ಮುಂಬೈ(ಜೂ. 11)  ದುಷ್ಕರ್ಮಿಗಳಿಂದ ದಾರುಣ ಹತ್ಯೆಗೀಡಾದ ಎರಡೂವರೆ ವರ್ಷದ ಬಾಲಕಿ ಟ್ವಿಂಕಲ್ ಶರ್ಮಾ ಗೆ ನ್ಯಾಯ ಕಲ್ಪಿಸಬೇಕು ಎಂದು ಅನೇಕ ಸೆಲೆಬ್ರಿಟಿಗಳೂ ಟ್ವೀಟ್ ಮಾಡಿದ್ದರು. ನಟಿ ಸ್ವರಾ ಭಾಸ್ಕರ್ ಸಹ ಟ್ವಿಟ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.

ಆದರೆ ಟ್ವೀಟ್ ಮಾಡಿಯೂ ಸ್ವರಾ ಭಾಸ್ಕರ್ ಟ್ರೋಲ್ ಗೆ ಗುರಿಯಾಗಿದ್ದಾರೆ. 'ರಷ್ಯಾ ಪ್ರವಾಸದಿಂದ ಈಗಷ್ಟೆ ಬಂದು ನೋಡುತ್ತಿದ್ದೇನೆ. ಸೋಶಿಯಲ್ ಮೀಡಿಯಾಕ್ಕೂ ರಜೆ ನೀಡಿದ್ದೆ.  ಬಾಲಕಿ ಟ್ವಿಂಕಲ್ ಖನ್ನಾ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಇಂಥ ಅಪರಾಧ ಮುಂದೆ ಎಂದೂ ಆಗದಂತಹ ಶಿಕ್ಷೆ ಆಗಬೇಕು' ಎಂದು ಒತ್ತಾಯಿಸಿದ್ದರು.

ಪುಟ್ಟ ಬಾಲಕಿ ಟ್ವಿಂಕಲ್ ಶರ್ಮಾ ಕಣ್ಣು ಕಿತ್ತ ಕಿರಾತಕರು

ಸ್ವರಾ ಭಾಸ್ಕರ್ ಗೆ ಸೋಶಿಯಲ್ ಮೀಡಿಯಾದಲ್ಲೇ ಉತ್ತರ ನೀಡಿದ ನೆಟ್ಟಿಗರು, ಆಸಿಫಾ ಅತ್ಯಾಚಾರದ ವೇಳೆ ನೀವು ಹೇಗೆ ಪ್ರತಿಕ್ರಿಯೆ ನೀಡಿ ಹೋರಾಟ ಮಾಡಿದ್ದೀರಿ. ಈ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಲು ಇಷ್ಟೊಂದು ಸಮಯ ಬೇಕಾಯಿತಾ? ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಆದರೆ  ಸ್ವರಾ ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.