ಚಾಮುಂಡಿಬೆಟ್ಟದ ವ್ಯೂವ್‌ ಪಾಯಿಂಟ್‌- ನಂದಿ ಬೆಟ್ಟಕ್ಕೆ ಹೋಗುವ ದಾರಿ ಮಳೆಯಿಂದಾಗಿ ಕುಸಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಮಂಗಳವಾರವಷ್ಟೇ ರಸ್ತೆ ವಿಭಜಕ ಕುಸಿದಿತ್ತು. ಬುಧವಾರ ಮತ್ತೆ ಮಳೆಯಾದ್ದರಿಂದ ರಸ್ತೆಯೂ ಮತ್ತಷ್ಟುಕುಸಿದಿದೆ.

ಮೈಸೂರು(ಅ.24): ಚಾಮುಂಡಿಬೆಟ್ಟದ ವ್ಯೂವ್‌ ಪಾಯಿಂಟ್‌- ನಂದಿ ಬೆಟ್ಟಕ್ಕೆ ಹೋಗುವ ದಾರಿ ಮಳೆಯಿಂದಾಗಿ ಕುಸಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಬಂದ್‌ ಮಾಡಲಾಗಿದೆ.

ಮಂಗಳವಾರವಷ್ಟೇ ರಸ್ತೆ ವಿಭಜಕ ಕುಸಿದಿತ್ತು. ಬುಧವಾರ ಮತ್ತೆ ಮಳೆಯಾದ್ದರಿಂದ ರಸ್ತೆಯೂ ಮತ್ತಷ್ಟುಕುಸಿದಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವುದರಿಂದ ಅಪಾಯ ಸಂಭವಿಸಬಹುದು ಎಂದು ಮುನ್ನಚ್ಚರಿಕೆ ಕ್ರಮವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಬುಧವಾರ ಲೋಕಪಯೋಗಿ ಇಲಾಖೆ ಇಇ ವಿನಯ್‌ಕುಮಾರ್‌ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಶಿರಾ ತಾಲೂಕಿನ ಚೆಕ್‌ಡ್ಯಾಂ, ಬ್ಯಾರೇಜ್‌ಗಳು ಭರ್ತಿ

ಬಳಿಕ ಮಾತನಾಡಿದ ವಿನಯ್‌ಕುಮಾರ್‌, ತಂತ್ರಜ್ಞಾನ ಬಳಸಿಕೊಂಡು ಆದಷ್ಟುಬೇಗ ರಸ್ತೆ ರಿಪೇರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್‌ ಹಾಕಲಾಗುವುದು. ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೂ ಯಾವುದೇ ವಾಹನ ಸಂಚರಿಸದಂತೆ ಕ್ರಮ ಕೈಗೊಳ್ಳಲಾಗಿದೆ. 15 ದಿನಗಳೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ. ಪರಿಶೀಲಿಸುವರು.

ಚಾಮುಂಡಿಬೆಟ್ಟದಲ್ಲಿ ಮಿನಿ ಜಲಪಾತ

ಮೈಸೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯು ಬುಧವಾರವೂ ಮುಂದುವರೆದಿದೆ. ಈ ನಡುವೆ ಚಾಮುಂಡಿಬೆಟ್ಟದಲ್ಲಿ ಮಿನಿ ಜಲಪಾತವೊಂದು ಹರಿಯುತ್ತಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಚಾಮುಂಡಿಬೆಟ್ಟದ ತುತ್ತತುದಿಯಲ್ಲಿ ಈ ಜಲಪಾತ ಹರಿಯುತ್ತಿದೆ. ಬುಧವಾರ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಜಲಪಾತದ ಬಳಿ ಬಂದು ಸಂಭ್ರಮಿಸಿ, ಸೆಲ್ಫಿ ತೆಗೆದುಕೊಂಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸಿಗೆ ಬಿಗ್ ಶಾಕ್ : ಸಿದ್ದರಾಮಯ್ಯ ಆಪ್ತ ಬಿಜೆಪಿಗೆ