ಇದು ಹಿಟ್ಲರನ ಕಾಲದ ಶೋಷಣೆಯನ್ನು ನೆನಪಿಸುತ್ತದೆ. ಯಾವಾಗಲೂ ಮಾಂಸ ಕಡಿಯುತ್ತ, ಮೈ ಒತ್ತಿಸಿಕೊಳ್ಳುತ್ತ ಇರುವ ವಿಲನ್‌ಗಳು. ಇವರು ಆಗಾಗ ಎದ್ದು ಬಂದು ಸಾಯುವಂತೆ ಜೀತದವರಿಗೆ ಹೊಡೆಯುತ್ತಿರುತ್ತಾರೆ. 

ಪ್ರಿಯಾ ಕೆರ್ವಾಶೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಿವಾಸಿಗಳ ಮೇಲೆ ಅಧಿಕಾರಶಾಹಿಗಳ ದೌರ್ಜನ್ಯ, ಅವರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಶೋಷಿಸುವ ಪ್ರಬಲರ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿನಲ್ಲಿ ಲೇಟೆಸ್ಟಾಗಿ ಬಂದಿರುವ ಚಿತ್ರ ‘ಕೋರ’. ಈ ಸಿನಿಮಾದಲ್ಲಿ ಕಥೆಗಿಂತ ಮೇಕಿಂಗ್‌ ಹೆಚ್ಚು ಮಾರ್ಕ್ಸ್‌ ಕೊಡಬಹುದು. ಖಳನಾಯಕನ ಅಟ್ಟಹಾಸ ಮಾಮೂಲಿಗಿಂತ ಹೆಚ್ಚೇ ಇದೆ. ಸಿನಿಮಾದ ಮೊದಲ ಭಾಗ ಕ್ರೂರ ಶೋಷಣೆಗೆ ಮೀಸಲು. ಅದೊಂದು ಸುಂದರವಾದ ಟೀ ತೋಟ. ಮೈಮೇಲೆ ಗೋಣಿತಾಟು ಹಾಕಿಕೊಂಡು ದುಡಿಯುವ ಜೀತದಾಳುಗಳು. 

ಇದು ಹಿಟ್ಲರನ ಕಾಲದ ಶೋಷಣೆಯನ್ನು ನೆನಪಿಸುತ್ತದೆ. ಯಾವಾಗಲೂ ಮಾಂಸ ಕಡಿಯುತ್ತ, ಮೈ ಒತ್ತಿಸಿಕೊಳ್ಳುತ್ತ ಇರುವ ವಿಲನ್‌ಗಳು. ಇವರು ಆಗಾಗ ಎದ್ದು ಬಂದು ಸಾಯುವಂತೆ ಜೀತದವರಿಗೆ ಹೊಡೆಯುತ್ತಿರುತ್ತಾರೆ. ಬಡ ಕೆಲಸಗಾರರ ಹಿನ್ನೆಲೆ ಎರಡನೇ ಭಾಗದಲ್ಲಿ ತೆರೆದುಕೊಳ್ಳುತ್ತದೆ. ಅಷ್ಟು ಹೊತ್ತು ಆ ಶೋಷಣೆಯನ್ನು ಪ್ರೇಕ್ಷಕ ತಡೆದುಕೊಳ್ಳಬೇಕು. ಎರಡನೇ ಭಾಗದಲ್ಲಿ ಕರಿಘಟ್ಟ ಎಂಬ ಬುಡಕಟ್ಟು ಜನರ ಊರು, ಅಲ್ಲಿನ ಜನಜೀವನ ತೆರೆದುಕೊಳ್ಳುತ್ತದೆ. ಇದಕ್ಕೆ ತುಳುನಾಡಿನ ಕೊರಗಜ್ಜನನ್ನೂ ಲಿಂಕ್‌ ಮಾಡಲಾಗಿದೆ. 

ಚಿತ್ರ: ಕೋರ
ತಾರಾಗಣ: ಸುನಾಮಿ ಕಿಟ್ಟಿ, ಪಿ ಮೂರ್ತಿ, ಮುನಿ, ಚರೀಷ್ಮಾ ಚೋಂದಮ್ಮ
ನಿರ್ದೇಶನ: ಒರಟ ಶ್ರೀ
ರೇಟಿಂಗ್‌ : 3

ನನ್ನನ್ನು ನಾಯಕನನ್ನಾಗಿ ಮಾಡಿದ ಕೋರ ತಂಡಕ್ಕೆ ಧನ್ಯವಾದ: ಸುನಾಮಿ ಕಿಟ್ಟಿ

ಕಾಡಿನ ಅಮಾಯಕರ ನಡುವೆ ಇರುವ ಮುಗ್ಧ ಹುಡುಗ ಕೋರ. ಈತ ಶೋಷಣೆಯ ವಿರುದ್ಧ ತಿರುಗಿ ಬೀಳುವ ಕಥೆಯೇ ಸಿನಿಮಾದ ಒನ್‌ಲೈನ್‌. ಸೊಗಸಾದ ಪ್ರಕೃತಿ ಮತ್ತು ಅದರೊಳಗೆ ಮನುಷ್ಯನ ವಿಕೃತಿಯನ್ನು ಜೊತೆ ಜೊತೆಯಾಗಿ ತಂದಿರುವುದು ಸಿನಿಮಾವನ್ನು ನೋಡೆಬಲ್‌ ಆಗಿಸುತ್ತದೆ. ಖಳನಟನ ವಿಜೃಂಭಣೆಯಲ್ಲಿ ನಾಯಕ ಮಂಕಾದಂತೆ ಕಂಡರೆ ಅದಕ್ಕೆ ನಿರ್ದೇಶಕರನ್ನು ಬೈಯ್ಯುವಂತಿಲ್ಲ, ಏಕೆಂದರೆ ಈ ಸಿನಿಮಾಕ್ಕೆ ಹಣ ಹಾಕಿದ ನಿರ್ಮಾಪಕರೇ ಇಲ್ಲಿ ವಿಲನ್‌!