ಮೈಸೂರು(ನ.08): ಜಾರಿ ನಿರ್ದೇಶನಾಲಯದ ವಿಚಾರಣೆ ಬಗ್ಗೆ ಸ್ವತಃ ಡಿ. ಕೆ. ಶಿವಕುಮಾರ್ ಅವರೇ ಮಾತನಾಡಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಮಠದಲ್ಲಿ ಸಾರಾ ಮಹೆಶ್ ಜೊತೆ ಮಾತನಾಡುವ ಸಂದರ್ಭ ಡಿ. ಕೆ. ಶಿವಕುಮಾರ್ ಈ ವಿಚಾರ ಬಾಯ್ಬಿಟ್ಟಿದ್ದಾರೆ.

ಆದಿ ಚುಂಚನಗಿರಿ ಮಠದಲ್ಲಿ ಸಾರಾ ಮಹೇಶ್ ಜೊತೆಗೆ ಮಾತನಾಡುವಾಗ ಇಡಿ ತನಿಖೆ ವಿಚಾರವಾಗಿ ಡಿಕೆಶಿ ಮಾತನಾಡಿದ್ದಾರೆ. ಬಂಗಾರಪ್ಪ ನನಗೆ ಒಂದು ಸೈಟ್ ಕೊಟ್ಟಿದ್ರು. ಆಗ ಅದು ಇಂದು ಲಕ್ಷ ಬೆಲೆಯದ್ದು,  ಈಗ ಅದರ ಬೆಲೆ 4 ಕೋಟಿ ಆಗಿದೆ. ಹಾಗಾದ್ರೆ ನಾನು ಅಫಿಡೆವಿಟ್‌ನಲ್ಲಿ ಯಾವ ಬೆಲೆ ಹಾಕಬೇಕು ಹೇಳಿ ಎಂದು ಸಾರಾ ಮಹೇಶ್‌ಗೆ ಪ್ರಶ್ನಿಸಿದ್ದಾರೆ.

ಆಸ್ತಿ ಮೌಲ್ಯ ಜಾಸ್ತಿ ಆಗಿದ್ದು ಏಕೆ..?

ತಮ್ಮ ಆಸ್ತಿಯ ಮೌಲ್ಯ ಹೇಗೆ ಹೆಚ್ಚಾಯಿತು ಎಂಬುದನ್ನು ಡಿಕೆಶಿ ಹೇಳಿದ್ದಾರೆ. ಬಂಗಾರಪ್ಪ ಅವರು ಡಿ. ಕೆ. ಶಿವಕುಮಾರ್‌ಗೆ ನೀಡಿದ ಎನ್ನಲಾದ ಸೈಟ್‌ನ ಬೆಲೆ ಹೆಚ್ಚಾಗಿರುವುದೇ ಡಿಕೆಶಿ ಆಸ್ತಿ ಮೌಲ್ಯ ಹೆಚ್ಚಾಗಲು ಕಾರಣ ಎಂದು ಅವರು ಹೇಳಿದ್ದಾರೆ.

ಜೈಲಿನಲ್ಲಿದ್ದಾಗ ಮಣ್ಣನ್ನು ತಲೆಗೆ ಹಾಕ್ಕೊಳ್ತಿದ್ರಂತೆ ಡಿಕೆಶಿ..!

ಸುತ್ತೂರು ಶ್ರೀಗಳನ್ನ ಭೇಟಿ ಮಾಡಬೇಕಿತ್ತು ಅವರು ಬಂದ ಮೇಲೆ ಭೇಟಿ ಮಾಡುತ್ತೇನೆ. ಮುಂದೆ ಬಂದಾಗ ಮತ್ತೆ ಭೇಟಿ ಮಾಡುತ್ತೇನೆ. ನಾನು ಸಾ.ರಾ.ಮಹೇಶ್ ಸ್ನೇಹಿತರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅದಕ್ಕೆ ಅವರನ್ನ ಭೇಟಿ ಮಾಡಿದೆ ಎಂದಿದ್ದಾರೆ. ಸಾರಾ ಮಹೇಶ್ ಅವರ ಕ್ಷೇತ್ರದಲ್ಲಿ ಅನುದಾನ ಕಡಿತ ಆಗಿದೆ. ಅದನ್ನೆಲ್ಲ ಪಟ್ಟಿ ಮಾಡಿಸುತ್ತಿದ್ದೇನೆ. ಎಲ್ಲವನ್ನು ಪಟ್ಟಿ ಮಾಡಿಸಿ ಒಂದು ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ED ಮೇಲೆ ಸಿಡಿಮಡಿ, CBI ಮೇಲೆ ಡಿಕೆಶಿ ಒಲವು