ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್!
ನಟರು ಹಾಗೂ ರಾಜಕಾರಣಿಗಳಾಗಿರುವ ಪವನ್ ಕಲ್ಯಾಣ್ ಮತ್ತು ರೋಜಾ ಮಧ್ಯೆ ಸನ್ನಿ ಲಿಯೋನ್ ಹೆಸರು ಬಂದಿದ್ದು, ಆಂಧ್ರದ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. ಏನಿದು ವಿಷಯ?
2024ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆಂಧ್ರಪ್ರದೇಶದ ರಾಜಕೀಯದಲ್ಲಿ ಬಿರುಸಿನ ಪ್ರಚಾರ ಕಾರ್ಯ ಶುರುವಾಗಿದೆ. ಆಡಳಿತ ಪಕ್ಷವಾಗಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (Yuvajana Sramika Rythu Congress Party) ಹಾಗೂ ಇತರ ಪಕ್ಷಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ. ಅದೇ ಇನ್ನೊಂದೆಡೆ, ಜನಸೇನಾ ಪಕ್ಷದ ನಾಯಕರಾಗಿರುವ, ನಟ ಪವನ್ ಕಲ್ಯಾಣ್ ಪಕ್ಷ ಸಂಘಟನೆಗಾಗಿ ವಾರಾಹಿ ಯಾತ್ರೆ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಅವರು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರ ಈ ಯಾತ್ರೆ ಸಹಜವಾಗಿ ಇದು ಆಡಳಿತ ಪಕ್ಷದ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ವಾಗ್ಯುದ್ಧಗಳು ನಡೆಯುತ್ತಲೇ ಇವೆ. ಇತ್ತೀಚಿಗೆ ಪವನ್ ಕಲ್ಯಾಣ್ ಅವರು ಆಂಧ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಹಾಗೂ ಸರ್ಕಾರವನ್ನು ಟೀಕಿಸಿದ್ದರು. ಈಗ ಇವರ ಯಾತ್ರೆಗೆ ಅವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ತಮ್ಮ ಪಕ್ಷವನ್ನು ಟೀಕಿಸಿದ್ದರಿಂದ ಪವನ್ ಕಲ್ಯಾಣ್ ಅವರ ವಿರುದ್ಧ ಕಿಡಿ ಕಾರಲು ನಟಿ ರೋಜಾ ಶಸ್ತ್ರ ಸನ್ನದ್ಧರಾಗಿ ನಿಂತಿದ್ದಾರೆ. ನಟಿಯೂ ಆಗಿರುವ ರೋಜಾ ಸದ್ಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದಾರೆ. ಈ ಹಿಂದಿನಂತೆಯೇ ಈಗಲೂ ಅವರು ಪವನ್ ಕಲ್ಯಾಣ್ ವಿರುದ್ಧ ಕೆಂಡ ಕಾರಿದ್ದಾರೆ. ಈ ಬಾರಿ ಅವರ ಟೀಕೆಗೆ ಗುರಿಯಾಗಿದ್ದು ಪವನ್ ಕಲ್ಯಾಣ್ ಅವರ ವಾರಾಹಿ ಯಾತ್ರೆ. ಹೌದು. ಈ ಇಬ್ಬರು ನಟರು ಹಾಗೂ ರಾಜಕಾರಣಿಗಳ ನಡುವೆ ಇದಕ್ಕೆ ಸಂಬಂಧವೇ ಇಲ್ಲದ ನಟಿ, ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ (Sunny Leone) ಮಧ್ಯೆ ಬಂದಿದ್ದು, ಕೋಲಾಹಲ ಸೃಷ್ಟಿಯಾಗಿದೆ.
ಸನ್ನಿ ಲಿಯೋನ್ ಗಂಡ ಆಕೆಗೆ ಮೋಸ ಮಾಡಿದ್ರಾ..?: ನಟಿ ಹೀಗೆ ಬರೆದುಕೊಂಡಿದ್ದೇಕೆ ..?
