ಚಿತ್ರ ವಿಮರ್ಶೆ: ಆ ದೃಶ್ಯ

ಪ್ರತಿಯೊಬ್ಬನ ಒಳಗೂ ರಾಮ ಮತ್ತು ರಾವಣ ಇಬ್ಬರು ಇರುತ್ತಾರೆ. ಹಾಗಂತ ರಾಮ ಹೀರೋ, ರಾವಣ ವಿಲನ್ ಎಂದು ಹೇಳಲಾಗದು. ಯಾಕೆಂದರೆ ಸಮಯ, ಸಂದರ್ಭಗಳಿಂದಲೇ ಈ ಎರಡು ಮುಖಗಳು ಆಚೆ ಇಣುಕುತ್ತವೆ. ಪರಿಸ್ಥಿಗಳು ಮನಷ್ಯನನ್ನು ಖಳನಾಯಕರನ್ನಾಗಿಸುತ್ತವೆ. ಹೀಗೆ ರಾಮ ಮತ್ತು ರಾವಣನ ಥಿಯೇರಿಯನ್ನು ಒಂದು ಕ್ರೈಮ್ ಕತೆಯ ನೆರಳಲ್ಲಿ ನೋಡಿದರೆ ಹೇಗಿರುತ್ತದೆ ಎನ್ನುವ ಸಣ್ಣ ಕುತೂಹಲ ಹುಟ್ಟಿಕೊಂಡರೆ ‘ಆ ದೃಶ್ಯ’ ಎಂಬ ಸಿನಿಮಾ ಬೇರೆಯದ್ದೇ ಆದ ರೀತಿಯಲ್ಲಿ ಅರ್ಥವಾಗಬಹುದು.

 

V ravichandran Kannada movie Aa Drushya film review

ಆರ್ ಕೇಶವಮೂರ್ತಿ

ಒಂದು ಘಟನೆ, ಒಂದು ರಾತ್ರಿ, ಮೂರು ಸಾವು, ಮೂರು ಮುಖಗಳು, ಒಬ್ಬೊಬ್ಬರ ಮೂಗಿನ ನೇರಕ್ಕೂ ಒಂದೊಂದು ರೀತಿಯ ನಿರೂಪಣೆ. ಕೊನೆಯಲ್ಲಿ ಯಾರದ್ದು ಸತ್ಯ, ಯಾರದ್ದು ಸುಳ್ಳು... ಕಲ್ಪನೆಯನ್ನೇ ನಂಬಿ ಕೂತ ಪ್ರೇಕ್ಷಕನಿಗೆ ರಾಮ ಅನಿಸಿಕೊಂಡವನೇ, ರಾವಣ ಆಗುತ್ತಾನೆ. ಆ ರಾಮ ಕಂ ರಾವಣ ‘ನಾನೇ ವಿಲನ್, ನಾನೇ ಹೀರೋ’ ಎನ್ನುತ್ತಾನೆ. ಕನ್ನಡದ ಮಟ್ಟಿಗೆ ಹೊಸ ರೀತಿಯ ಕ್ರೈಮ್ ಥ್ರಿಲ್ಲರ್ ಸಿನಿಮಾ ಎನ್ನಬಹುದು. ನಿರ್ದೇಶಕ ಶಿವಗಣೇಶ್ ಅವರು ಮೂಲ ಚಿತ್ರಕ್ಕೆ ದಕ್ಕೆ ಬಾರದಂತೆ ಎಚ್ಚರ ವಹಿಸಿದ್ದಾರೆ.

'ಆ ದೃಶ್ಯ'ದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನರದ್ದು ಹೊಸ ಲುಕ್!

