Asianet Suvarna News Asianet Suvarna News

ಎಲ್ಲ ಕಥೆಗಳೂ ಸುಖಾಂತ್ಯ ಕಾಣುವುದಿಲ್ಲ, ಮಿಸ್ ಯೂ ಕ್ವೀನ್; ಈ ಕ್ಲಿಪಿಂಗ್‌ಗೆ ಕಣ್ಣೀರೇ ಕಾಮೆಂಟ್..!

ಜಿಎಸ್ ರಘು ಎಂಬ ಫ್ಯಾಮಿಲಿ ರಿಲೇಟಿವ್ ಜೊತೆ 2003ರಲ್ಲಿ ನಟಿ ಸೌಂದರ್ಯ ಅವರು ಸಪ್ತಪದಿ ತುಳಿದಿದ್ದರು. ಆದರೆ ಅದಾಗಿ ಒಂದೇ ವರ್ಷಕ್ಕೆ ಸೌಂದರ್ಯ ಅವರು ವಿಮಾನ ದುರ್ಘಟನೆ ಮೂಲಕ ಸಾವಿಗೀಡಾದರು..

Actress Soundarya married in 2003 and died 2004 in an aircraft crash at bangalore srb
Author
First Published Jul 9, 2024, 5:25 PM IST

ನಟಿ ಸೌಂದರ್ಯ (Soudarya) ಬಗ್ಗೆ ಸಿನಿಪ್ರೇಮಿಗಳಿಗೆ ಹೇಳಬೇಕಾಗಿಯೇ ಇಲ್ಲ. ಸೌಂದರ್ಯ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರು ನಟಿಸಿದ ಸಿನಿಮಾಗಳ ಮೂಲಕ ಅವರು ಯಾವತ್ತಿಗೂ ನಮ್ಮೊಂದಿಗೆ ಇದ್ದಾರೆ. ನಟಿ ಸೌಂದರ್ಯ ಅವರು ಕನ್ನಡದ ಮನೆಮಗಳಾದರೂ ಸಿನಿಮಾ ಮೂಲಕ ಸ್ಟಾರ್ ಆಗಿ ಮೆರೆದಿದ್ದು ನೆರೆಯ ಆಂಧ್ರದಲ್ಲಿ. ಅಂದು ಆಂಧ್ರ ಪ್ರದೇಶವಾಗಿದ್ದ ರಾಜ್ಯ ಈಗ ಆಂಧ್ರ ಹಾಗು ತೆಲಂಗಾಣ ಎಂದು ಎರಡು ರಾಜ್ಯಗಳು ಆಗಿವೆ ಅಷ್ಟೇ. 

ನಟಿ ಸೌಂದರ್ಯ ಅವರು ಹತ್ತು ವರ್ಷಗಳ ಕಾಲ ತೆಲುಗು ಸಿನಿಮಾರಂಗದಲ್ಲಿ ನಂಬರ್ ಒನ್ ಸ್ಟಾರ್ ನಟಿ ಎಂಬಂತೆ ಮಿಂಚಿದವರು. ಆದರೆ ಅಷ್ಟೇ ಬೇಗ ಮಿಂಚಿ ಮರೆಯಾದವರ ಸಾಲಿಗೆ ಸೇರಿಕೊಂಡಿದ್ದು ಮಾತ್ರ ವಿಧಿಯ ವಿಪರ್ಯಾಸವೇ ಸರಿ. 18 ಜುಲೈ 1976ರಲ್ಲಿ ಜನಸಿದ್ದ ಸೌಂದರ್ಯ ಅವರು 17 ಏಪ್ರಿಲ್ 2004ರಲ್ಲಿ ವಿಮಾನ ದುರ್ಘಟನೆಯಲ್ಲಿ ಇಹಲೋಕ ತ್ಯಜಿಸಿಬಿಟ್ಟರು. ಕೇವಲ 27 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿದ್ದರು. 

ಹಾಸನದಲ್ಲೇ ಹುಟ್ಟಿರೋ ಮಗ ನಾನು, ನಮ್ ತಂದೆ-ತಾಯಿ ಹಾಸನದವ್ರೇ..; KGF ಸ್ಟಾರ್ ಯಶ್!

