ಮೈಸೂರಿನತ್ತ ದಸರಾ ಆನೆಗಳ ಪಯಣಕ್ಕೆ ಜಿಲ್ಲಾಡಳಿತ ದಿನಾಂಕ ಘೋಷಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.

ಮೈಸೂರು (ಜ.24) ಮೈಸೂರು ದಸರಾ ತಯಾರಿಗಳು ಆರಂಭಗೊಂಡಿದೆ. ಅಕ್ಟೋಬರ್ 2ರಂದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿರುವ ಮೈಸೂರು ದಸರಾಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.ಇದೀಗ ಜಿಲ್ಲಾಡಳಿತ ಮೈಸೂರಿನತ್ತ ಗಜ ಪಯಣಕ್ಕೆ ದಿನಾಂಕ ಘೋಷಿಸಿದೆ. ಆನೆ ಶಿಬಿರಗಳಿಂದ ಮೈಸೂರಿಗೆ ಗಜ ಪಯಣ, ಆನೆಗಳ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾರ್ಯಗಳ ವೇಳಾಪಟ್ಟಿ ನೀಡಿದೆ. ಆಗಸ್ಟ್ 4 ರಂದು ಆನೆಗಳು ಕಾಡಿನಿಂದ ನಾಡಿಗೆ ಬರಲಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ. ಆಗಸ್ಟ್ 4 ರಂದು ಆನೆ ಶಿಬಿರಗಳಿಂದ ಆನೆಗಳನ್ನು ಮೈಸೂರಿಗೆ ಕರೆ ತರಲಾಗುತ್ತದೆ ಎಂದಿದ್ದಾರೆ.

ಆನೆಗಳ ಆರೋಗ್ಯ ತಪಾಸಣೆ ಪೂರ್ಣ

ಕರ್ನಾಕದ ಪ್ರಮುಖ ಆನೆ ಶಿಬಿರಗಳಿಂದ ಆನೆಗಳನ್ನು ಅಧಿಕಾರಿಗಳು ಆಯ್ಕೆ ಮಾಡಲಿದ್ದಾರೆ. ಹೀಗಾಗಿ ಇದೀಗ ಶಿಬಿರಗಳಲ್ಲಿರುವ ಆನೆಗಳ ವೈದ್ಯಕೀಯ ತಪಾಸಣೆ ಕಾರ್ಯಗಳು ಪೂರ್ಣಗೊಂಡಿದೆ. ಅಧಿಕಾರಿಗಳು ಇದೀಗ ಆನೆಗಳನ್ನು ಆಯ್ಕೆ ಮಾಡಲಿದ್ದಾರೆ. ಬಳಿಕ ಆಗಸ್ಟ್ 4 ರಂದು ಮೈಸೂರಿನತ್ತ ಗಜ ಪಯಣ ಆರಂಭಗೊಳ್ಳಲಿದೆ.

ಮೊದಲ ಹಂತದಲ್ಲಿ 9 ಆನೆಗಳು ಆಗಮನ

ಹಂತ ಹಂತವಾಗಿ ಆನೆಗಳ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಆಗಮಿಸಲಿದೆ. ಮೊದಲ ತಂಡದಲ್ಲಿ 9 ಆನೆಗಳು ಇರಲಿದೆ. 9 ಆನೆಗಳ ತಪಾಸಣೆ ನಡೆದಿದೆ. ಮೊದಲ ಹಂತದಲ್ಲಿ ಯಾವೆಲ್ಲಾ ಆನೆಗಳು ಪಯಣ ಆರಂಭಿಸಲಿದೆ ಅನ್ನೋ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

ಆನೆ ಶಿಬಿರದಲ್ಲಿರುವ ಹೆಣ್ಣು ಆನೆಗಳ ಗರ್ಭಾದಾರಣೆ ಪರೀಕ್ಷೆಗಾಗಿ ರಕ್ತಗಳ ಮಾದರಿ ಸಂಗ್ರಹಿಸಲಾಗಿದೆ. ಪ್ರೊಗೆಸ್ಟರೋನ್, ಅಲ್ಟ್ರೌ ಸೌಂಡ್ ಸ್ಕ್ಯಾನಿಂಗ್, ಹಾಗೂ ಫೆಕಾಲ್ ಮಾದರಿ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.

ಮೊದಲ ತಂಡದ ಆನೆಗಳ ಪಟ್ಟಿ.

1. ಅಭಿಮನ್ಯು, ಗಂಡು : 59 ವರ್ಷ

(ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)

2. ಪ್ರಶಾಂತ, ಗಂಡು : 53 ವರ್ಷ

(ದುಬಾರೆ ಆನೆ ಶಿಬಿರ, ಮಡಿಕೇರಿ)

3. ಭೀಮ, ಗಂಡು : 25 ವರ್ಷ

(ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)

4. ಮಹೇಂದ್ರ, ಗಂಡು : 42 ವರ್ಷ (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)

5. ಧನಂಜಯ, ಗಂಡು : 45 ವರ್ಷ (ದುಬಾರೆ ಆನೆ ಶಿಬಿರ, ಮಡಿಕೇರಿ)

6. ಕಂಜನ್, ಗಂಡು : 26 ವರ್ಷ (ದುಬಾರೆ ಆನೆ ಶಿಬಿರ, ಮಡಿಕೇರಿ)

7. ಏಕಲವ್ಯ, ಗಂಡು : 40 ವರ್ಷ (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)

8. ಕಾವೇರಿ, ಹೆಣ್ಣು : 45 ವರ್ಷ (ದುಬಾರೆ ಆನೆ ಶಿಬಿರ, ಮಡಿಕೇರಿ)

9. ಲಕ್ಷ್ಮಿ, ಹೆಣ್ಣು : 54 ವರ್ಷ (ಬಳ್ಳೆ ಆನೆ ಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ)