ಮೈಸೂರು(ಅ.23): ಕೃತಕವಾಗಿ ಕಾವು ಕೊಟ್ಟು ಮರಿ ಮಾಡುವುದು ಸುಲಭವಲ್ಲ. ಅದರಲ್ಲೂ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟು ಮರಿಗಳನ್ನು ಮಾಡುವುದು ತುಸು ಕಷ್ಟದ ಕೆಲಸವೇ.. ನಂಜನಗೂಡಿನ ಉರಗ ತಜ್ಞರೊಬ್ಬರು ಕೃತಕ ಕಾವು ಕೊಟ್ಟು ಮೊಟ್ಟೆಯಿಂದ ಯಶಸ್ವಿಯಾಗಿ ಮರಿ ಮಾಡಿಸಿದ್ದಾರೆ.

ಕೃತಕ ಕಾವಿನಿಂದ ಮೊಟ್ಟೆ ಒಡೆದು 12 ಕೇರೆ ಹಾವಿನ ಮರಿಗಳು ಹೊರ ಬಂದಿ ರುವ ಘಟನೆ ನಂಜನಗೂಡು ಪಟ್ಟಣದ ಬಳಿ ಜರುಗಿದೆ. ಸುಮಾರು ಐವತ್ತು ದಿನಗಳ ಹಿಂದೆ ಪಟ್ಟ ಣದ ಹೊರ ವಲಯದ ತೋಟದ ಮನೆ ಯೊಂದರಲ್ಲಿ ಹಾವನ್ನು ರಕ್ಷಿಸಲೆಂದು ಉರಗ ರಕ್ಷಕ ಸ್ನೇಕ್ ಚರಣ್ ಹೋದಾಗ 13 ಕೇರೆ ಹಾವಿನ ಮೊಟ್ಟೆಗಳು ಸಿಕ್ಕಿದ್ದವು.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಅವುಗಳನ್ನು ಸುರಕ್ಷಿತವಾಗಿ ತಂದು ಉರಗ ತಜ್ಞ ಪುತ್ತೂರಿನ ಡಾ.ರವೀಂದ್ರನಾಥ್ ಐತಾಳ ಅವರ ಮಾರ್ಗ ದರ್ಶನದಲ್ಲಿ 52 ದಿನ ಕೃತಕವಾಗಿ ಕಾವು ನೀಡಿದ್ದಾರೆ. 13 ಮೊಟ್ಟೆಗಳ ಪೈಕಿ ಈಗ 12 ಮೊಟ್ಟೆಗಳು ಯಶಸ್ವಿಯಾಗಿ ಮೊಟ್ಟೆ ಒಡೆದು ಹೊರ ಬಂದಿವೆ. ಎಲ್ಲ ಮರಿಗಳನ್ನು ಬೇಲದ ಕುಪ್ಪೆ ಅರಣ್ಯದ ಅಂಚಿಗೆ ಬಿಟ್ಟಿದ್ದಾರೆ.

ಈ ಹಿಂದೆಯು ಕೂಡ ಟ್ರಿಂಕೆಟ್ ಸ್ನೇಕ್ (ಆಭರಣ ಹಾವು), ತೋಳ ಹಾವು, ನೀರು ಹಾವಿನ ಮೊಟ್ಟೆಗೆ ಕೃತಕ ಕಾವು ನೀಡಿ ಮರಿ ಮಾಡು ವುದರಲ್ಲಿ ಇವರು ಯಶಸ್ವಿಯಾಗಿದ್ದರು. ಚರಣ್ ವೃತ್ತಿಯಲ್ಲಿ ಪಾರಂಪರಿಕ ಅಸ್ಥಿ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಉರಗ ರಕ್ಷಕರಾಗಿದ್ದಾರೆ.

ನಂಜನಗೂಡು ಸುತ್ತಮುತ್ತ ಯಾರ ಮನೆ ತೋಟಗಳಲ್ಲಿ ಹಾವು ಕಂಡು ಬಂದರು ಹಿಡಿದು ಕಾಡಿಗೆ ಬಿಡುವುದನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿದ್ದಾರೆ. ಎಲ್ಲೆ ಹಾವು ಕಂಡು ಬಂದರು ಕೊಲ್ಲ ಬೇಡಿ ನನಗೆ ಕರೆ ಮಾಡಿ ಎನ್ನುತ್ತಾರೆ ಚರಣ್, ಮೊ. 8792922265.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು