ಅಮೀರ್ ಖಾನ್ ಅಭಿನಯದ ಲಾಲ್‌ ಸಿಂಗ್ ಛಡ್ಡ ಸಿನಿಮಾದಲ್ಲಿಯೂ ಕರೀನಾ ಕಾಣಿಸಿಕೊಳ್ಳಲಿದ್ದಾರೆ.