ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ತೆರೆ ಮೇಲೆ ಬರಲು ಸಿದ್ಧವಾಗಿದೆ. ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ 'ದಬಾಂಗ್-3' ಭಾರೀ ನಿರೀಕ್ಷೆ ಹುಟ್ಟಿಸಿದೆ.  ಚಿತ್ರದ ಟ್ರೇಲರ್, ಟೀಸರ್, ಸುದೀಪ್ ಪೋಸ್ಟರ್ ಕುತೂಹಲ ಮೂಡಿಸಿದೆ. 

ಇದೇನಪ್ಪಾ ಡಿಂಪಲ್‌ ಹುಡುಗಿ ಈಗ ಟಾಲಿವುಡ್‌ ಬೆಡಗಿ; ಯಾರಿರ್ತಾರೆ ಸ್ಯಾಂಡಲ್‌ವುಡ್‌ನಲ್ಲಿ?

ದಬಾಂಗ್ -3 ಹಿಂದಿ ಮಾತ್ರವಲ್ಲ, ಕನ್ನಡ, ತೆಲುಗಿನಲ್ಲೂ ಬರುತ್ತಿದೆ. ಕನ್ನಡದಲ್ಲಿ ಎರಡನೇ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.  'ಸೀರೆಲಿ ಬಳುಕುತಾ ಬಂದೆ ಬಿಚ್ಚೋಲೆ ಗೌರಮ್ಮನಂತೆ..' ಎಂದು ಹಾಡು ಶುರುವಾಗುತ್ತದೆ.  ಸಲ್ಮಾನ್, ಸೋನಾಕ್ಷಿ ಕ್ಯೂಟ್ ರೊಮ್ಯಾನ್ಸ್ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. 

 

ಈ ಹಡುಗಳ ಸಾಹಿತ್ಯವನ್ನು ಅನೂಪ್ ಭಂಡಾರಿ ಬರೆದಿದ್ದಾರೆ. ಸಂಭಾಷಣೆಯನ್ನು ಗುರುದತ್ತ ಗಾಣಿಗ,  ಎ ಜೋಶಿ ಬರೆದಿದ್ದಾರೆ. 

ಕಿಚ್ಚ ಸುದೀಪ್ ಸಲ್ಮಾನ್ ಗೆ ವಿಲನ್ ಆಗಿ ಬಲ್ಲಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸಂಬರ್ 20 ರಂದು ಹಿಂದಿ, ಕನ್ನಡ ಹಾಗೂ ತೆಲುಗಿನಲ್ಲಿ ಗ್ರಾಂಡ್ ರಿಲೀಸ್ ಆಗಲಿದೆ.