ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಲವ್‌ನಲ್ಲಿದ್ದಾರಾ? ಇಲ್ಲವಾ? ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೀಗಿರುವಾಗ ರಶ್ಮಿಕಾ ಅವರು ರಿಲೇಶನ್‌ಶಿಪ್‌ನಲ್ಲಿರುವ ವಿಚಾರವನ್ನು ಅಧಿಕೃತಪಡಿಸಿದ್ದಾರಾ?
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಾವು ರಿಲೇಶನ್‌ಶಿಪ್‌ನಲ್ಲಿರುವ ವಿಚಾರವನ್ನು ಪರೋಕ್ಷವಾಗಿ ಹೇಳಿದಂತೆ. ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ ಎಂದು ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಮಾತನಾಡುತ್ತ, “ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಇಂದು ಇರುವ ಹೆಸರು, ಪ್ರಸಿದ್ಧಿ ನಾಳೆ ಇರಬಹುದು, ಇಲ್ಲದೇ ಇರಬಹುದು. ಯಶಸ್ಸು ಬರುತ್ತದೆ, ಹೋಗುತ್ತದೆ, ಇದು ಶಾಶ್ವತ ಅಲ್ಲ. ಆದರೆ ಮನೆ ಎಂದಿಗೂ ಶಾಶ್ವತ. ಎಷ್ಟೇ ಹೆಸರು ಸಿಕ್ಕರೂ ಕೂಡ, ನಾನು ಓರ್ವ ಮಗಳು, ಓರ್ವ ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು” ಎಂದು ಹೇಳಿದ್ದಾರೆ. ಸಂಗಾತಿ ಎಂದು ಪದ ಬಳಸಿರುವ ರಶ್ಮಿಕಾ ಮಂದಣ್ಣ ಅವರು ತಾವು ರಿಲೇಶನ್‌ಶಿಪ್‌ನಲ್ಲಿರುವ ವಿಚಾರವನ್ನು ಅಧಿಕೃತಪಡಿಸಿದರೇ ಎಂಬ ಸಂಶಯ ಬಂದಿದೆ.
ಮೊದಲ ಪ್ರೀತಿ ಮುರೀತು…!
ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿ ಕೆಲ ವರ್ಷಗಳು ಕಳೆದಿವೆ. 2016ರಲ್ಲಿ ʼಕಿರಿಕ್ ಪಾರ್ಟಿʼ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಆ ನಂತರ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. ಅದೇ ಸಮಯಕ್ಕೆ ರಶ್ಮಿಕಾ ಮಂದಣ್ಣ ಅವರು ತೆಲುಗಿಗೆ ಹಾರಿದರು. ಆ ಸಮಯದಲ್ಲಿ ಇವರಿಬ್ಬರದ್ದು ಬ್ರೇಕಪ್ ಆಯ್ತು. ಈ ಬ್ರೇಕಪ್‌ಗೆ ಕಾರಣ ಏನು ಎಂದು ಇನ್ನೂ ಸರಿಯಾಗಿ ರಿವೀಲ್ ಮಾಡಿಲ್ಲ.
ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಬಗ್ಗೆ ರಶ್ಮಿಕ ಹೇಳಿಕೆ ವೈರಲ್
ವಿಜಯ್, ರಶ್ಮಿಕಾ ಲವ್?
