ಮೈಸೂರು(ನ.14): ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದೆ. ಸಾಂಸ್ಕೃತಿಕ ನಗರಿಯಿಂದ ಚೆನ್ನೈಗೆ ಹೊಸ ವಿಮಾನ ಸೇರ್ಪಡೆಯಾಗಿದೆ. ಈ ಮೂಲಕ ಈ ಎರಡು ನಗರಗಳ ನಡುವಿನ ಸಂಪರ್ಕ ಇನ್ನಷ್ಟು ಸರಳವಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಿಂದ ಚೆನ್ನೈಗೆ ಹೊಸ ವಿಮಾನ ಪ್ರಯಾಣಿಸಲಿದೆ.

ನವೆಂಬರ್ 15.11.2019ರಿಂದ ವಿಮಾನ ಸೇವೆ ಆರಂಭವಾಗಲಿದ್ದು, ಮೈಸೂರಿನಿಂದ ಬೆಳಗ್ಗೆ 6.50ಕ್ಕೆ ಪ್ರಯಾಣ ಆರಂಭಿಸಲಿದೆ. ಚೆನ್ನೈಗೆ 8.10ಕ್ಕೆ ತಲುಪಲಿದೆ. ಮರಳಿ ಚೆನ್ನೈನಿಂದ 8.40ರಿಂದ ಹೊರಟು ಮೈಸೂರಿಗೆ 10 ಗಂಟೆಗೆ ತಲುಪಲಿದೆ. 

ಮೈಸೂರು ಏರ್‌ಪೋರ್ಟ್ ಅಧಿಕೃತ ಟ್ವಿಟರ್ ಖಾತೆಯಿಂದ ಈ ಬಗ್ಗೆ ಟ್ವೀಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ಹೊಸದಾಗಿ ಆರಂಭವಾಗಲಿರುವ ಟ್ರುಜೆಟ್ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದಿಲ್ಲಿ-ಹುಬ್ಬಳ್ಳಿ ಸ್ಟಾರ್‌ಏರ್‌ ವಿಮಾನ ಸೇವೆ