ನವದೆಹಲಿ[ಜೂ. 07]  ಅದೊಂದು ದಾರುಣ ಹತ್ಯೆ. ಎರಡೂವರೆ ವರ್ಷದ ಕಂದನನ್ನು ಸಾಯಿಸಿದ ದುಷ್ಕರ್ಮಿಗಳ ವಿರುದ್ಧ  ಇಡೀ ದೇಶವೇ ದನಿ ಎತ್ತುತ್ತಿದೆ. ಅಲಿಘಡದ ಈ ಪ್ರಕರಣ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದೆ.

ಸೋಶಿಯಲ್ ಮೀಡಿಯಾ ಮೂಲಕ ಅಕ್ಷಯ್ ಕುಮಾರ್, ಅರ್ಜುನ್ ಕಪೂರ್, ಟ್ವಿಂಕಲ್ ಖನ್ನಾ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಟ್ವಿಂಕಲ್ ಖನ್ನಾ ಸಹ ಬಾಲಕಿಯ ಸಾವಿಗೆ ಕಾರಣರಾದವರಿಗೆ ಘೋರ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಗೌರಿ, ಕಲಬುರ್ಗಿ ಹತ್ಯೆ ಆರೋಪಿ ಕುಟುಂಬ ಬೀದಿಗೆ!

5000 ರೂ. ಸಾಲದ ಹಣಕ್ಕೆ ಬಾಲಕಿ ಕುಟುಂಬ ಮತ್ತು ಸಾಲಗಾರರ ನಡುವೆ ಉಂಟಾದ ಸಂಘರ್ಷದಲ್ಲಿ ಮಗುವನ್ನು ದುರುಳರು ಸಾಯಿಸಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.  ಬಾಲಕಿಯನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದ್ದರೂ ಪೋಸ್ಟ್ ಮಾರ್ಟಂ ವರದಿಯಲ್ಲಿ  ಶೋಷಣೆ ಮಾಡಿ ಸಾಯಿಸಿದ್ದಾರೆ ಎಂಬುದಕ್ಕೆ ಯಾವ ಆಧಾರ ಸಿಕ್ಕಿರಲಿಲ್ಲ. ಮಗುವನ್ನು ದಾರುಣವಾಗಿ ಹತ್ಯೆ ಮಾಡಿ ಕಣ್ಣುಗಳನ್ನು ಕೀಳಲಾಗಿತ್ತು.