ಇನ್ನು ನಟ ವಿಜಯ್ ದೇವರಕೊಂಡ ಜೊತೆಗೆ ʼಗೀತ ಗೋವಿಂದʼ, ʼಡಿಯರ್ ಕಾಮ್ರೇಡ್ʼ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದರು. ಇವರಿಬ್ಬರು ಏಕಕಾಲಕ್ಕೆ ವಿದೇಶಕ್ಕೆ ಹೋಗಿ ಹಾಲಿಡೇ ಕಳೆಯುತ್ತಿದ್ದರು. ಅಷ್ಟೇ ಅಲ್ಲದೆ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಇರುವ ಸಾಕಷ್ಟು ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸಾಕಷ್ಟು ಬಾರಿ ಈ ಜೋಡಿಗೆ ಲವ್ ವಿಷಯ ಕೇಳಿದಾಗ ಇವರಿಬ್ಬರು, “ನಾವಿಬ್ಬರೂ ಸ್ನೇಹಿತರು. ನಮಗೆ ಸಾಕಷ್ಟು ಕಾಮನ್ ಫ್ರೆಂಡ್ಸ್ ಇದ್ದಾರೆ” ಎಂದು ಹೇಳಿದ್ದಾರೆ. ವಿಜಯ್ ಅವರು ಒಂದು ಸಂದರ್ಶನದಲ್ಲಿ “ರಶ್ಮಿಕಾ ನನ್ನ ಡಾರ್ಲಿಂಗ್” ಎಂದಿದ್ದರು. ಅಷ್ಟೇ ಅಲ್ಲದೆ “ನನಗೆ ಈಗ 35 ವರ್ಷ ವಯಸ್ಸು. ನಾನು ಸಿಂಗಲ್ ಆಗಿ ಇರ್ತೀನಿ ಅಂತ ಅನಿಸತ್ತಾ?” ಎಂದು ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲದೆ ಒಂದು ದಿನ ಹುಡುಗಿಯ ಕೈ ಫೋಟೋವನ್ನು ಶೇರ್ ಮಾಡಿಕೊಂಡು, ತಾವು ಲವ್‌ನಲ್ಲಿರೋದು ಪಕ್ಕಾ ಎಂದು ಹೇಳಿದ್ದರು.
ನೀನು ನನ್ನ ಫ್ಯಾಮಿಲಿ ಎಂದಿದ್ದ ರಶ್ಮಿಕಾ ಮಂದಣ್ಣ…!
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಎಲ್ಲೇ ಹೋದರೂ ಕೂಡ, ಅವರಿಗೆ ಲವ್ ಬಗ್ಗೆ ಪ್ರಶ್ನೆ ಬರುತ್ತಲೇ ಇರುತ್ತದೆ. ಅಷ್ಟೇ ಅಲ್ಲದೆ ಪ್ರಶಸ್ತಿ ಸಮಾರಂಭಗಳಲ್ಲಿ ಇವರಿಬ್ಬರ ಕಾಲೆಳೆಯಲಾಗುತ್ತದೆ. ಹೀಗಿದ್ದರೂ ಈ ಜೋಡಿ ಲವ್ ಮಾಡ್ತಿರುವ ವಿಷಯದ ಬಗ್ಗೆ ತುಟಿಕ್ ಪಿಟಿಕ್ ಅಂದಿಲ್ಲ. ಇನ್ನೊಂದು ಕಡೆ ಸುದ್ದಿಗೋಷ್ಠಿಯೊಂದರಲ್ಲಿ ವಿಜಯ್ ದೇವರಕೊಂಡ ಅವರ ಸಹೋದರ ಬಳಿ ರಶ್ಮಿಕಾ ಮಂದಣ್ಣ ಅವರು, “ನೀನು ನನ್ನ ಫ್ಯಾಮಿಲಿ” ಎಂದು ಹೇಳಿದ್ದರು.
ಯಾರಾದ್ರೂ ಟೇಕ್ ಕೇರ್ ಎಂದರೆ ಲಘುವಾಗಿ ಪರಿಗಣಿಸಬೇಡಿ, ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?
ಭವಿಷ್ಯ ಹೇಗಿರುತ್ತದೆ?
ಇನ್ನು ಪ್ರಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು, “ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆದರೂ ಡಿವೋರ್ಸ್ ಆಗುತ್ತದೆ. ರಶ್ಮಿಕಾ ಅವರ ವೃತ್ತಿಜೀವನ ಚೆನ್ನಾಗಿರುತ್ತದೆ, ಆದರೆ ವೈಯಕ್ತಿಕ ಜೀವನ ಚೆನ್ನಾಗಿರೋದಿಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
