ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಡಬ್ಬಿಂಗ್‌ಗೆ ಜೈ ಎಂದಿದ್ದಾರೆ. ಕಿಚ್ಚ ಸುದೀಪ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹುಟ್ಟು ಹಾಕಿದ ನಿರೀಕ್ಷೆ ಮುಟ್ಟುವಲ್ಲಿ ದಬಾಂಗ್ 3 ಯಶಸ್ವಿಯಾಗಿದೆ ಎನ್ನಲಾಗಿದೆ.

 

ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ ದಬಾಂಗ್ -3 ದೇಶಾದ್ಯಂತ ರಿಲೀಸ್ ಆಗಿದೆ.  ಬಾಲಿವುಡ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಲು ಬಾಯ್ 'ಚುಲ್‌ಬುಲ್ ಪಾಂಡೆ ಪೊಲೀಸ್‌ ಲುಕ್‌ಗೆ ಪ್ರೇಕ್ಷಕರು ಜೈ ಸಲ್ಲುಬಾಯ್ ಎಂದಿದ್ದಾರೆ.  ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ದಬಾಂಗ್ - 3  ಡಬ್ಬಿಂಗ್ ಆಗಿದೆ. ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ಗೆ, ರಗಡ್ ಮ್ಯಾನರಿಸಂಗೆ ಸೈ ಆಗಿದ್ದಾರೆ. ಯಾವಾಗಲೂ ಮೋಸ್ಟ್ ಹ್ಯಾಂಡ್ಸಂ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಇಲ್ಲಿ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರವನ್ನು ಹೀಗೂ ಮಾಡಬಹುದು ಎಂದು ಕಿಚ್ಚನ ಬಲ್ಲಿಸಿಂಗ್ ಪಾತ್ರ ನೋಡಿದರೆ ಗೊತ್ತಾಗುತ್ತದೆ. 

ಡಬ್ಬಿಂಗ್ ಪರ -ವಿರೋಧ ಚರ್ಚೆ ಇನ್ನೂ ಹಾಗೆಯೇ ಇದೆ. ಡಬ್ಬಿಂಗ್ ಚಿತ್ರಗಳೆಂದರೆ ಅಷ್ಟಕ್ಕಷ್ಟೇ ಎನ್ನುವ ಭಾವನೆಯಿದೆ. ಒರಿಜಿನಲ್ ಸಿನಿಮಾದಷ್ಟು ಚೆನ್ನಾಗಿ ಮೂಡಿ ಬಂದಿರುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ದಬಾಂಗ್‌ 3 ಯಲ್ಲಿ ಇದು ಸುಳ್ಳಾದಂತೆ ಕಾಣಿಸುತ್ತದೆ. ಪ್ರೇಕ್ಷಕರು ಕಿಚ್ಚ ಸುದೀಪ್ ಮೇಲೆ ನಂಬಿಕೆಯಿಟ್ಟು, ಸಲ್ಲು ಭಾಯ್- ಸುದೀಪ್ ಕಾಂಬಿನೇಶನ್ ಇದೇ ಮೊದಲ ಬಾರಿಯಾದ್ದರಿಂದ ಚೆನ್ನಾಗಿ ಇದ್ದೇ ಇರುತ್ತದೆಂದು ಥಿಯೇಟರ್‌ಗೆ ಬಂದಿದ್ದಾರೆ. ನಿರೀಕ್ಷೆ ಸುಳ್ಳಾಗಿಲ್ಲ, ಚಿತ್ರ ನೋಡಿ ಹೊರ ಬರುವಾಗ ಪ್ರೇಕ್ಷಕನ ಮುಖದಲ್ಲಿ ಮಂದಹಾಸ. ಚಿತ್ರ ಇಲ್ಲಿ ಅರ್ಧ ಗೆದ್ದಂತೆಯೇ. 

ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಲ್ಲು- ಸೋನಾಕ್ಷಿ ಸೀರೆ ರೊಮ್ಯಾನ್ಸ್‌!

ಗುರುದತ್ ಗಾಣಿಗ ಸಂಭಾಷಣೆ ಸಕತ್ ವರ್ಕೌಟ್ ಆಗಿದೆ. ಉತ್ತರ ಕರ್ನಾಟಕ, ಮಂಡ್ಯ ಭಾಷೆಯ ಪಂಚಿಂಗ್ ಡೈಲಾಗ್‌ಗಳು ಖಡಕ್ ಮಿರ್ಚಿ ಮಂಡಕ್ಕಿ ತಿಂದ ಹಾಗಾಗುತ್ತದೆ.  ಅಲ್ಲಲ್ಲಿ ಕೊಂಚ ಎಳೆದಂತೆ ಭಾಸವಾಗುತ್ತದೆ. 

ಸೆಂಟಿಮೆಂಟ್ ಸೀನ್‌ಗಳು ಸ್ವಲ್ಪ ಬೋರ್ ಹೊಡೆಸುತ್ತದೆ. ಅದನ್ನು ಕಡಿಮೆ ಮಾಡಿ ಕಥೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.  ಚಿತ್ರಕಥೆಯಲ್ಲಿ ಹೊಸದೇನು ಇಲ್ಲ. ಆದರೆ ಸಲ್ಲು ಭಾಯ್- ಸುದೀಪ್ ಕಾಂಬಿನೇಶನ್ ವರ್ಕೌಟ್ ಆಗಿದೆ. 

ಗುರುದತ್ ಗಾಣಿಕ ಸಂಭಾಷಣೆ ಪವರ್‌ಫುಲ್ ಆಗಿದೆ. ಅನೂಪ್ ಭಂಡಾರಿ ಸಾಹಿತ್ಯ ಬರೆದಿರುವ ಹಾಡುಗಳು ಕಚಗುಳಿ ಇಡುವಂತಿದೆ.  ಕಥೆಯಲ್ಲಿ ಹೊಸತನವಿಲ್ಲದಿದ್ದರೂ  ಕಿಚ್ಚ ಸುದೀಪ್‌ಗೆ ಹೈಪ್ ನೀಡಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.