ಈ ಮೊದಲೇ ಸ್ವತಃ ರವಿಚಂದ್ರನ್ ಅವರೇ ಹೇಳಿಕೊಂಡಂತೆ ಇದು ಅವರ ರೆಗ್ಯೂಲರ್ ಸಿನಿಮಾ ಅಲ್ಲ. ‘ದೃಶ್ಯ’ ಮೆಚ್ಚಿಕೊಂಡವರಿಗೆ ಈ ‘ಆ ದೃಶ್ಯ’ವೂ ಇಷ್ಟವಾಗಬಹುದು. ಇಬ್ಬರೇ ಹುಡುಗಿಯರು ವಾಸಿಸುತ್ತಿರುವ ಮನೆ ಅದು. ಅಲ್ಲೊಂದು ಹುಟ್ಟು  ಹಬ್ಬದ ಸಂಭ್ರಮ. ಅಲ್ಲಿಗೆ ಒಬ್ಬ ಅಕ್ರಮವಾಗಿ ನುಗುತ್ತಾನೆ. ಹಾಗೆ ಹೋದವನು ಇಬ್ಬರನ್ನು ಕೊಲೆ ಮಾಡುತ್ತಾನೆ. ಹೊರಗೆ ಜೋರು ಮಳೆ. ಇಲ್ಲೂ ಎರಡು ಕೊಲೆ ಆಗುತ್ತವೆ. ಇಲ್ಲಿಂದ ಕತೆ ಶುರುವಾಗುತ್ತದೆ. ಇಷ್ಟಕ್ಕೂ ಆ ಮನೆಯಲ್ಲಿ ಎರಡು ಕೊಲೆ ನಡೆಯಿತಾ, ಹೊರಗೆ ಸಾವು ಕಂಡವರು
ಯಾರು ಎಂಬಿತ್ಯಾದಿ ಪ್ರಶ್ನೆಗಳ ಸುತ್ತ ತನಿಖೆ ಆರಂಭವಾಗುತ್ತದೆ.

ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

ಈ ತನಿಖೆಯಲ್ಲಿ ನ್ಯೂಸ್ ಪೇಪರ್ ಹಂಚುವ ವ್ಯಕ್ತಿ, ಮೂವರು ಪರೋಡಿ ಹುಡುಗರು, ಇಬ್ಬರು ಹುಡುಗಿಯರು, ಒಬ್ಬ ಪ್ರೇಮಿ, ಮಗದೊಬ್ಬ ಕಾನಿಸ್ಟೇಬಲ್ ಪಾತ್ರಗಳು ಸೇರಿಕೊಂಡು ಕತೆಗೆ ಹೊಸ ಹೊಸ ತಿರುವು ಕೊಡುತ್ತ ಹೋಗುತ್ತವೆ. ಈ ಟ್ವಿಸ್ಟ್‌ಗಳಲ್ಲೇ ಅಂದು ರಾತ್ರಿ ನಡೆದ ಘಟನೆಯ ಹಲವು ಮುಖಗಳು ತೆರೆದುಕೊಳ್ಳುತ್ತವೆ. ಕಾಯುವವನೆ ಕೊಲೆಗಾರನನ್ನು ಕಾಪಾಡುತ್ತಿದ್ದಾನೆ, ಯಾಕೆ ಎನ್ನುವ ಕುತೂಹಲದಲ್ಲಿ ಸಿನಿಮಾ ಮುಕ್ತಾಯವಾಗುತ್ತದೆ.

ಕ್ರೇಜಿಸ್ಟಾರ್ ಪತ್ನಿಗೆ ಹುಟ್ಟುಹಬ್ಬದ ಸಂಭ್ರಮ; ಮಗನಿಂದ ಸ್ಪೆಶಲ್ ವಿಶ್! .

ಆ ಒಂದು ಘಟನೆಯ ಸುತ್ತ ಸಾಗುವ ದೃಶ್ಯಗಳಲ್ಲಿ ಪ್ರೇಕ್ಷಕ ಸಂಪೂರ್ಣವಾಗಿ ಭಾಗಿಯಾಗುತ್ತಾನೆ ಎಂದರೆ ಸ್ಕ್ರೀನ್ ಪ್ಲೇ, ಛಾಯಾಗ್ರಹಣ ಹಾಗೂ ಮೇಕಿಂಗ್‌ಗೆ ಸಲ್ಲಬೇಕಾದ ಕ್ರೇಡಿಟ್ಟು. ಜತೆಗೆ ರವಿಚಂದ್ರನ್ ಅವರು ಮತ್ತೊಂದು ಹೊಸ ರೀತಿಯ ಚಿತ್ರದಲ್ಲಿ ನಟಿಸಿದ್ದಾರೆಂಬ ಅಚ್ಚರಿ ಇವೆಲ್ಲವೂ ಚಿತ್ರವನ್ನು ನೋಡಿಸಿಕೊಂಡು ಹೋಗುವ ಗುಣವಿದೆ. ಯಶ್ ಶೆಟ್ಟಿ, ಅಚ್ಯುತ್ ಕುಮಾರ್ ಹೊರತಾಗಿ ಉಳಿದ ಬಹುತೇಕರು ಹೊಸಬರು. ಹೀಗಾಗಿ ಪೂರ್ವ ನಿರ್ಧರಿತ ಇಮೇಜ್‌ಗಳ ಹೊರತಾಗಿಯೂ ಸಿನಿಮಾ ಹತ್ತಿರವಾಗುತ್ತದೆ. 

Latest Videos
Follow Us:
Download App:
  • android
  • ios