ಮೈಸೂರು(ನ.16): ಜೆಡಿಎಸ್‌ ಬಿಜೆಪಿಗೆ ಅನುಕೂಲ ಮಾಡಿಕೊಲಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್‌ಗೆ ಸ್ಟ್ಯಾಂಡೇ ಇಲ್ಲ ಎಂದು ಗೇಲಿ ಮಾಡಿದ್ದಾರೆ. ಜೆಡಿಎಸ್‌ ವಿಚಾರ ಹೇಳುತ್ತಿದ್ದಂತೆಯೇ ನಗುತ್ತ ಅಪಹಾಸ್ಯ ಮಾಡಿದ ಸಿದ್ದರಾಮಯ್ಯ ನಗುತ್ತಲೇ ನಿರ್ಗಮಿಸಿದ್ದಾರೆ.

ಮೈಸೂರಿನ ಹುಣಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್- ಬಿಜೆಪಿಗೆ ಅನುಕೂಲ ಮಾಡೋ ವಿಚಾರ‌ವಾಗಿ ಪ್ರಶ್ನೆ ಕೇಳುತ್ತಿದ್ದಂತೆಯೇ ಅಪಹಾಸ್ಯ ಮಾಡಿದ್ಧಾರೆ. ಜೆಡಿಎಸ್ ರಾಜಕೀಯ ನಡೆ ಬಗ್ಗೆ ಸಿದ್ದರಾಮಯ್ಯ ಗೇಲಿ ಮಾಡಿದ್ದಾರೆ.

ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ

ಜೆಡಿಎಸ್ ವಿಚಾರ ಪ್ರಸ್ತಾಪವಾಗುತ್ತಲ್ಲೇ ನಗುತ್ತ ಅಪಹಾಸ್ಯ ಮಾಡಿದ ಸಿದ್ದರಾಮಯ್ಯ ಜೆಡಿಎಸ್‌ನವರಿಗೆ ಏನ್ ಸ್ಟ್ಯಾಂಡ್ ಇದೆ ? ಜೆಡಿಎಸ್‌ನವರಿಗೆ ಸ್ಟ್ಯಾಂಡೇ ಇಲ್ಲ ಎಂದಿದ್ದಾರೆ. ಮೊದಲು ಬಿಜೆಪಿ 8 ಸ್ಥಾನ ಗೆಲ್ಲಲಿ, ಮುಂದೆ ನೋಡೊಣ ಎಂದು ಹೇಳಿದ ಅವರು ನಗುತ್ತಲ್ಲೇ ನಿರ್ಗಮಿಸಿದ್ದಾರೆ.

ಹುಣಸೂರಿನಲ್ಲಿ ಸಿ. ಪಿ. ಯೋಗೇಶ್ವರ್ ಭಾವಚಿತ್ರದ ಸೀರೆ ಸಿಕ್ಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ಹುಣಸೂರು ಅಭ್ಯರ್ಥಿ ಆಗ್ತಿನಿ ಅಂತ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ರು. ಇಂತವರೆಲ್ಲ ಚುನಾವಣೆಯಲ್ಲಿ ಗೆದ್ದು ಬಂದ್ರೆ‌ ಜನರ ಸೇವೆ ಮಾಡ್ತಾರಾ..? ಲೂಟಿ ಮಾಡ್ತಾರೆ. ಯಡಿಯೂರಪ್ಪ ಪಕ್ಷಕ್ಕೆ ಬಂದವರ ಎಲ್ಲರ ಭರವಸೆ ಈಡೇರಿಸ್ತಿನಿ ಅಂತ ಹೇಳಿದ್ದಾರೆ‌. ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡ್ತಿನಿ ಅಂತ ಹೇಳಿದ್ದಾರೆ‌. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದಿದ್ದಾರೆ.

ಎಂಟಿಬಿ ಆಸ್ತಿ 18 ತಿಂಗಳಲ್ಲಿ 180 ಕೋಟಿ ರು. ಹೆಚ್ಚಳ!

ಒಬ್ಬ ಮುಖ್ಯಮಂತ್ರಿಯಾಗಿ ನೀತಿ ಸಂಹಿತೆ ಫಾಲಿಸದವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿರುವ ಅವರು, ಇಂತವರೆಲ್ಲ ರಾಜ್ಯದ ಮುಖ್ಯಮಂತ್ರಿ ಆದ್ರೆ ಅಭಿವೃದ್ಧಿ ಆಗುತ್ತದಾ..? ಉಪಚುನಾವಣೆ ನಂತರ ರಾಜ್ಯ ಸರ್ಕಾರಕ್ಕೆ ಸಂಕಷ್ಟ‌ ಇದೆ. ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗೆಲ್ಲಲ್ಲ ಎಂದು ಹೇಳಿದ್ದಾರೆ.

‘ಮೋದಿ ಚೋರ್‌ ಹೈ’ ಎಂದ ಆನಂದ್‌ಗೇಕೆ ಟಿಕೆಟ್‌?: ಬಿಜೆಪಿಯಲ್ಲಿ ಗದ್ದಲ