ನಟಿ ರಾಗಿಣಿ ದ್ವಿವೇದಿ ಮೂಲತಃ ಕನ್ನಡಿಗರು ಅಲ್ಲದಿದ್ದರೂ ಇಲ್ಲಿನ ಸಿನಿಮಾಗಳಲ್ಲಿ ನಟಿಸಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು... ಇತ್ತೀಚೆಗೆ ನಟಿ ರಾಗಿಣಿ ಅವರು 'ಸಿಂಧೂರಿ' ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆ ಆಗಲಿದೆ...

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಕೆಲವು ವೈಯಕ್ತಿಕ ಸಮಸ್ಯೆಗಳಲ್ಲಿ ಈ ಮೊದಲು ಸಿಲುಕಿದ್ದ ನಟಿ ರಾಗಿಣಿ ದ್ವಿವೇದಿ ಅವರು ಎಲ್ಲದರಿಂದ ಈಗ ಕ್ಲೀನ್ ಚಿಟ್ ಪಡೆದುಕೊಂಡು ನೆಮ್ಮದಿಯಿಂದ ಇದ್ದಾರೆ ಈಗ. ಇತ್ತೀಚೆಗೆ ಸಾಕಷ್ಟು ಫಂಕ್ಷನ್‌ಗಳನ್ನೂ ಅಟೆಂಡ್ ಮಾಡುತ್ತಿದ್ದಾರೆ ನಟಿ ರಾಗಿಣಿ. ಅದೇ ರೀತಿ, ಅಲ್ಲೊಂದು ವರ್ಣರಂಜಿತ ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಗಿಣಿ ದ್ವಿವೇದಿ ಹಾಗೂ ರಾಜವರ್ಧನ್ (Rajavardhan) ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ .

ಗಿರೀಶ್ ಗೌಡ ಅವರ ನೇತೃತ್ವದ 'ಚಿತ್ರಸಂತೆ' ಪತ್ರಿಕೆ ಚಿತ್ರರಂಗದ ಅಚ್ಚುಮೆಚ್ಚಿನ ಪತ್ರಿಕೆ. ಕಳೆದ ಹದಿಮೂರು ವರ್ಷಗಳಿಂದ ಗಿರೀಶ್ ಗೌಡ ಅವರು 'ಚಿತ್ರಸಂತೆ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷದ ಪ್ರಶಸ್ತಿ ಸಮಾರಂಭ ಮೇ 18 ರಂದು ಅದ್ದೂರಿಯಾಗಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 'ಚಿತ್ರಸಂತೆ' ಪತ್ರಿಕೆ ಸಂಪಾದಕ ಗಿರೀಶ್ ಗೌಡ, ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್, ಉತ್ಸವ್ ಮುಂತಾದವರು ಉಪಸ್ಥಿತರಿದ್ದರು. ಗಿರೀಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೊಸ ಆಟ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್; ಜೊತೆಯಾಗಿದ್ದು ರಾಜವರ್ಧನ್!

ನಮ್ಮ‌'ಚಿತ್ರಸಂತೆ' ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹದಿಮೂರರ ಸಡಗರ. ಚಿತ್ರರಂಗದ ಗಣ್ಯರಿಗೆ ವಿವಿಧ ಆಯಾಮಗಳಲ್ಲಿ ಈ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು. ಈವರೆಗೂ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ನಮ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಸ್ವೀಕರಿಸಿ ನಮ್ಮ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಅವರಿಗೆ ನಾನು ಆಬಾರಿ. ಈ ಬಾರಿಯ ಪ್ರಶಸ್ತಿ ಸಮಾರಂಭ ಮೇ 18 ರಂದು ಹಲಸೂರಿನ Conrad ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. 'Conrad ಹೋಟೆಲ್ ಅವರು ನಮ್ಮ ಜೊತೆಗಿದ್ದಾರೆ. ಎ.ವಿ.ಆರ್ ಸಂಸ್ಥೆ ಕೂಡ ನಮ್ಮೊಂದಿಗಿದ್ದಾರೆ. ನಟಿ ರಾಗಿಣಿ ಹಾಗೂ ನಟ ರಾಜವರ್ಧನ್ ಅವರು ಸಾಥ್ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ' ಎಂದು ಗಿರೀಶ್ ಗೌಡ ತಿಳಿಸಿದರು. ‌

ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ 'ಚಿತ್ರಸಂತೆ' ಪ್ರಶಸ್ತಿ ಸಮಾರಂಭ ಯಶಸ್ವಿಯಾಗಲಿ‌ ಎಂದು ಹಾರೈಸಿದರು. ಅವರಿಬ್ಬರೂ ಜೊತೆಯಲ್ಲಿ ಹಲವರು ಸೆಲ್ಫಿ ತೆಗೆದುಕೊಂಡರು. ನಟಿ ರಾಗಿಣಿ ದ್ವಿವೇದಿ ಮೂಲತಃ ಕನ್ನಡಿಗರು ಅಲ್ಲದಿದ್ದರೂ ಇಲ್ಲಿನ ಸಿನಿಮಾಗಳಲ್ಲಿ ನಟಿಸಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ. ಇತ್ತೀಚೆಗೆ ನಟಿ ರಾಗಿಣಿ ಅವರು 'ಸಿಂಧೂರಿ' ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರವು ಸದ್ಯದಲ್ಲೇ ಬಿಡುಗಡೆ ಆಗಲಿದೆ. 

ಕಮಲ್ ಹಾಸನ್ ನೋಡಲು ಬುರ್ಖಾ ಧರಿಸಿ ಹೋಗಿದ್ದರಂತೆ ಶ್ರೀದೇವಿ: ಅಲ್ಲಿ ಆಗಿದ್ದೇನು 'ಹೇ ರಾಮ್'..!

