ಮೈಸೂರು(ನ.16): ಎಚ್‌. ವಿಶ್ವನಾಥ್ ಶಾಸಕನಾಗಿ ಜಿಲ್ಲೆಗೆ ಮಸಿ ಬಳಿದಿದ್ದು ಸಾಕು. ಇನ್ನು ಮಂತ್ರಿಯಾಗೊ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ ಎಂದು ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಎಚ್. ವಿಶ್ವನಾಥ್ ಮತ್ತೊಮ್ಮೆ ಗೆದ್ದರೆ ತಾಲೂಕನ್ನೇ ಮಾರಿಬಿಟ್ಟು ಹೋಗೋ ಪ್ಲಾನ್ ಇದೆ. ಶಾಸಕರನ್ನಾಗಿ ಮಾಡಿದ್ದಕ್ಕೆ ಹುಣಸೂರಿಗೆ ಕಪ್ಪು ಮಸಿ ಬಳಿದಿದ್ದು ಸಾಕು. ಮಂತ್ರಿಯಾಗಿ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್‌ನವರಿಗೆ ಸ್ಟ್ಯಾಂಡೇ ಇಲ್ಲ: ಸಿದ್ದರಾಮಯ್ಯ ಗೇಲಿ

ಹುಣಸೂರಿನಲ್ಲಿ ಯೋಗೇಶ್ವರ್ ಹೆಸರಿನಲ್ಲಿ ಸಿಕ್ಕಿರುವ ಸೀರೆಗಳ ಹಿಂದೆ ವಿಶ್ವನಾಥ್ ಕೈವಾಡವಿದೆ. ಯೋಗೇಶ್ವರ್ ಪೋಟೋ ಬದಲು ವಿಶ್ವನಾಥ್ ಪೋಟೋ ಅಂಟಿಸುವ ಸಾಧ್ಯತೆ ಇತ್ತು. ಇಂತಹ ನೂರಾರು ಅಕ್ರಮಗಳಿಗೆ ಹುಣಸೂರಿನಲ್ಲಿ ಸಿದ್ದತೆಯಾಗಿದೆ ಎಂದು ಆರೋಪಿಸಿದ್ದಾರೆ.

ಉಪಚುನಾವಣೆಗಳಲ್ಲಿ ಇಂತಹ ಅಕ್ರಮ ಎಲ್ಲೆ ಮೀರುತ್ತದೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ ಎಂದು ಮೈಸೂರಿನಲ್ಲಿ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