ಮೈಸೂರು(ನ.08): ಇಡಿ ಬಗ್ಗೆ ಸಿಡಿಮಿಡಿಯಾದ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಸಿಬಿಐ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಬಿಐಯನ್ನು ಹಾಡಿ ಹೊಗಳಿದ್ದಾರೆ.

ಇಡಿ ಹೇಗೆ ಬೇಕಾದರೂ ಹೋಗಬಹುದು. ಆದರೆ ಸಿಬಿಐ ಒಂದು ಜವಬ್ದಾರಿಯುತ ಸಂಸ್ಥೆ. ಅವರು ಕಾನೂನು ಪ್ರಕಾರವೇ ನಡೆದುಕೊಳ್ಳುತ್ತದೆ. ಮೈಸೂರಿನಲ್ಲಿ ಇಡಿ ಮೇಲೆ ಕೆಂಡಕಾರಿದ ಡಿ. ಕೆ. ಶಿವಕುಮಾರ್ ಸಿಬಿಐ ಮೇಲೆ ಒಲವು ತೋರಿಸಿದ್ದಾರೆ.

ಜೈಲಿನಲ್ಲಿದ್ದಾಗ ಮಣ್ಣನ್ನು ತಲೆಗೆ ಹಾಕ್ಕೊಳ್ತಿದ್ರಂತೆ ಡಿಕೆಶಿ..!

ಸಿಬಿಐ ಯಾರ ಮಾತನ್ನೂ ಕೇಳಲ್ಲ:

ನನ್ನ ಅನೇಕ ವಿಚಾರಗಳ ಬಗ್ಗೆ ಸಿಬಿಐಗೆ ಸರ್ಕಾರ ಅನುಮತಿ ನೀಡಿದೆ. ಸಿಬಿಐ ಒಂದು ಒಳ್ಳೆ ಸಂಸ್ಥೆ. ಅದನ್ನ ಹೇಗೆ ದುರುಪಯೋಗ ಮಾಡಿಕೊಳ್ತಾರೆ ಅನ್ನೋದರ ಬಗ್ಗೆ  ನಾನು ಮಾತನಾಡುವುದಿಲ್ಲ. ಆದರೆ ಅವರು ಯಾರ ಮಾತನ್ನೂ ಕೇಳುವುದಿಲ್ಲ. ಅವರೆಲ್ಲ ನಿಯಮಾವಳಿಗಳ ಪ್ರಕಾರವೇ ಹೋಗೋದು ಎಂದಿದ್ದಾರೆ.

ಸಿಬಿಐ ಬಗ್ಗೆ ನಂಬಿಕೆ ಇದೆ:

ಸಿಬಿಐನವರು ನಿಯಮ ಮೀರಿ ತನಿಖೆ ಮಾಡುವುದಿಲ್ಲ ಎಂದು ನನಗೆ ನಂಬಿಕೆ ಇದೆ. ತನಿಖೆ ಮಾಡಲಿ, ಆದರೆ ಕಾನೂನು ಮೀರಿ ಏನು ಆಗಬಾರದು ಅನ್ನೋದು ನನ್ನ ಅಭಿಪ್ರಾಯ. ಅವರು ಕಾನೂನು ಮೀರಿ ಹೋಗೋಲ್ಲ ಅನ್ನೋ ನಂಬಿಕೆ ಇದೆ. ನಾನು ಸಿಬಿಐಗೆ ಉತ್ತರ ಕೊಡಲು ಸಿದ್ದನಿದ್ದೇನೆ. ಎಷ್ಟು ತನಿಖೆ ಆದರೂ ಆಗಲಿ. ನನ್ನ ಬಗ್ಗೆ ನನಗೆ ಸ್ಪಷ್ಟತೆ ಇರುವಾಗ ನನಗೇನು ಭಯ ಎಂದು ಹೇಳಿದ್ದಾರೆ.

ಡಿಕೆಶಿ ಇಡಿಗಾಗಲಿ, ಸಿಬಿಐಗಾಗಲಿ ಹೆದರಲ್ಲ: ಧ್ರುವನಾರಾಯಣ್