ಒಟ್ಟಿನಲ್ಲಿ, ಸಿನಿಮಾಗಳಿಗೆ ಸಂಬಂಧಪಟ್ಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ಪರಿಪಾಠವನ್ನು ಈ ಚಿತ್ರಸಂತೆ ಸಂಸ್ಥೆ ಕಳೆದ ಹದಿಮೂರು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ನಿಜವಾಗಿಯೂ ಬೆನ್ನುತಟ್ಟಬೇಕಾದ ಸಂಗತಿಯೇ ಸರಿ! ಅದರಂತೆ, ಈ ವರ್ಷ ಕೂಡ ಮೇ 18 ರಂದು ಗ್ರಾಂಡ್ ಫಂಕ್ಷನ್ ಆಯೋಜಿಸಿದ್ದು, ಗಣ್ಯರು ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಲಿದ್ದಾರೆ. ಝಗಮಗಿಸುವ ಲೈಟಿಂಗ್ ವೇದಿಕೆಯಲ್ಲಿ ಕನ್ನಡ ಸಿನಿಮಾ ತಾರೆಯರು ಅಲ್ಲಿ ಮಿಂಚಲಿದ್ದಾರೆ. 

ಬಹುಮುಖ ಪ್ರತಿಭೆ ಚಂದ್ರಚೂಡ್ (Chakravarthy Chandrachud) ಹಾಗೂ ನಟ ರಾಜವರ್ಧನ್ (Rajavardhan) ಜೋಡಿ. ಹೌದು, ಡಿಂಗ್ರಿ ನಾಗರಾಜ್ ಮಗ ನಟ ರಾಜವರ್ಧನ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಜೋಡಿ ಬಿಗ್ ಬಜೆಟ್ ಸಿನಿಮಾವೊಂದನ್ನು ಬಿಗ್ ಪ್ರೊಡಕ್ಷನ್ ಹೌಸ್ ಮೂಲಕ ಶುರು ಮಾಡಲಿದ್ದಾರೆ. ರಾಜವರ್ಧನ್ ಉದ್ಯಮದಲ್ಲಿ ದೊಡ್ಡ ಆಶಯದೊಂದಿಗೆ ಸತತ ಪರಿಶ್ರಮ ಪಡ್ತಿರೋ 200% ಹೀರೋ ಮೆಟಿರಿಯಲ್. ಒಂದಷ್ಟು ಏಳು ಬೀಳುಗಳ ಆದ್ಮೇಲೆ ಇದೀಗ 'ಪಕ್ಕಾ ಈ ಸಲ ಗೆಲುವು ನಮ್ದೇ' ಅನ್ನೋ ನಂಬಿಕೆ ಹುಟ್ಟಿಸಿರೋ ಕಥೆ ಮತ್ತು ತಂಡ ರಾಜವರ್ಧನ್ ಪಾಲಿಗೆ ಸಿಕ್ಕಿದೆ.

ಮತ್ತೊಂದು ವಿವಾದ ಗಂಟುಬಿತ್ತಾ ವಿಜಯ್ ದೇವರಕೊಂಡಗೆ? ಅಂದಿದ್ದೇನು.. ಆಗ್ತಿರೋದೇನು?

ಅದ್ರಂತೆ ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್ ಔಟ್ ಅಂಡ್ ಔಟ್ ನಮ್ಮದೇ ಸೊಗಡಿನ ಮಾಸ್ ಎಂಟರ್ಟೈನ್ಮೆಂಟ್ ಆಗೋ ಕಥೆಯೊಂದನ್ನ ರಾಜವರ್ಧನ್ ಗಾಗಿಯೇ ಹೊತ್ತು ತಂದಿದ್ದಾರೆ. ಹಲವು ತಿಂಗಳು ಗಳಿಂದ ಚರ್ಚೆಯಲ್ಲಿದ್ದ ಇವರಿಬ್ಬರು ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆಗೆ ಮೇ ತಿಂಗಳಲ್ಲಿ ಚಿತ್ರದ ಸಂಪೂರ್ಣ ವಿವರಗಳನ್ನ ಕೊಡಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಉದ್ಯಮದ ದಿಗ್ಗಜರಿಬ್ಬರು ಈ ಚಿತ್ರವನ್ನ ಲಾಂಚ್ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

ನಟ ರಾಜವರ್ಧನ್ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ, ಇಲ್ಲಿಯವರೆಗೆ ಅವರನ್ನು ಕೇವಲ ಪರಿಶ್ರಮ ಕೈಹಿಡಿದಿದೆ, ಆದ್ರೆ ಇನ್ನೂ ಕೂಡ ಅದೃಷ್ಟ ಕೈ ಹಿಡಿದು ಮುನ್ನಡೆಸಿಲ್ಲ ಎನ್ನಬಹುದು. ದೊಡ್ಡಮಟ್ಟದ ಹಿಟ್ ಇನ್ನೂ ಅವರಿಗೆ ದಕ್ಕಿಲ್ಲ. ಈ ಚಿತ್ರದ ಮೂಲಕ ಶ್ರಮದ ಜೊತೆಗೆ ಅದೃಷ್ಟ ಕೂಡ ಕೈ ಹಿಡಿಯಲಿ ಎಂದು ರಾಜವರ್ಧನ್ ಫ್ಯಾನ್ಸ್ ಕಾಯುತ್ತಿದ್ದಾರೆ. 

ದುಲ್ಕರ್ ಸಲ್ಮಾನ್ ಆಟದಲ್ಲಿ ಯಾರು ಇದ್ದಾರೆ? ನಟನ ಭಾರೀ ಸೀಕ್ರೆಟ್ ಬಹಿರಂಗ ಆಗೋಯ್ತು!