ಮೈಸೂರು(ಅ.07): ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಅ. 8 ರಂದು ವಿಜಯದಶಮಿಯಂದು ನಡೆಯುವ ಜೆಟ್ಟಿಕಾಳಗಕ್ಕೆ ಜಗಜೆಟ್ಟಿಗಳು ಸಿದ್ಧವಾಗಿದ್ದಾರೆ.

ಈ ಬಾರಿ ಮೈಸೂರಿನ ಬಲರಾಂ ಜೆಟ್ಟಿ- ಚನ್ನಪಟ್ಟಣದ ನರಸಿಂಹ ಜೆಟ್ಟಿ, ಬೆಂಗಳೂರಿನ ನಾರಾಯಣ ಜೆಟ್ಟಿ- ಚಾಮರಾಜನಗರದ ಗಿರೀಶ್‌ ಜೆಟ್ಟಿಸೆಣಸಾಡಲಿದ್ದಾರೆ. ಅಂದು ಅ. 8ರ ಬೆಳಗ್ಗೆ 10.45ಕ್ಕೆ ನಡೆಯುವ ಶುಭ ಲಗ್ನದಲ್ಲಿ ಜೆಟ್ಟಿಕಾಳಗ ಆರಂಭವಾಗಲಿದ್ದು, ದಶವಂದಿ ಟೈಗರ್‌ ಬಾಲಾಜಿ ಜೆಟ್ಟಿ, ದಶವಂದಿ ಶ್ರೀನಿವಾಸ ಜೆಟ್ಟಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

'ಯಡಿಯೂರಪ್ಪನವರೇ ಕುಗ್ಗದಿರಿ, ಅಂಜದಿರಿ'..! ಸಿಎಂಗೆ ಸ್ವಾಮೀಜಿ ಪತ್ರ

ಮೈಸೂರಿನ ಅರಸರು ವಿಜಯದಶಮಿಯ ದಿನದಂದು ವಜ್ರಮುಷ್ಠಿ ಕಾಳಗ ನಡೆಸುತ್ತಿದ್ದರು. ಹಳೇ ಮೈಸೂರು ಭಾಗದಲ್ಲಿ ನೆಲೆಸಿರುವ ಜೆಟ್ಟಿಜನಾಂಗದವರು ಈ ಸಾಹಸ ಕ್ರೀಡೆಯಲ್ಲಿ ಸಿದ್ಧಹಸ್ತರಾಗಿದ್ದು, ಪ್ರತಿ ವರ್ಷದ ವಿಜಯದಶಮಿಯಂದು ಅರಮನೆಯ ಕಲ್ಯಾಣ ಮಂಟಪದ ಮುಂಭಾಗವಿರುವ ಕರಿಕಲ್ಲು ತೊಟ್ಟಿಯ ಮಟ್ಟಿಯಲ್ಲಿ ಕಾಳಗ ನಡೆಸಿ ರಾಜವಂಶಸ್ಥರ ಮುಂದೆ ತಮ್ಮ ಕಲೆ ಪ್ರದರ್ಶಿಸುವ ಛಾತಿಯುಳ್ಳವರಾಗಿದ್ದಾರೆ.

ಜಟ್ಟಿಜನಾಂಗದ ಮೂಲಪುರುಷ ದೇವಮಲ್ಲಾಚಾರ್ಯ, ಆತ ಬ್ರಹ್ಮನ ಮಾನಸ ಪುತ್ರನೆಂದು ನಂಬಲಾಗಿದ್ದು, ದೇವತೆಗಳಿಗೆ ಕಾಟ ಕೊಡುತ್ತಿದ್ದ ವಜ್ರದಂತ ಎಂಬ ರಾಕ್ಷಸನ ಸಂಹಾರಕ್ಕೆ ಬ್ರಹ್ಮದೇವ ಈ ದೇವಮಲ್ಲಾಚಾರ್ಯರನ್ನು ಸೃಷ್ಟಿಮಾಡಿ ಕಳುಹಿಸಿದ ಎನ್ನುತ್ತದೆ ಇತಿಹಾಸ. ಆ ರಾಕ್ಷಸನ ಹಲ್ಲುಗಳು ವಜ್ರದ್ದಾಗಿರುತ್ತದೆ. ಆತನನನ್ನು ದೇವಮಲ್ಲಾಚಾರ್ಯರು ಬರಿಗೈಲಿ ಅಂದರೆ ಮುಷ್ಠಿಯಲ್ಲಿ ಕೊಂದು ಹಾಕಿದರಂತೆ.

ನೀವೆಲ್ಲಾ ಏನ್ ಕುರಿಗಳಾ..? ಗೂಡ್ಸ್‌ ಚಾಲಕರಿಗೆ RTO ಇನ್ಸ್‌ಪೆಕ್ಟರ್‌ ಕ್ಲಾಸ್

ಬೋಳಿಸಿದ ತಲೆಯೊಂದಿಗೆ ಲಂಗೋಟಿ ಧರಿಸಿ, ಹಣೆಗೆ ಮೂರು ಹನುಮ ನಾಮ ಹಾಕಿ, ಬಲ ಕೈಗೆ ಆಯುಧ ಸುತ್ತಿಕೊಂಡು ಕಣಕ್ಕಿಳಿಯುವ ಈ ಕುಸ್ತಿಪಟುಗಳು ಅಕ್ಷರಶಃ ರಕ್ತ ಚಿಮ್ಮುವ ತನಕ ಕಾಳಗ ನಡೆಸುತ್ತಾರೆ. ಒಬ್ಬರಿಗೊಬ್ಬರು ಪರಿಚಿತರಾಗಿದ್ದರು ಅಖಾಡದಲ್ಲಿ ಮಾತ್ರ ಖಡಕ್‌ ವೈರಿಗಳಂತೆ ಕಾದಾಡುತ್ತಾರೆ. ಹಿಂದೆ ರಕ್ತ ಚಿಮ್ಮಿದರು ಪ್ರತಿ ಸ್ಪರ್ಧಿ ಸೋಲುವ ತನಕ ಕಾಳಗ ನಡೆಸಲಾಗುತ್ತಿತ್ತು. ಬಳಿಕ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕೇವಲ ರಕ್ತ ಕಾಣಿಸಿಕೊಂಡ ತಕ್ಷಣ ಕಾಳಗ ನಿಲ್ಲಿಸುವಂತೆ ಸೂಚಿಸಿದ್ದರಿಂದ ಸಾಂಕೇತಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ

ಅ. 8 ರಂದು ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆನೆ ಬಾಗಿಲ ಮೂಲಕ ಆಗಮಿಸಲಿದೆ. 10 ಗಂಟೆಗೆ ಉತ್ತರ ಪೂಜೆ ಮತ್ತು ಖಾಸ ಆಯುಧಗಳಿಗೆ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸುವರು. ಬೆಳಗ್ಗೆ 10.45ರ ಸುಮಾರಿಗೆ ವಜ್ರಮುಷ್ಠಿ ಕಾಳಗ ನಡೆದ ಬಳಿಕ 11.05ಕ್ಕೆ ಖಾಸ ಆಯುಧಗಳೊಡನೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ ಉತ್ತರ ಪೂಜೆ ನೆರವೇರಿಸಿ, ವಿಜಯಯಾತ್ರೆ ಕೈಗೊಳ್ಳುವರು.

-ಉತ್ತನಹಳ್ಳಿ ಮಹದೇವ/ ಮಹೇಂದ್ರ ದೇವನೂರು