ಜಿಎಸ್ ರಘು ಎಂಬ ಫ್ಯಾಮಿಲಿ ರಿಲೇಟಿವ್ ಜೊತೆ 2003ರಲ್ಲಿ ನಟಿ ಸೌಂದರ್ಯ ಅವರು ಸಪ್ತಪದಿ ತುಳಿದಿದ್ದರು. ಆದರೆ ಅದಾಗಿ ಒಂದೇ ವರ್ಷಕ್ಕೆ ಸೌಂದರ್ಯ ಅವರು ವಿಮಾನ ದುರ್ಘಟನೆ ಮೂಲಕ ಸಾವಿಗೀಡಾದರು, ನಟಿ ಸೌಂದರ್ಯ ಅವರು ಸಹೋದರ ಅಮರನಾಥ್ ಅವರು ಕೂಡ ತಮ್ಮ ತಂಗಿಯ ಜೊತೆಯಲ್ಲೇ ಸುಟ್ಟು ಕರಕಲಾಗಿ ಹೋದರು. ನಟಿ ಸೌಂದರ್ಯ ಹಾಗೂ ಅವರ ಅಣ್ಣನ ಸಾವು ಇಂದಿಗೂ ಸಿನಿಪ್ರೇಕ್ಷಕರನ್ನು ಕಾಡುತ್ತಿದೆ. 

ಶಿವಣ್ಣನ ಮಗಳ ಸಿನಿಮಾಗೆ ಎಂಟ್ರಿ ಕೊಟ್ರು ಅಚ್ಯುತ್ ಕುಮಾರ್, ಹಳೇ ಬೇರು ಹೊಸ ಚಿಗುರು ಆಟವೇ..? 

ಇದೀಗ ನಟಿ ಸೌಂದರ್ಯ ಅವರ ಮದುವೆಯ ವೀಡಿಯೋ ಕ್ಲಿಪ್ಪಿಂಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದಕ್ಕೆ ಎಲ್ಲ ಕಥೆಗಳೂ ಸುಖಾಂತ್ಯ ಕಾಣುವುದಿಲ್ಲ, ಮಿಸ್ ಯೂ ಕ್ವೀನ್' ಎಂದ ಕ್ಯಾಪ್ಶನ್ ಕೊಟ್ಟಿದ್ದಾರೆ. ಸುತ್ತಾಡುತ್ತಿರುವ ಈ ಸೋಷಿಯಲ್ ಮೀಡಿಯಾದ ಕ್ಲಿಪ್ಪಿಂಗ್‌ಗೆ ಬಹುತೇಕವಾಗಿ ಕಣ್ಣೀರ ಇಮೋಜಿಯೇ ಕಾಮೆಂಟ್‌ ಆಗಿದೆ. 'ವಿ ಮಿಸ್ ಯೂ' ಎಂಬ ಕಾಮೆಂಟ್‌ಗಳಿಗಂತೂ ಲೆಕ್ಕವೇ ಇಲ್ಲ. 

ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!

ಸೌಂದರ್ಯ ದೇವತೆ ಎಂಬಂತೆ ಇದ್ದ ನಟಿ ಸೌಂದರ್ಯ ನಿಧನದಿಂದ ತೆಲುಗು ಚಿತ್ರರಂಗಕ್ಕಾದ ನಷ್ಟ ಅಷ್ಟಿಷ್ಟಲ್ಲ. ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ನಟಿಸುತ್ತಿದ್ದ ಸೌಂದರ್ಯ ಅವರ ಸಾವನ್ನು ಇಡೀ ಚಿತ್ರರಂಗಕ್ಕಾದ ಸಾವು ಎಂತಲೆ ಹೇಳಬೇಕು. ಕನ್ನಡದಲ್ಲಿ ದ್ವೀಪ ಎಂಬ ಚಿತ್ರವನ್ನು ಸ್ವತಃ ಸೌಂದರ್ಯ ಅವರೇ ನಿರ್ಮಿಸಿ, ನಟಿಸಿದ್ದರು. ಅದಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು. ಬೇರೆ ಭಾಷೆಯಲ್ಲಿ ಮಿಂಚಿದ್ದರೂ ಕನ್ನಡದ ಮೇಲಿನ ಪ್ರೀತಿ ಅವರಿಗೆ ಸ್ವಲ್ಪವೂ ಕಡಿಮೆ ಆಗಿರಲಿಲ್ಲ. 

ಏನ್ರೀ ಇದು ನಟ ವಿಷ್ಣುವರ್ಧನ್ ಕಥೆ, ಮತ್ತೊಂದು ದಾಖಲೆ ವಿಷ್ಣುವರ್ಧನ್ ಹೆಸರಲ್ಲಿದೆ..!

Latest Videos
Follow Us:
Download App:
  • android
  • ios