ಮೈಸೂರು(ನ.17): ಸಿದ್ದರಾಮಯ್ಯ ಅವರ ಬಂಡವಾಳ ಬಿಚ್ಚುತ್ತೇನೆ ಎಂದು ಎಂಟಿಬಿ ನಾಗರಾಜ್ ನೀಡಿರುವ ಹೆಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರ ಬಂಡವಾಳ ಬಿಚ್ಚುತ್ತೇನೆಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಮಾತಿನ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, 30 ವರ್ಷದಿಂದ ಬಿಚ್ಚದ ಬಂಡವಾಳವನ್ನ ಈಗ ಬಿಚ್ಚುತ್ತಾರಂತಾ..? ಅಂದಿನಿಂದ ಆಗದ್ದು ಈಗ ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ: ಟ್ರಾಫಿಕ್ ಪೊಲೀಸ್‌ ಮೇಲೆ ವಾಹನ ಚಾಲಕನಿಂದ ಹಲ್ಲೆ.

ಅವರೆಲ್ಲ ಅನರ್ಹರಾಗಿ ಹತಾಶರಾಗಿದ್ದಾರೆ. ಎಲ್ಲರು ಕೋರ್ಟ್‌ನಲ್ಲೇ ಅನರ್ಹರಾಗುವಂತೆ ಮಾಡಿದ್ದೀನಲ್ಲ. ಅದಕ್ಕೆ ಏನೇನೋ ಮಾತಾಡ್ತಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಹೇಳಿದ್ದಾರೆ.

ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡ್ತಿವಿ ಎಂಬ ಅನರ್ಹರ ಹೇಳಿಕೆ ವಿಚಾರವಾಗಿ ಉತ್ತರಿಸಿ, ಮಾನ ಮರ್ಯಾದೆ ಇದ್ದಿದ್ರೆ ಆ ಮಾತು ಹೇಳುತ್ತಿದ್ದರಾ..? ಕೋರ್ಟ್‌ನಲ್ಲಿಯೇ ಅನರ್ಹರು ಅಂತ ಹಣೆಪಟ್ಟಿ ಕಟ್ಟುಕೊಂಡು ಬಂದಿದ್ದಾರೆ. ಈಗ ಗೆದ್ದು ಮಂತ್ರಿ ಆಗಿ ಕ್ಷೇತ್ರ ಅಭಿವೃದ್ಧಿ ಮಾಡ್ತಾರಾ..? ಇದೆಲ್ಲ ಚುನಾವಣೆಗೆ ಮಾತ್ರ ಮಾತನಾಡೋ ಮಾತುಗಳು ಎಂದು ವ್ಯಂಗ್ಯ ಮಾಡಿದ್ದಾರೆ.

ಬಡವರ ಮನೆ ನಿರ್ಮಾಣಕ್ಕೆ ರಾಮದಾಸ್‌ ಅಡ್ಡಿ: ಆರೋಪ

ಎಚ್‌.ವಿಶ್ವನಾಥ್ ಸಹ ಚುನಾವಣೆಗೋಸ್ಕರ ಜಿಲ್ಲೆಯನ್ನು ಇಬ್ಭಾಗ ಮಾಡುವ ಮಾತು ಆಡುತ್ತಿದ್ದಾರೆ. 30 ವರ್ಷ ಕಾಂಗ್ರೆಸ್‌ನಲ್ಲಿ ಈ ಮಾತು ಯಾಕೆ ಹೇಳಿಲ್ಲ. ಕಳೆದ ವರ್ಷ ಜೆಡಿಎಸ್‌‌ನಲ್ಲಿ ಇದ್ದಾಗ ಯಾಕೆ ಹೇಳಿಲ್ಲ. ಅನರ್ಹರಾಗಿ ಗೆಲ್ಲೋಕೆ ಆಗುವುದಿಲ್ಲವಲ್ಲ. ಅದಕ್ಕೆ ಹುಣಸೂರನ್ನ ಜಿಲ್ಲೆ ಮಾಡ್ತಿನಿ ಅಂತಿದ್ದಾರೆ. ಇದೆಲ್ಲ ಚುನಾವಣೆ ಗಿಮಿಕ್. ಈ ಗಿಮಿಕ್ ಉಪಚುನಾವಣೆಯಲ್ಲಿ ವರ್ಕ್ ಆಗೋದಿಲ್ಲ ಎಂದಿದ್ದಾರೆ.

ರೇವಣ್ಣ ವಾಸ್ತುಪ್ರಕಾರ... ಒಳಹೋದವರನ್ನು ಹೊರಗೆ ಕರೆಸಿದ್ದು ಈ ಥರ!