ನವದೆಹಲಿ [ನ.06] : ದೆಹಲಿ ಹೊರವಲಯದ ಹಿಂಡನ್‌ ವಿಮಾನ ನಿಲ್ದಾಣ ಮತ್ತು ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಡುವೆ ಸ್ಟಾರ್‌ಏರ್‌ ಸಂಸ್ಥೆಯ ವಿಮಾನ ಸೇವೆ ಇಂದಿನಿಂದ ಆರಂಭವಾಗಲಿದೆ. 

ಪ್ರಾದೇಶಿಕ ನಗರ ಕೇಂದ್ರಗಳ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಮಹತ್ವಾಕಾಂಕ್ಷೆ ಉಡಾನ್‌ ಯೋಜನೆಯಡಿ ಸ್ಟಾರ್‌ ವಿಮಾನ ಸಂಸ್ಥೆಯು ಹಿಂಡನ್‌ ಮತ್ತು ಹುಬ್ಬಳ್ಳಿ ನಗರಗಳ ನಡುವೆ 50 ಮಂದಿ ಆಸೀನರಾಗುವ ಸಾಮರ್ಥ್ಯದ ಇಆರ್‌ಜೆ145 ವಿಮಾನ ಸಂಚಾರ ಸೇವೆಯನ್ನು ಒದಗಿಸಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮೂಲಕ ದೆಹಲಿ-ಹುಬ್ಬಳ್ಳಿ ಮಾರ್ಗವು ಪ್ರಾದೇಶಿಕ ಕೇಂದ್ರಗಳ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಡಿ ಆರಂಭಿಸಲಾದ ಅತೀ ಉದ್ದದ ಮಾರ್ಗ ಎಂಬ ಕೀರ್ತಿಗೆ ಭಾಜನವಾಗಿದೆ.