ನಟಿ ರೋಜಾ (Roja) ಮತ್ತು ಪವನ್ ಕಲ್ಯಾಣ್ ಅವರ ನಡುವೆ ನಟಿ ಸನ್ನಿ ಲಿಯೋನ್ ಹೆಸರನ್ನು ಎಳೆದು ತಂದಿರುವುದಕ್ಕೆ ಆಕೆಯ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈ ಹಿಂದೆ ಪವನ್ ಕಲ್ಯಾಣ್ ಅವರು ಮುಖ್ಯಮಂತ್ರಿ ಜಗನ್ ಮೇಲೆ ಮೌಖಿಕ ದಾಳಿ ನಡೆಸಿದ್ದರು. ಇದನ್ನೀಗ ನಟಿ ಹಾಗೂ ರಾಜಕಾರಣಿ ರೋಜಾ ಖಂಡಿಸಿದ್ದಾರೆ. ಅವರು ಇದನ್ನು ಖಂಡಿಸುವ ಭರದಲ್ಲಿ ‘ಪವನ್ ಕಲ್ಯಾಣ್ ಮೌಲ್ಯಗಳ ಬಗ್ಗೆ ಮಾತನಾಡುವುದೂ ಒಂದೇ, ಸನ್ನಿ ಲಿಯೋನ್ ನಮಗೆ ವೇದಗಳನ್ನು ಕಲಿಸುವುದೂ ಒಂದೇ’ ಎಂದು ಟೀಕೆ ಮಾಡಿದ್ದಾರೆ. 'ಸಂಸ್ಕಾರದ ಬಗ್ಗೆ ಪವನ್ ಕಲ್ಯಾಣ್ ಮಾತನಾಡುವುದು ನೋಡುತ್ತಿದ್ದರೆ ಸನ್ನಿ ಲಿಯೋನ್ ಬಾಯಲ್ಲಿ ವೇದಗಳನ್ನು ಕೇಳಿದಂತಿದೆ' ಎಂದಿದ್ದಾರೆ. ಇದು ಬಹಳ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಖುದ್ದು ನಟಿಯಾಗಿರುವ ರೋಜಾ, ಮತ್ತೊಬ್ಬ ಸಿನಿಮಾ ನಟಿ ಹೆಸರನ್ನು ಎಳೆದು ಈ ರೀತಿ ವ್ಯಂಗ್ಯದ ರೂಪದಲ್ಲಿ ಎಳೆದು ತಂದಿರುವುದು ಸರಿಯಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ನಟಿ ರೋಜಾ ಕೂಡ ಈ ಹಿಂದೆ ಹಾಟ್ ಸೀನ್ಗಳಲ್ಲಿ ಕಾಣಿಸಿಕೊಂಡದ್ದು ಮರೆತಂದಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ನೀನು ಕೂಡ ಒಂದು ಕಾಲದಲ್ಲಿ ಎಷ್ಟು ಹಾಟ್ ಆಗಿ ನಟಿಸುತ್ತಿದ್ದೆ ಗೊತ್ತಾ? ಈಗ ಸನ್ನಿ ಲಿಯೋನ್ ಬಗ್ಗೆ ಮಾತನಾಡುತ್ತೀಯಾ? ಎಂದು ಏಕವಚನದಲ್ಲಿಯೇ ಕಮೆಂಟ್ ಮಾಡುತ್ತಿದ್ದಾರೆ. ಹಿಂದೊಮ್ಮೆ ಮಾದಕ ನಟಿ ಎಂದು ಗುರುತಿಸಿಕೊಂಡಿರುವ ನೀವು ಸನ್ನಿ ಲಿಯೋನ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಸಾಲದು ಎಂಬಂತೆ, ಸನ್ನಿ ಲಿಯೋನ್ ಹೆಸರಿನ ಒಂದು ಖಾತೆಯಿಂದ ಟ್ವೀಟ್ (Tweet) ಒಂದು ವೈರಲ್ ಆಗುತ್ತಿದೆ. 'ನಿಜ ನಾನು ಪೋರ್ನ್‌ಸ್ಟಾರ್ ಆಗಿದ್ದೆ ಮತ್ತು ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನಗೆ ಏನು ಮಾಡಬೇಕು ಅನಿಸಿತೋ ಅದನ್ನು ನಾನು ಬಹಿರಂಗವಾಗಿ ಮಾಡಿದ್ದೇನೆ. ನನಗೆ ಹಾಗೂ ನಿಮಗೆ ಇರುವ ವ್ಯತ್ಯಾಸ ಏನು ಎಂದರೆ ನಾನು ಆ ಇಂಡಸ್ಟ್ರಿಯನ್ನು ಬಿಟ್ಟೆ, ಆದರೆ ನೀವು ಬಿಡಲಿಲ್ಲ' ಎಂದಿದ್ದಾರೆ. ಆದರೆ ಉತ್ತರ ನೀಡಿರುವ ಖಾತೆ ಸನ್ನಿ ಲಿಯೋನ್ ಅವರದ್ದು ಅಲ್ಲ. ಅದರಲ್ಲಿ ಬ್ಲೂ ಟಿಕ್ ಇಲ್ಲ. ಫೇಕ್ ಅಕೌಂಟ್ ಎನ್ನಲಾಗುತ್ತಿದ್ದರೂ, ಉತ್ತರ ಮಾತ್ರ ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ ಆಕೆಯ ಫ್ಯಾನ್ಸ್.
Pawan Kalyan ಇನ್ಸ್ಟಾದಲ್ಲಿ ಮೊದಲ ಪೋಸ್ಟ್ ಶೇರ್- ನಾಲ್ವರು ಕನ್ನಡಿಗರಿಗೆ ವಿಶೇಷ ಸ್ಥಾನ